ಪಾಕಿಸ್ತಾನದ ಬಹುತೇಕ ಎಲ್ಲಾ ಬ್ಯಾಂಕ್ ಗಳ ಡಾಟಾ ಹ್ಯಾಕ್

Update: 2018-11-06 16:13 GMT

ಇಸ್ಲಾಮಾಬಾದ್, ನ.6: ಪಾಕಿಸ್ತಾನದ ಬಹುತೇಕ ಎಲ್ಲಾ ಬ್ಯಾಂಕ್ ಗಳ ಡಾಟಾವನ್ನು ಹ್ಯಾಕರ್ ಗಳು ಇತ್ತೀಚೆಗೆ ನಡೆದ ಭದ್ರತಾ ಲೋಪವೊಂದರಲ್ಲಿ ಕಳವುಗೈದಿದ್ದಾರೆ ಎಂದು ಎಫ್ ಐಎ ಮುಖ್ಯಸ್ಥರು ತಿಳಿಸಿದ್ದಾರೆ.

“ಇತ್ತೀಚಿನ ವರದಿಯ ಪ್ರಕಾರ ಪಾಕಿಸ್ತಾನದ ಬಹುತೇಕ ಎಲ್ಲಾ ಬ್ಯಾಂಕ್ ಗಳ ಡಾಟಾವನ್ನು ಹ್ಯಾಕ್ ಮಾಡಲಾಗಿದೆ” ಎಂದು ಎಫ್ ಐಎ ನಿರ್ದೇಶಕ ಮುಹಮ್ಮದ್ ಶುಐಬ್ ಮಾಹಿತಿ ನೀಡಿದ್ದಾರೆ.

ಈ ಪಟ್ಟಿಯಲ್ಲಿ ದೇಶದ ಪ್ರಮುಖ ಮತ್ತು ಅತ್ಯುನ್ನತ ಬ್ಯಾಂಕ್ ಗಳೂ ಸೇರಿವೆ ಎನ್ನಲಾಗಿದೆ. ಪಾಕಿಸ್ತಾನದಿಂದ ಹೊರಗಿನವರು ಈ ಕೃತ್ಯವನ್ನೆಸಗಿದ್ದಾರೆ ಎಂದು ಶುಐಬ್ ತಿಳಿಸಿದ್ದಾರೆ. “ಜನರ ಖಾತೆಯಿಂದಲೂ ಭಾರೀ ಪ್ರಮಾಣದ ಹಣವನ್ನು ಹ್ಯಾಕರ್ಸ್ ಕದ್ದಿದ್ದಾರೆ” ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News