ದೀಪಾವಳಿ: ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ರ ‘ಹಿಂದಿ’ ಶುಭಾಶಯಕ್ಕೆ ‘ಅರೆಬಿಕ್’ನಲ್ಲಿ ಮೋದಿ ಉತ್ತರ

Update: 2018-11-08 06:33 GMT

ಹೊಸದಿಲ್ಲಿ, ನ.8: ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಯುಎಇ ಉಪಾಧ್ಯಕ್ಷ ಹಾಗು ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಯುಎಇ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತೀಯ ಜನತೆಗೆ  ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡಿ ದೀಪಾವಳಿಯ ಶುಭಾಶಯ ತಿಳಿಸಿದ್ದರು.

‘‘ಯುಎಇ ಜನತೆಯ ಪರವಾಗಿ, ನರೇಂದ್ರ ಮೋದಿ ಮತ್ತು ದೀಪಾವಳಿಯನ್ನು ಆಚರಿಸುವ ಎಲ್ಲರಿಗೂ ನಾನು ಶುಭಾಶಯ ಕೋರುತ್ತೇನೆ. ಪ್ರೀತಿ ಮತ್ತು ಭರವಸೆಯ ದೀಪನಮ್ಮೆಲ್ಲರನ್ನೂ ಬೆಳಗಿಸಲಿ’’ ಎಂದು ಅವರು ಬುಧವಾರ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅರೇಬಿಕ್  ಮತ್ತು ಇಂಗ್ಲೀಷ್ ನಲ್ಲಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿ, ದೀಪಾವಳಿಯ ಶುಭಹಾರೈಸಿದಕ್ಕಾಗಿ ಶೈಖ್ ಮುಹಮ್ಮದ್ ಬಿನ್ ರಶೀದ್ ಅವರಿಗೆ ಧನ್ಯವಾದ ಸಮರ್ಪಿಸಿ, ದೀಪಾವಳಿಯ ಶುಭ ಹಾರೈಸಿದ್ದಾರೆ. 

“ದೀಪಾವಳಿಯ ಶುಭಕೋರಿದ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ರಿಗೆ ಧನ್ಯವಾದಗಳು. ಭಾರತ-ಯುಎಇ ಸಂಬಂಧದೆಡೆಗೆ ನಿಮ್ಮ ವೈಯಕ್ತಿಕ ಬದ್ಧತೆಯು ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News