ಎಚ್-4 ಬಗ್ಗೆ ಸಾರ್ವಜನಿಕ ಅಭಿಪ್ರಾಯ: ಶ್ವೇತಭವನ

Update: 2018-11-09 17:01 GMT

ವಾಶಿಂಗ್ಟನ್, ನ. 9: ಎಚ್-4 ವೀಸಾ ಹೊಂದಿರುವವರಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಇರುವ ಅವಕಾಶವನ್ನು ಹಿಂದಕ್ಕೆ ಪಡೆಯುವ ವಿಚಾರದಲ್ಲಿ ಸಾರ್ವಜನಿಕರ ಅಭಿಪ್ರಾಯವನ್ನು ಪಡೆಯಲಾಗುವುದು ಎಂದು ಟ್ರಂಪ್ ಆಡಳಿತ ಸಂಸದರು ಮತ್ತು ಕಾರ್ಪೊರೇಟ್ ವಲಯಕ್ಕೆ ಭರವಸೆ ನೀಡಿದೆ.

ಸಾವಿರಾರು ಭಾರತೀಯರ ಮೇಲೆ ಪರಿಣಾಮ ಬೀರುವ ಈ ಪ್ರಸ್ತಾಪದ ಬಗ್ಗೆ ಸಂಸದರು ಮತ್ತು ಕಾರ್ಪೊರೇಟ್ ವಲಯ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶ್ವೇತಭವನ ಈ ಭರವಸೆ ನೀಡಿದೆ.

ಎಚ್-1ಬಿ ವೀಸಾದಾರರ ಸಂಗಾತಿಗಳಿಗೆ ಎಚ್-4 ವೀಸಾಗಳನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News