×
Ad

ಹುಲಿ ಅವನಿ ನಾಲ್ಕೈದು ದಿನಗಳಿಂದ ಉಪವಾಸವಿತ್ತು : ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖ

Update: 2018-11-09 23:27 IST

 ಮುಂಬೈ, ನ.9: 13 ಮಂದಿಯನ್ನು ಕೊಂದಿದೆ ಎಂದು ಹೇಳಲಾದ ಹೆಣ್ಣು ಹುಲಿ ಅವನಿ ವಿಪರೀತ ಆಂತರಿಕ ರಕ್ತಸ್ರಾವ ಹಾಗೂ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದೆ ಎಂದು ಹುಲಿಯ ದೇಹದ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.

ಥಾಣೆಯ ಯಾವತ್ಮಾಲ್ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಅವನಿ 13 ಮಂದಿಯನ್ನು ಹತ್ಯೆ ಮಾಡಿತ್ತು ಎನ್ನಲಾಗಿದ್ದು ನ.2ರಂದು ಅದನ್ನು ಬೊರಾಟಿ ಅರಣ್ಯ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ನಾಲ್ಕೈದು ದಿನಗಳಿಂದ ಹುಲಿ ಏನನ್ನೂ ತಿಂದಿರಲಿಲ್ಲ. ಹುಲಿಯ ಹೊಟ್ಟೆ ಹಾಗೂ ಕರುಳಿನಲ್ಲಿ ಗ್ಯಾಸ್ ಹಾಗೂ ದ್ರವ ತುಂಬಿತ್ತು ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.

ಹುಲಿಯ ಗಂಟಲಿನ ಎಡಭಾಗದಲ್ಲಿ 0.5 ಸೆ.ಮೀ. ಗಾತ್ರದ ಗಾಯ ಕಂಡುಬಂದಿದ್ದು ಇದು ಬುಲೆಟ್‌ನಿಂದ ಆಗಿರುವ ಗಾಯವಾಗಿದೆ.ಅಲ್ಲದೆ ಹುಲಿಯ ಎಡತೊಡೆಯ ಮಧ್ಯಭಾಗದಲ್ಲಿ ಈಟಿಯಂತಹ ಆಯುಧದಿಂದ ಆಗಿರುವ ಗಾಯ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ಬೆಕ್ಕಿನ ವರ್ಗಕ್ಕೆ ಸೇರಿದ ಹುಲಿಯಂತಹ ಪ್ರಾಣಿಗಳು ಒಮ್ಮೆಗೆ 25ರಿಂದ 30 ಕಿ.ಗ್ರಾಂನಷ್ಟು ಮಾಂಸ ತಿಂದರೆ ಬಳಿಕ 7 ದಿನ ಉಪವಾಸ ಇರಬಲ್ಲವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News