×
Ad

ಸೇನೆಗೆ ಮೂರು ಫಿರಂಗಿ ಗನ್ ವ್ಯವಸ್ಥೆ ಸೇರ್ಪಡೆ

Update: 2018-11-09 23:34 IST

ಮುಂಬೈ, ನ.9: ಮೂರು ಪ್ರಮುಖ ಫಿರಂಗಿ ಗನ್ ವ್ಯವಸ್ಥೆಗಳನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಭಾರತೀಯ ಸೇನೆಗೆ ಸೇರ್ಪಡೆಗೊಳಿಸಿದ್ದಾರೆ.

ಮಹಾರಾಷ್ಟ್ರದ ನಾಸಿಕ್ ಬಳಿಯ ದಿಯೊಲಾಲಿ ಅರಣ್ಯ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ777 ಅಮೆರಿಕನ್ ಅಲ್ಟ್ರಾಲೈಟ್ ಹೊವಿಟ್ಝರ್ ಫಿರಂಗಿ, ಕೆ-9 ವಜ್ರ ಸಹಿತ ಮೂರು ಫಿರಂಗಿ ವ್ಯವಸ್ಥೆ ಸೇರ್ಪಡೆಗೊಳಿಸಲಾಯಿತು. ಮೂರನೇ ವ್ಯವಸ್ಥೆ ಫಿರಂಗಿ ಗನ್‌ಗಳನ್ನು ಎಳೆದೊಯ್ಯುವ ವಾಹನವಾಗಿದೆ. ಕೆ-9 ವಜ್ರ ಸ್ವಯಂ ಚಾಲಿತ ಫಿರಂಗಿ ಗನ್ ವ್ಯವಸ್ಥೆಯಾಗಿದೆ. 145 ಎಂ777 ಫಿರಂಗಿ ಗನ್ ವ್ಯವಸ್ಥೆಗಳನ್ನು ಅಮೆರಿಕದಿಂದ ಖರೀದಿಸುವ ಕುರಿತ ಒಪ್ಪಂದಕ್ಕೆ 2016ರ ನವೆಂಬರ್‌ನಲ್ಲಿ ಸಹಿ ಹಾಕಲಾಗಿದೆ. ಇರಾಕ್, ಅಪಘಾನಿಸ್ತಾನದ ಯುದ್ಧಗಳಲ್ಲಿ ಬಳಕೆಯಾಗಿದ್ದ ಎಂ777 ಫಿರಂಗಿಗಳನ್ನು ಹೆಲಿಕಾಪ್ಟರ್ ಮೂಲಕ ಎತ್ತರದ ಪ್ರದೇಶಗಳಿಗೆ ಸುಲಭವಾಗಿ ರವಾನಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News