×
Ad

ವ್ಯಾಪಂ ಹಗರಣದ ಬಯಲಿಗೆಳೆದ ಆನಂದ್ ರಾಯ್‌ಗೆ ಕಾಂಗ್ರೆಸ್ ಟಿಕೆಟ್ ನಿರಾಕರಣೆ

Update: 2018-11-09 23:51 IST

ಭೋಪಾಲ, ನ. 9: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವ್ಯಾಪಂ ಹಗರಣದ ವಿಸಿಲ್ ಬ್ಲೋವರ್ (ರಹಸ್ಯ ಬೇಧಿಸುವ ವ್ಯಕ್ತಿ) ಡಾ. ಆನಂದ ರಾಯ್ ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘‘ರಾಹುಲ್ ಗಾಂಧಿ ಭರವಸೆ ನೀಡಿದ ಹೊರತಾಗಿಯೂ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ. ನನ್ನಿಂದಾಗಿ ವ್ಯಾಪಂ ಹಗರಣದ ಆರೋಪಿ ಸಂಜೀವ್ ಸಕ್ಸೇನಾ ಅವರಿಗೆ ಟಿಕೆಟ್ ನೀಡಿಲ್ಲ’’ ಎಂದು ಹೇಳಿದ್ದಾರೆ. ಈ ನಡುವೆ ಸಕ್ಸೇನಾ, ‘‘ನಾನು ಅಮಾಯಕ, ಸತ್ಯ ಹೊರಬರಲಿದೆ. ಈಗ ನಾನು ಕಾಂಗ್ರೆಸ್ ಸಶಕ್ತಗೊಳಿಸಲು ಕೆಲಸ ಮಾಡುತ್ತಿದ್ದೇನೆ. ಒಮ್ಮೆ ನನಗೆ ವಂಚಿಸುತ್ತಿದ್ದಾರೆ ಎಂಬ ಭಾವನೆ ಮೂಡಿತ್ತು. ಆದರೆ, ಈಗ ದೊಡ್ಡ ವಿಚಾರಗಳನ್ನು ಅನುಸರಿಸಬೇಕು ಎಂಬ ಭಾವನೆ ಉಂಟಾಗಿದೆ’’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಗುರುವಾರ ತನ್ನ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ಬುಧವಾರ ಪ್ರಕಟಿಸಿದ ನಾಲ್ಕನೇ ಪಟ್ಟಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಮೈದುನ ಸಂಜಯ್ ಸಿಂಗ್ ಮಸಾನಿ ಸಹಿತ 29 ಅಭ್ಯರ್ಥಿಗಳನ್ನು ಹೆಸರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News