​ ಟಿಪ್ಪುಸುಲ್ತಾನ್: ತೆರೆಮರೆಯ ನಾಯಕ

Update: 2018-11-09 18:41 GMT

ಇಂದಿನಂತೆ ಅವನ ಕಾಲಘಟ್ಟದಲ್ಲೂ ಸಹ ಅವನ ವ್ಯಕ್ತಿತ್ವದ ಬಹುಮುಖ್ಯ ಯೋಜನೆಗಳು ಬೆಳಕಿಗೆ ಬರದೆ ಅವಹೇಳನಕ್ಕೆ ಗುರಿಯಾದವು. ಇವನ ಸಮಕಾಲೀನರ್ಯಾರೂ ಅವನ ರಾಷ್ಟ್ರೀಯತೆಯನ್ನು ಅರ್ಥಮಾಡಿ ಕೊಳ್ಳಲೇ ಇಲ್ಲ. ಏಕೆಂದರೆ ಅವರಿಗೆ ರಾಷ್ಟ್ರೀಯತೆ ಏನೆಂದು ಗೊತ್ತೇ ಇರಲಿಲ್ಲ. ಇದಾದನಂತರ ಇಪ್ಪತ್ತನೇ ಶತಮಾನದಲ್ಲೂ ಅವನ ಅದ್ವಿತೀಯ ರಾಷ್ಟ್ರೀಯತೆ ಅವಹೇಳನಕ್ಕೆ ಗುರಿಯಾಯಿತು. ಏಕೆಂದರೆ ಅಷ್ಟು ಹೊತ್ತಿಗಾಗಲೇ ರಾಷ್ಟ್ರೀಯತೆ ಪ್ರಾಬಲ್ಯದ ಸಂಕೇತವಾಗಿ ನಿಜಾರ್ಥವನ್ನೇ ಕಳೆದು ಕೊಂಡಿತ್ತು. ದೇಶದ ಪ್ರಗತಿಪರ ರಾಜಕೀಯ ನಾಯಕರೆಲ್ಲರೂ ರಾಷ್ಟ್ರೀಯವಾದಿಗಳಾಗಿ ಹೋಗಿದ್ದರು.


ಟಿಪ್ಪುಸುಲ್ತಾನ್ ಸದಾ ತಪ್ಪುಗ್ರಹಿಕೆಗಳಿಗೆ ಗುರಿಯಾದ ವ್ಯಕ್ತಿ. ಅತನ ಆಡಳಿತಾವಧಿಯ ಆತನ ಅನೇಕ ಯೋಜನೆಗಳು ಗಮನಕ್ಕೆ ಬರಲೇ ಇಲ್ಲ. ಅವನನ್ನು ಅರ್ಥಮಾಡಿಕೊಳ್ಳಬೇಕಾದರೆ ಅವನ ಪರಂಪರೆಯನ್ನು ಅವನ ಕಾಲಮಾನಕ್ಕೆ ತಕ್ಕಂತೆ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ವಸಾಹತುಶಾಹಿ ಬ್ರಿಟಿಷರ ಯೋಜನೆಗಳಿಗೆ ಕೆಚ್ಚೆದೆಯಿಂದ ಸವಾಲೊಡ್ಡಿದ ಪರಾಕ್ರಮಿ -ಸಲೀಲ್ ಮಿಶ್ರ ಟಿಪ್ಪುಸುಲ್ತಾನ್ (1750- 1799)

1782 ರಿಂದ 1799ರ ವರೆಗೆ ಮೈಸೂರನ್ನು ಆಳಿದ ಟಿಪ್ಪು ಸುಲ್ತಾನನ ವ್ಯಕ್ತಿತ್ವ ಬಹಳ ಅನನ್ಯವಾದದ್ದು. ಈತನಿಗೆ ಸಂಬಂಧಿಸಿದ ಎಲ್ಲಾ ಇತಿಹಾಸ ಬರಹಗಳಲ್ಲಿ ಈ ಅನನ್ಯತೆಯನ್ನು ತಪ್ಪಾಗಿ ಬಿಂಬಿಸಿರುವುದು ಬಹಳ ದುರದೃಷ್ಟಕರ. ಆತನ ವ್ಯಕ್ತಿತ್ವದ ಅನೇಕ ವೈಶಿಷ್ಟಗಳು ನಿರ್ಲಕ್ಷಕ್ಕೊಳಗಾಗಿ, ಅನೇಕ ಕಪೋಲಕಲ್ಪಿತ ಕಥನಗಳು ಇತಿಹಾಸದಲ್ಲಿ ಸೇರಿಕೊಂಡಿವೆ. ಸತ್ಯ ಹೊರಬರಬೇಕಾದರೆ ಸುಳ್ಳು ಕಥನಗಳ ನಿಜಾಂಶ ಬೆಳಕಿಗೆ ಬರಬೇಕು. ಆಗ ಟಿಪ್ಪುವಿಗೆ ನ್ಯಾಯ ದೊರೆತಂತಾಗುತ್ತದೆ. ಟಿಪ್ಪುವಿನ ವ್ಯಕ್ತಿತ್ವದ ಬಗ್ಗೆ ಪ್ರಬಲವಾದ ಆರೋಪವೆಂದರೆ ಆತ ಒಬ್ಬ ಮುಸ್ಲಿಂ ಮತಾಂಧ ಮತ್ತು ಇತರಧರ್ಮಗಳ ಶತ್ರು. ಬ್ರಿಟಿಷ್ ಬರವಣಿಗೆಗಳು ಇದನ್ನು ಸಾರುತ್ತಿವೆ. ಬ್ರಿಟಿಷರು ಆತನನ್ನು ಮುಸ್ಲಿಂ ಮತಾಂಧ ಎಂದು ಬಿಂಬಿಸಲು ಕಾರಣಗಳಿದ್ದವು. ಏಕೆಂದರೆ ಹದಿನೇಳನೇ ಶತಮಾನದ ಅಂತ್ಯದ ಅಧಿಕಾರಶಾಹಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಟಿಪ್ಪುಅಸಾಧಾರಣ ಬೆದರಿಕೆಯನ್ನೊಡ್ಡಿದ್ದ. ಭಾರತದ ಮೇಲೆ ಪ್ರಭುತ್ವ ಸಾಧಿಸಲು ಬ್ರಿಟಿಷರಿಗೆ ಈತ ಬಹುದೊಡ್ಡ ಅಡಚಣೆಯಾಗಿದ್ದ.

ಮೊಗಲ್ ಆಳ್ವಿಕೆ ಪತನಗೊಳ್ಳುತ್ತಿದ್ದ ಕಾಲ ಅದು. - ರಾಜಸ್ಥಾನದ ರಜಪೂತ ರಾಜಕುಮಾರ, ಪಂಜಾಬಿನ ರಣಜೀತ್‌ಸಿಂಗ್, ಮರಾಠರು ಮತ್ತು ನಿಜಾಮರು ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡರೆ ಇನ್ನು ಕೆಲವು ಆಡಳಿತಗಳು ಕರಾರು ಒಪ್ಪಂದ ಮಾಡಿಕೊಂಡು ಬ್ರಿಟಿಷರಿಗೆ ಶರಣಾಗಿದ್ದರು, ಅವನ ಸಮಕಾಲೀನ ಅರಸರಿಗ್ಯಾರಿಗೂ ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಎದುರಾಗ ಬಹುದಾದ ಗಂಡಾಂತರಗಳ ಮುಂದಾಲೋಚನೆಯೇ ಇರಲಿಲ್ಲ, ಟಿಪ್ಪುವನ್ನು ಹೊರತುಪಡಿಸಿ. ಬ್ರಿಟಿಷರು ಬೇರೆಯವರಂತಲ್ಲ ಎಂಬ ಅರಿವು ಈ ಮೊದಲೇ ಟಿಪ್ಪುವಿಗಾಗಿತ್ತು. ಇವರು ರಾಜ್ಯ ಹಾಗೂ ಇತರ ಸಂಪನ್ಮೂಲಗಳಿಗಾಗಿ ಹೊಡೆದಾಡುವ ಬೇರೆ ರಾಜರಿಗಿಂತ ಭಿನ್ನರಾಗಿದ್ದಾರೆ ಎಂದು ಮನಗಂಡಿದ್ದ ಆತ, ತನ್ನ ಕೊನೆ ಉಸಿರಿರುವವರೆಗೂ ಅವರಿಗೆ ಶರಣಾಗದೆ ಯಾವುದೇ ಸಂಧಿ ಒಪ್ಪಂದಗಳನ್ನು ಮಾಡಿಕೊಳ್ಳದೆ ಕೊನೆಯತನಕ ಹೋರಾಡಿ ಪ್ರಾಣ ತ್ಯಾಗ ಮಾಡಿದ. ಆದ್ದರಿಂದಲೇ 19ನೇ ಶತಮಾನದ ಬ್ರಿಟಿಷ್ ಬರಹಗಾರರು ಟಿಪ್ಪುವನ್ನು ವಿನಾಶಕ ಮುಹಮ್ಮದ್ ಘಜನಿ ಮತ್ತು ರಕ್ತ ಪಿಪಾಸು ನಾದಿರ್ ಷಾ ಎಂದು ಬಿಂಬಿಸಿದರು ಎಂದು ಅರ್ಥಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಆತನ ವ್ಯಕ್ತಿತ್ವಕ್ಕೆ ಒಬ್ಬ ಕ್ರೂರ ಮುಸ್ಲಿಂ ಮತಾಂಧ ಎಂಬ ಕಳಂಕ ಅಂಟಿಕೊಂಡಿತು. ಈ ಕಳಂಕ ಸ್ಥಾಯಿಯಾಗಿ ಉಳಿಯಬಹುದಿತ್ತು.

ಆದರೆ 1913ರ ಅನ್ವೇಷಣೆಯನ್ನು ಗಮನಿಸಿ ಟಿಪ್ಪುಶೃಂಗೇರಿ ಮಠದ ಗುರುಗಳಿಗೆ 21 ಪತ್ರಗಳನ್ನು ಬರೆದಿರುವ ಪುರಾವೆಗಳು ಸಿಗುತ್ತದೆ. ಆ ಪತ್ರಗಳಲ್ಲಿ ಮಠದ ಮುಖ್ಯಸ್ಥರಿಗೆ ಜಗದ್ಗುರು ಎಂದು ಸಂಬೋಧಿಸಿ ‘‘ನೀವು ಜಗದ್ಗುರುಗಳು, ನೀವು ಸದಾ ಲೋಕದ ಏಳಿಗೆಗಾಗಿ ಪ್ರಾರ್ಥಿಸುತ್ತಿರುತ್ತೀರಿ. ಜನರು ಸೌಖ್ಯವಾಗಿರಲೆಂದು ಆಶಿಸುತ್ತೀರಿ. ದಯವಿಟ್ಟು ತಾವು ನಮ್ಮ ಏಳಿಗೆಗಾಗಿ ದೇವರಲ್ಲಿ ಪ್ರಾರ್ಥಿಸಿ. ದೇಶ ಯಾವುದಾದರೇನು ನಿಮ್ಮಂತಹ ಮಹನೀಯರು ಇರುವ ದೇಶದಲ್ಲಿ ಶಾಂತಿ ಸೌಹಾರ್ದ ಹಾಗೂ ಒಳ್ಳೆಯ ಮಳೆ ಬೆಳೆಯಿಂದ ಸಮೃದ್ಧಿಯಾಗುತ್ತದೆ.’’ ಇದರ ಬೆನ್ನಲ್ಲೇ, ಟಿಪ್ಪುದಕ್ಷಿಣ ಮಲಬಾರ್ ಮತ್ತು ಕೊಚ್ಚಿ ರಾಜ್ಯದ ಅನೇಕ ಹಿಂದೂ ದೇವಸ್ಥಾನಗಳಿಗೆ ಹಾಗೂ ಧಾರ್ಮಿಕ ಪ್ರತಿಷ್ಠಾನಗಳಿಗೆ ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ದೇಣಿಗೆಯಾಗಿ ಕೊಟ್ಟಿರುವುದಕ್ಕೆ ಪುರಾವೆಗಳು ದೊರೆಯುತ್ತವೆ. ಅಲ್ಲದೆ ಒಟ್ಟಿಗೆ ಸಾವಿರಾರು ಜನರನ್ನು ಮತಾಂತರಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಕೇವಲ ರಾಜಕೀಯ ಉದ್ದೇಶದಿಂದ ಪ್ರೇರಿತನಾಗಿ ಯಾವುದೇ ಧರ್ಮಕ್ಕೆ ಸೇರಿದ ತನ್ನ ರಾಜಕೀಯ ಶತ್ರುಗಳನ್ನು ಮತ್ತು ಅವನ ವಿರುದ್ಧ ದಂಗೆ ಎದ್ದವರನ್ನು ನಿಷ್ಕರುಣೆಯಿಂದ ಮತಾಂತರಗೊಳಿಸುತ್ತಿದ್ದ ಎಂಬುದಕ್ಕೆ ದಾಖಲೆಗಳು ಲಭಿಸುತ್ತವೆ. ಈ ರೀತಿಯ ಮತಾಂತರ ಧಾರ್ಮಿಕ ಉದ್ದೇಶದಿಂದ ಕೂಡಿರದೆ ರಾಜಕೀಯ ಕಾರಣಗಳಿಗಾಗಿ ನಡೆದಿತ್ತು. 1791ರಲ್ಲಿ ಮರಾಠರು ಶೃಂಗೇರಿಯ ಮೇಲೆ ದಾಳಿ ಮಾಡಿದ್ದರಲ್ಲದೆ ಅಲ್ಲಿಯ ಅನೇಕ ದೇವಾಲಯಗಳನ್ನು ಲೂಟಿ ಮಾಡಿ ಧ್ವಂಸಗೊಳಿಸಿ ಸಾವಿರಾರು ಭಕ್ತರನ್ನು ಕೊಂದು ಹಾಕಿದ್ದರು. ಆಗ ಶಂಕರಾಚಾರ್ಯರು ಸಹಾಯಕ್ಕಾಗಿ ಟಿಪ್ಪುವಿನ ಮೊರೆ ಹೋದ ಕೂಡಲೇ ಟಿಪ್ಪು ಧನಕನಕಗಳಿಂದ ಸಹಾಯ ಮಾಡಿ ಧ್ವಂಸಗೊಂಡಿದ್ದ ದೇವಾಲಯಗಳನ್ನು ಪುನಃ ಕಟ್ಟಿಸಿಕೊಟ್ಟು ಶಂಕರಾಚಾರ್ಯರ ಬೆನ್ನೆಲುಬಾಗಿ ನಿಂತ. ಹೀಗಿರುವಾಗ ಟಿಪ್ಪು ಮತಾಂಧ ಹೇಗಾಗುತ್ತಾನೆ?

ಟಿಪ್ಪುವಿನ ಪರಂಪರೆಯ ಬಗ್ಗೆ ಅಥರ್ವಾಗಬೇಕಾದರೆ ಆತನ ಜೀವಿತಾವಧಿಯ ಕಾಲವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ತೆರೆಮರೆಯಲ್ಲಿ 18ನೇ ಶತಮಾನದಲ್ಲಿ ಹಳೆಯ ರಾಜಮನೆತನಗಳೆಲ್ಲವೂ ತಮ್ಮ ಅಧಿಕಾರ ಹಾಗೂ ಅರಸೊತ್ತಿಗೆಯನ್ನು ಕಳೆದುಕೊಂಡು ಯುರೋಪಿನ ಅಟ್ಲಾಂಟಿಕ್ ಸರಹದ್ದಿನ ವಿಶಿಷ್ಟ ಹೊಸನಾಗರಿಕತೆಯತ್ತ ವಾಲುತ್ತಿದ್ದವು. ಬಹಳ ಕಡಿಮೆ ಸಮಯದಲ್ಲಿ ಹೊಸ ವಿಜ್ಞಾನ ಮತ್ತು ಆವಿಷ್ಕಾರಗಳಿಂದ ಒಂದು ಸುಸಜ್ಜಿತ ನಾಗರಿಕತೆ ಹುಟ್ಟಿಕೊಂಡಿತು. ವಾಯವ್ಯ ಯುರೋಪಿನ ದೇಶಗಳಾದ ಇಂಗ್ಲೆಂಡ್ ಮತ್ತು ಫ್ರಾನ್ಸ್ ಇಡೀ ಜಗತ್ತಿನ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದವು. ಈ ಪ್ರಭುತ್ವ ಕೇವಲ ವಿಜ್ಞಾನ ಮತ್ತು ಆರ್ಥಿಕ ಪ್ರಭುತ್ವವಾಗಿರದೆ, ಸೈದ್ಧಾಂತಿಕ ಪ್ರಭುತ್ವವೂ ಆಗಿತ್ತು. ಇದರಿಂದ ಪೂರ್ವಿಕರ ಹಳೆಯ ಸಿದ್ಧ್ದಾಂತಗಳು ನಾಶಗೊಂಡು ಹೊಸ ಸೈದ್ಧಾಂತಿಕ ನೆಲೆಗಳು ಅಸ್ತಿತ್ವಕ್ಕೆ ಬಂದವು. ಸ್ಥಳೀಯವಾಗಿ ಹಾಗೂ ತಾತ್ಕಾಲಿಕವಾಗಿ ಎರಡೂ ದೃಷ್ಟಿಗಳಿಂದ ಹೊಸ ಪ್ರಭುತ್ವಗಳ ಸಮೀಕರಣವು ಪ್ರಾಮುಖ್ಯತೆ ಪಡೆದವು.

ಪ್ರಭುತ್ವದ ಧೋರಣೆಯಿಂದ ಪ್ರಪಂಚದ ಉಳಿದ ದೇಶಗಳು ಹೊಸ ಮಹಾಶಕ್ತಿಗಳ ಅಧೀನವಾಗತೊಡಗಿದವು. ಇದರಿಂದ ವಸಾಹತು ಶಾಹಿ ಮತ್ತು ಸಾಮ್ರಾಜ್ಯಶಾಹಿ ಎಂಬ ಹೊಸ ವ್ಯವಸ್ಥೆಗಳು ಹುಟ್ಟಿಕೊಂಡವು. ಇದು ವಿಶ್ವದ ಬೇರೆ ರಾಷ್ಟ್ರಗಳನ್ನು ಅಭೂತಪೂರ್ವ ಇಕ್ಕಟ್ಟಿಗೆ ಸಿಲುಕಿಸಿದವು. ಬೇರೆ ರಾಷ್ಟ್ರಗಳಿಗಿದ್ದ ಆಯ್ಕೆಗಳೇನೆಂದರೆ ಅವರು ಹೊಸ ಅಧಿಕಾರಶಾಹಿ ವ್ಯವಸ್ಥೆಯನ್ನು ಒಪ್ಪಿ ತಮ್ಮ ಸಂಪೂರ್ಣ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಿತ್ತು. ಇಲ್ಲವೇ ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬಡ ಗುಲಾಮರಂತೆಯೇ ಇರಬೇಕಾಗಿತ್ತು. ಪ್ರಪಂಚದ ಬೇರೆ ದೇಶಗಳು ಪ್ರಗತಿ ಸಾಧಿಸಿ ಶ್ರೀಮಂತರಾಗುತ್ತಿದ್ದ ಸಂದರ್ಭದಲ್ಲಿ ಅವರು ಬಡವರಾಗಿ ಉಳಿಯುವುದು ಬಹಳ ದುಃಖ ಹಾಗೂ ಅವಮಾನದ ವಿಷಯವಾಗಿತ್ತು. ಅಲ್ಪಸ್ವಲ್ಪಭತ್ತೆಗಾಗಿ ನಾಡಿನ ಸ್ವಾತಂತ್ರ ಹಾಗೂ ಸಂಸ್ಕೃತಿಯನ್ನು ತ್ಯಜಿಸುವುದು ಬಹಳ ನೋವಿನ ಸಂಗತಿಯಾಗಿತ್ತು. ಆದರೆ ಇದನ್ನು ಬಿಟ್ಟು ಅವರಿಗೆಲ್ಲಾ ಬೇರೆ ವಿಧಿ ಇರಲಿಲ್ಲ? ಈ ಸಂಧಿಗ್ದತೆಯನ್ನು ಅಷ್ಟು ಸುಲಭಬಾಗಿ ಪರಿಹರಿಸಲೂ ಸಾಧ್ಯವಿರಲಿಲ್ಲ. ಟಿಪ್ಪುವಿಗೂ ಸಹ ಅವನ ಸಮಕಾಲೀನ ಅರಸರಂತೆ ಈ ಸಂಧಿಗ್ದತೆಯ ಉಭಯ ಸಂಕಟ ಎದುರಾಯಿತು. ಆದರೆ ಆತ ತನ್ನ ಸಮಕಾಲೀನ ರಾಜರಿಗಿಂತ ಭಿನ್ನವಾಗಿ ಯೋಚಿಸಿದ. ಬೇರೆ ಅರ್ಥದಲ್ಲಿ ಹೇಳಬೇಕೆಂದರೆ ವಸಾಹತುಶಾಹಿ ಸಾಮ್ರಾಜ್ಯದ ಅಂಕುಶದಿಂದ ಹೊರಗುಳಿಯಬೇಕಾದರೆ ಆಧುನಿಕ ತಂತ್ರಜ್ಞಾನದ ಮೊರೆ ಹೋಗಲೇಬೇಕಾಗಿತ್ತು. ಆತ ಬ್ರಿಟಿಷರೊಂದಿಗೆ ಹೋರಾಡುತ್ತಲೇ ಇದನ್ನು ಅನುಷ್ಠಾನಗೊಳಿಸಲು ಯತ್ನಿಸುತ್ತಿದ್ದ. ಆದ್ದರಿಂದ ಆತ ಯುರೋಪಿನ ಒಂದು ಮಹಾಶಕ್ತಿಯನ್ನು ಬಗ್ಗುಬಡಿಯಲು ಪ್ರಪಂಚದ ಮತ್ತೊಂದು ಪ್ರಬಲ ಶಕ್ತಿಯಾದ - ಫ್ರಾನ್ಸ್‌ನ ಮೊರೆ ಹೋದ.

1788ರಂದು ಫ್ರಾನ್ಸಿನ ರಾಜನನ್ನು ಭೇಟಿಯಾಗಲು ತನ್ನ ರಾಯಭಾರಿಯನ್ನು ಕಳುಹಿಸಿಕೊಟ್ಟ. ಆತ ಫ್ರೆಂಚ್ ಕ್ರಾಂತಿ ಆಗುವ ಒಂದು ವರ್ಷದ ಮೊದಲು ರಾಯಭಾರಿಯನ್ನು ಕಳುಹಿಸಿ ಕೊಟಿದ್ದ. ಬ್ರಿಟಿಷರ ವಿರುದ್ಧ ಫ್ರೆಂಚರು ಭಾರತೀಯರಿಗೆ ಸಹಾಯ ಮಾಡಲೆಂದು ಟಿಪ್ಪುಫ್ರೆಂಚರಿಗೆ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಸಹಾಯ ಮಾಡಿದ್ದ. ಟಿಪ್ಪುವಿಗೆ ಪ್ರಾನ್ಸ್‌ನಿಂದ ಶಿಲ್ಪಿಗಳು, ಕಲಾವಿದರು, ಫಿರಂಗಿ ತಯಾರಕರು, ಗಡಿಯಾರ ತಯಾರಕರು, ವೈದ್ಯರು, ಶಸ್ತ್ರ ಚಿಕಿತ್ಸಾಗಾರರು, ಗಿಡಗಳು, ವಿವಿಧ ಬಗೆಯ ಬೀಜಗಳು ಬೇಕಾಗಿದ್ದವು. ಆದಾಗ್ಯೂ ಸಹ ಟಿಪ್ಪುವಿನ ರಾಯಭಾರಿಗೆ ಫ್ರಾನ್ಸಿನ ರಾಜನನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆತ ಕಾರಣಾಂತರಗಳಿಂದ ಟಿಪ್ಪುವಿನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದನಲ್ಲದೆ ಸಹಾಯಕ್ಕಾಗಿ ಫ್ರಾನ್ಸ್‌ನಿಂದ ಸೈನಿಕ ತುಕಡಿಯನ್ನು ಕಳುಹಿಸಿಕೊಡಬೇಕೆನ್ನುವ ಟಿಪ್ಪುವಿನ ಪ್ರಸ್ತಾಪವನ್ನು ತಿರಸ್ಕರಿಸಿದ. ಪ್ರಪಂಚದಲ್ಲಾದ ಒಟ್ಟಾರೆ ಪರಿವರ್ತನೆಯನ್ನು ಗಮನಿಸಿದರೆ ಭಾರತದ 18ನೇ ಶತಮಾನದ ರಾಜಕಾರಣ ಬಹು ಮುಖ್ಯವಾದ ಗುರುತರ ಸ್ಥಾನ ಪಡೆದುಕೊಳ್ಳುತ್ತದೆ. ಈ ಪರಿವರ್ತನೆಯು ಮೊಗಲ್ ಸಾಮ್ರಾಜ್ಯದ ಪತನಕ್ಕೆ ನಾಂದಿಯಾಗಿ ಪ್ರಾಂತೀಯ ಆಡಳಿತಗಳು ಹೊರಹೊಮ್ಮಲು ಕಾರಣವಾಯಿತು. ಟಿಪ್ಪುವಿನ ಗಡಿ ಪ್ರದೇಶಗಳು ವೈರಿಗಳಾದ ಹೈದರಾಬಾದ್, ಕರ್ನಾಟಿಕ್ ಮತ್ತು ಮರಾಠರಿಂದ ಸುತ್ತುವರಿದು ಪರಸ್ಪರ ಬೆದರಿಕೆ ಒಡ್ಡಿಕೊಳ್ಳುತ್ತಿದ್ದವು. ಬೆದರಿಕೆಗಳನ್ನು ಎದುರಿಸಿದ್ದು ಟಿಪ್ಪುವಿಗೆ ಬೇರೆ ಬೇರೆ ವಿವಿಧ ಶಕ್ತಿ ಮೂಲಗಳಿಂದ ಬೆದರಿಕೆಗಳು ಬರತೊಡಗಿದ್ದವು. ಬ್ರಿಟಿಷರು ಬೇರೆ ಸಮಕಾಲೀನರಿಗಿಂತ ಅಸಹಜ ಮತ್ತು ಅಪಾಯಕಾರಿಯಾಗಿದ್ದರು.

ಟಿಪ್ಪುವಿನ ಮುಂದೆ ಎರಡು ರೀತಿಯ ಬೆದರಿಕೆಗಳಿದ್ದವು. ಒಂದು ಹೈದರಾಬಾದ್-ಮರಾಠರಿಂದ, ಇನ್ನೊಂದು ಬ್ರಿಟಿಷರಿಂದ, ಎರಡು ಒಂದ ಕ್ಕೊಂದು ಬಹಳವೇ ಭಿನ್ನವಾಗಿದ್ದವು. ಸಮಕಾಲೀನ ರಾಜರ ಬೆದರಿಕೆಗಳಿಗಿಂತ ಬ್ರಿಟಿಷರ ಬೆದರಿಕೆಗಳು ಸಂಪೂರ್ಣವಾಗಿ ಬೇರೆಯೇ ಇರುತ್ತಿದ್ದವು. ಇದು ಟಿಪ್ಪುವಿಗೆ ಚೆನ್ನಾಗಿ ಅರ್ಥ ವಾಗಿತ್ತು. ಸಮಕಾಲೀನ ರಾಜರ ಬೆದರಿಕೆಗಳು ಕೇವಲ ಗಡಿ ವಿಸ್ತರಣೆಗೆ ಸಂಬಂಧಿಸಿದ್ದಾದರೆ, ಬ್ರಿಟಿಷರ ಬೆದರಿಕೆಗಳು ಇಡೀ ಭಾರತದ ಮೇಲೆ ತಮ್ಮ ಸಮಗ್ರ ಆಧಿಪತ್ಯವನ್ನು ಸ್ಥಾಪಿಸಲು ಹಾತೊರೆಯುತ್ತಿರುತ್ತಿದ್ದವು. ಪೂರ್ವ ಆಧುನಿಕ ಕಾಲದ ರಾಜರಿಗೆ ಗಡಿವಿಸ್ತರಣೆಯ ಅಪೇಕ್ಷೆ ಇದ್ದದ್ದು ಸಾಮಾನ್ಯ ಹಾಗೂ ನೈಸರ್ಗಿಕವಾದದ್ದು. ಅವರಿಗೆ ತಮ್ಮ ಅರಸೊತ್ತಿಗೆಯ ಆಡಳಿತವನ್ನು ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಇದೊಂದೇ ಮಾರ್ಗ ಇದ್ದುದು. ಅವರಿಗೆ ಅತೀ ಹೆಚ್ಚು ಹಣಕಾಸಿನ ಸಂಪನ್ಮೂಲ ಬರುತ್ತಿದ್ದದ್ದು ಭೂಕಂದಾಯದಿಂದ. ಅದಕ್ಕಾಗಿ ಅವರು ನೆರೆರಾಜ್ಯಗಳನ್ನು ಜಯಿಸುವುದು ಅನಿವಾರ್ಯವಾಗಿತ್ತು. ಜಯಿಸಲು ಯುದ್ಧ ಮಾಡಬೇಕಿತ್ತು, ಯುದ್ಧಕ್ಕೆ ಹಣ ಬೇಕಿತ್ತು. ಅಧಿಕ ಆದಾಯದಿಂದ ಹೆಚ್ಚು ಹಣ ಪಡೆಯಬಹುದಿತ್ತು. ಅಧಿಕ ಆದಾಯ ಪಡೆಯಲು ಅಧಿಕ ಯುದ್ಧಗಳನ್ನು ಮಾಡಬೇಕಿತ್ತು. ಈ ವೃತ್ತ ಬಹಳ ಚಿಕ್ಕದಾಗಿ ಸ್ಪಷ್ಟವಾಗಿತ್ತು. ದಕ್ಷಿಣ ಭಾರತದ ಬಲಿಷ್ಠ ಶಕ್ತಿಗಳಾದ ಮೈಸೂರು, ಕರ್ನಾಟಕ, ಹೈದರಾಬಾದ್ ಮತ್ತು ಮರಾಠರೂ ಸಹ ಇದೇ ರೀತಿಯ ಬೆದರಿಕೆಗಳನ್ನು ಎದುರಿಸುತ್ತಿದ್ದರು. ಒಬ್ಬರು ಮತ್ತೊಬ್ಬರ ಗಡಿ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಹೊಂಚುಹಾಕುತ್ತಿದ್ದರು. ಆದ್ದರಿಂದ ಪರಸ್ಪರ ಬೆದರಿಕೆ ಎದುರಿಸಬೇಕಾಗುತ್ತಿತ್ತು.

ಆದರೆ ಒಬ್ಬ ಎದುರಾಳಿಯನ್ನು ಸೋಲಿಸುವುದರಲ್ಲೂ ಮತ್ತು ಅವನ ರಾಜ್ಯವನ್ನು ಕಬಳಿಸುವುದರಲ್ಲೂ ಇದ್ದ ವ್ಯತ್ಯಾಸ ಟಿಪ್ಪುವಿಗೆ ಅರ್ಥವಾಗುತ್ತಿತ್ತು. ಆತ ಬೇರೆ ರಾಜರಿಗಿಂತ ಭಿನ್ನವಾಗಿ ಆಲೋಚಿಸಿದ್ದ. ಎಲ್ಲಾ ಶಕ್ತಿಗಳನ್ನು ಸೋಲಿಸಬೇಕು ನಿಜ ಆದರೆ ಬ್ರಿಟಿಷರನ್ನು ಮಾತ್ರ ಹೊರಗೋಡಿಸಬೇಕಾಗಿದೆ. ಅವನು ತನ್ನ ಅನಿಸಿಕೆಯನ್ನು ಹೀಗೆ ದಾಖಲಿಸುತ್ತಾನೆ. ‘‘ನಾನು ಅವರನ್ನು ಭಾರತ ದೇಶದಿಂದ ಹೊರಗೋಡಿಸುವೆ. ಇದಕ್ಕಾಗಿ ಜೀವನವಿಡೀ ಫ್ರೆಂಚರ ಜೊತೆ ಇರಲು ಬಯಸುತ್ತೇನೆ’’ ಟಿಪ್ಪುಫ್ರೆಂಚರೊಂದಿಗೆ ಸ್ನೇಹ ಬೆಳೆಸಲು ಬಹಳ ಆಸಕ್ತನಾಗಿದ್ದ. ಈತನನ್ನು 1739ರಲ್ಲಿ ನಡೆದ ಫ್ರೆಂಚ್ ಕ್ರಾಂತಿಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡ ಮೊತ್ತ ಮೊದಲ ಭಾರತೀಯ ಅಂದರೆ ತಪ್ಪಾಗಲಾರದು. ಫ್ರೆಂಚ್ ಕಾಂತ್ರಿಯ ಪರಿಣಾಮದಿಂದಾಗಿ ಆತ ತನ್ನನ್ನು ನಾಗರಿಕ/ಪ್ರಜೆ ಟಿಪ್ಪುಎಂದು ಸಂಬೋಧಿಸತೊಡಗಿದ. ಅಲ್ಲದೆ ಅವನು ಒಂದು ತೋಟದಲ್ಲಿ ವಿಶೇಷವಾದ ಒಂದು ಗಿಡವನ್ನು ನಡೆಸಿ ಅದಕ್ಕೆ ‘ಟ್ರೀ ಆಫ್ ಲಿಬರ್ಟಿ’ ಎಂದು ಹೆಸರಿಸಿದ. ‘ಚಾಕೋಬಿನ್ ಕ್ಲಬ್’ ಎಂದು ಕ್ಲಬ್ಬನ್ನು ಆರಂಭಿಸಿದ. ಇದಾದ ಶತಮಾನಗಳ ನಂತರ ಆಧುನಿಕ ಭಾರತದ ಚಿಂತಕರು ಪ್ರೆಂಚ್ ಕ್ರಾಂತಿಯ ಭೌಗೋಳಿಕ ಪ್ರಾಮುಖ್ಯತೆಯ ಬಗ್ಗೆ ಎಚ್ಚೆತ್ತುಕೊಂಡರು.

ಬ್ರಿಟಿಷರು ತಮ್ಮ ಹದ್ದು ಮೀರಿ ಬೆಳೆಯುತ್ತಿದ್ದಾರೆ ಎಂದು ಟಿಪ್ಪುವಿಗೆ ಮನದಟ್ಟಾಗಿತ್ತು ಆತ ಆಟೋಮನ್ ಟರ್ಕಿಯ ರಾಜನ ಬಳಿ ತನ್ನ ರಾಯಭಾರಿಯನ್ನು ಕಳುಹಿಸಿದ, ಪುಣೆ, ಹೈದರಾಬಾದ್, ದಿಲ್ಲಿ, ರಜಪೂತ್, ನೇಪಾಲ, ಕಾಬೂಲ್ ಮತ್ತು ಮಾರಿಷಸ್‌ಗಳಿಗೆ ತನ್ನ ವಿಶೇಷ ರಾಯಭಾರಿಗಳನ್ನು ಕಳುಹಿಸಿದ. ಬ್ರಿಟಿಷರನ್ನು ಹೊರದಬ್ಬಬೇಕೆಂದು ಎಲ್ಲಾ ಪ್ರಾಂತೀಯ ರಾಜರುಗಳಲ್ಲಿ ವಿನಂತಿಸಿಕೊಂಡ. ಬ್ರಿಟಿಷರ ವಿರುದ್ಧ ಹೋರಾಡಲು ಎಲ್ಲರೂ ಒಟ್ಟಾಗ ಬೇಕೆಂದು ಕರೆಕೊಟ್ಟ. ಅದರೆ ದುರದೃಷ್ಟವಶಾತ್ ಅವನ ಕೆಲವೊಂದು ಪ್ರಾಂತಗಳ ಮುಖ್ಯಸ್ಥರೇ ಬ್ರಿಟಿಷರ ಕೈಗೊಂಬೆಗಳಾಗಿ ಹೋದರು. ಇದರಿಂದ ವಸಾಹತುಶಾಹಿ ಸಾಮ್ರಾಜ್ಯದ ವಿರುದ್ಧ ಹೋರಾಡುವ ಅವನ ಕನಸು ನನಸಾಗುವ ಮೊದಲೇ ಚಿವುಟಿಹೋಯಿತು. ಟಿಪ್ಪುಎಲ್ಲರಿಗಿಂತ ಭಿನ್ನವಾಗಿದ್ದ ಎಂದು ಹೇಳಲು ಇದೇ ಸಾಕ್ಷಿ. ಪ್ರಾಂತೀಯ ರಾಜರುಗಳೆಲ್ಲರೂ ಬ್ರಿಟಿಷರ ವಿರುದ್ಧ ಹೋರಾಡಿದರಲ್ಲದೆ ಪರಸ್ಪರವೂ ಕಾದಾಡಿದರು. ಹೀಗಾಗುವುದು ಸಾಮಾನ್ಯವಾಗಿತ್ತು ಏಕೆಂದರೆ ತಮ್ಮ ಗಡಿಪ್ರದೇಶ ಒತ್ತುವರಿಗಳ ಉಳಿಸಿಕೊಳ್ಳಲು ಅವರಿಗೆ ಬ್ರಿಟಿಷರ ವಿರುದ್ಧ ಹೋರಾಡುವುದು ಅನಿವಾರ್ಯವಾಗಿತ್ತು. ಟಿಪ್ಪುಕಾಟಾಚಾರಕ್ಕಾಗಿ ಹೋರಾಡಲಿಲ್ಲ. ಅವನು ಯೋಜನೆಗಳನ್ನು ಹಾಕಿ ತಂತ್ರಜ್ಞಾನದ ಮೊರೆಹೋದ ಮತ್ತು ಬ್ರಿಟಿಷರನ್ನು ಹೊರಗೋಡಿಸಲು ಶಸ್ತ್ರಾಸತ್ತಗಳಲ್ಲದೆ ರಾಜತಾಂತ್ರಿಕ ತಂತ್ರಗಳನ್ನು ಉಪಯೋಗಿಸಲು ಸಿದ್ಧನಿದ್ದ.

ಮುಂದಾಲೋಚನೆ:
ಟಿಪ್ಪುಒಬ್ಬ ದಕ್ಷ ಮತ್ತು ಚತುರ ಆಡಳಿತಗಾರ. ಒಬ್ಬ ಒಳ್ಳೆಯ ಆಡಳಿತಗಾರನಿಗೆ ಇರಬೇಕಾದ ಜನ ಕಲ್ಯಾಣದ ಎಲ್ಲಾ ರೀತಿಯ ಕಳಕಳಿ ಆತನಿಗೆ ಇತ್ತು. ಭೂ ಸುಧಾರಣೆಗಳನ್ನು ತಂದಿದ್ದ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಂಯೋಜಿಸಿದ್ದು, ರೈತರಿಗೆ ಸಾಲ, ನೀರಾವರಿ ವ್ಯವಸ್ಥೆ, ತೋಟಗಾರಿಕೆ ಉಪಕರಣಗಳು, ಪಶು ಸಂಗೋಪನೆ, ರೇಷ್ಮೆ ತಯಾರಿಕೆ ವ್ಯಾಪಾರ ಉತ್ಪಾದನೆ ಮತ್ತು ಮಾರಾಟಗಳನ್ನು ಪ್ರಾರಂಭಿಸಿದ್ದ. ಟಿಪ್ಪುವನ್ನು ಬೇರೆ ರಾಜರಿಗೆ ಹೋಲಿಸಿದರೆ ಆತ ಪರಿಸ್ಥ್ಥಿತಿ ಗಳಿಗೆ ಅನುಗುಣವಾಗಿ ಜೀವನವನ್ನು ಪರಿವರ್ತಿಸಿಕೊಳ್ಳಲು ಬಹಳ ಆಸಕ್ತಿ ವಹಿಸುತ್ತಿದ್ದ. ಆತ ಬಗೆಬಗೆಯ ನಾಣ್ಯ, ಕ್ಯಾಲೆಂಡರ್, ತೂಕ, ಆಳತೆ, ಹಣಕಾಸು, ಆದಾಯ, ನ್ಯಾಯಾಂಗ, ಸೇನೆ, ನೌಕಾದಳ, ಹೈನುಗಾರಿಕೆ, ಸಾಮಾಜಿಕ ಪದ್ಧತಿಗಳ ಬಗ್ಗೆ, ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಬಹಳ ಗಮನಕೊಡುತ್ತಿದ್ದ. ಪ್ರಬಲವಾದ ಸಾಮ್ರಾಜ್ಯ ಕಟ್ಟಲು ಸೇನೆ ಮತ್ತು ನೌಕಾದಳಗಳ ಪ್ರಾಮುಖ್ಯವನ್ನು ಮನಗೊಂಡಿದ್ದ. ಆತ ರಕ್ಷಣೆ ಹಾಗೂ ವಾಣಿಜ್ಯ ವ್ಯಾಪಾರಿಗಳಿಗಾಗಿ ಹಡಗುಗಳನ್ನು ನಿರ್ಮಿಸಿದ್ದ. ವ್ಯಾಪಾರದ ಉದ್ದೇಶದಿಂದ 1785ರಲ್ಲಿ ಮಸ್ಕತ್ ಹಾಗೂ ಒಮಾನ್‌ಗೆ ಹಡಗುಗಳನ್ನು ಕಳುಹಿಸಿ ಕಾರ್ಖಾನೆಗಳನ್ನು ಸ್ಥಾಪಿಸಿದ್ದ. ಆತನ ಸಮಕಾಲೀನ ರಾಜರುಗಳಿಗೆ ಹೋಲಿಸಿದರೆ ಆತನ ಅಂತರ್‌ದೃಷ್ಟಿ ಪ್ರಗತಿ ಪರವಾಗಿದ್ದರಿಂದ ಆತ ಎಲ್ಲರಿಗಿಂತ ಭಿನ್ನವಾದ ಆಡಳಿತಗಾರನಾದದ್ದು.

ಒಬ್ಬ ಪ್ರಗತಿಪರ ರಾಷ್ಟ್ರೀಯವಾದಿ ಭಾರತೀಯನಲ್ಲಿರಬೇಕಾದ ಗುಣಗಳೆಲ್ಲವೂ ಟಿಪ್ಪುವಿನಲ್ಲಿ ಸಿಗುತ್ತವೆ. ಭಾರತೀಯ ರಾಷ್ಟ್ರೀಯವಾದ ಏನೆಂಬುದನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲದ ಕಾಲದಲ್ಲಿ ಆತ ವಾಸಿಸಿದ್ದ. ಅವನ ಸಮಕಾಲೀನರ್ಯಾರೂ ಇದನ್ನು ಅರ್ಥಮಾಡಿ ಕೊಳ್ಳಲಿಲ್ಲ. ಅವನ ಕಾಲದ ಅರಸರಿಗೆ ನೆರೆರಾಜ್ಯದ ವೈರಿಗಳು ಮತ್ತು ಪರರಾಜ್ಯದ ಸಾಮ್ರಾಜ್ಯಶಾಹಿ ಬ್ರಿಟಿಷರ ನಡುವಿನ ಅಂತರವೇ ತಿಳಿದಿರಲಿಲ್ಲ. ಸಾಮ್ರಾಜ್ಯಶಾಹಿ ವಸಾಹತುವಿನ ವಿರುದ್ಧ ಪ್ರಾದೇಶಿಕ ಶಕ್ತಿಗಳ ಒಂದು ಮಹಾಮೈತ್ರಿಕೂಟವನ್ನು ಕಟ್ಟಬೇಕು ಎಂಬ ಕಳಕಳಿ ಅವನಲ್ಲಿತ್ತು. ಅದರೆ ಆತ ಅದರಲ್ಲಿ ಸೋತ. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಬ್ರಿಟಿಷರ ಸೇನೆಯ ವಿರುದ್ಧ ಹೋರಾಡುತ್ತಲೇ ಪ್ರಾಣ ತ್ಯಾಗಮಾಡಿದ. ಆತನ ಸಾವಿನನಂತರ ಬ್ರಿಟಿಷರ ಪರ್ಯಾಯ ಆತಂಕಗಳೆಲ್ಲವೂ ಕೊನೆಗೊಂಡವು. ಅವರ ಸಾಮ್ರಾಜ್ಯ ಸ್ಥಾಪನೆಗೆ ಇದ್ದ ಬಹುದೊಡ್ಡ ಗಂಡಾಂತರ ದೂರವಾಗಿತ್ತು. ಇದರಿಂದ ಅವರ ಯೋಜನೆಗಳೆಲ್ಲವೂ ಯಶಸ್ವಿಯಾದವು. ಟಿಪ್ಪುವಿನ ನಂತರ 1857ರ ದಂಗೆಯು ಬ್ರಿಟಿಷ್ ವಸಾಹತುಶಾಹಿ ಸಾಮ್ರಾಜ್ಯಕ್ಕೆ ಬಹುದೊಡ್ಡ ಸವಾಲೊಡ್ಡಿತು. ಆದರೆ ಅವರು ಇದನ್ನೂ ಸಹ ಜಯಿಸಿದರು. ಏಕೆಂದರೆ ದೇಶದ ಅನೇಕ ಭಾಗಗಳು ಈ ದಂಗೆಯನ್ನು ಸಮರ್ಥಿಸಲೇ ಇಲ್ಲ. ಮತ್ತೆ ಕೆಲಭಾಗಗಳು ಇದನ್ನು ವಿರೋಧಿಸಿದವು. ಎಲ್ಲರೂ ಒಟ್ಟಾಗುವ ತನಕ ಬ್ರಿಟಿಷ್ ವಸಾಹತುಶಾಹಿ ಆಡಳಿತವನ್ನು ಭಾರತದಿಂದ ಹೊರ ಗೋಡಿಸಲು ಸಾಧ್ಯವಿಲ್ಲ ಎಂಬ ಮಾತು ನಿಜವಾಯಿತು. ಸುಮಾರು ಎರಡು ಶತಮಾನಗಳ ನಂತರ 1947ರಂದು ಟಿಪ್ಪುವಿನ ಕನಸು ನನಸಾಯಿತು. ಟಿಪ್ಪುವಿನ ಕಾಲದಿಂದ ಆರಂಭವಾದ ಸ್ವಾತಂತ್ರ್ಯ ಹೋರಾಟ ಕೊನೆಗೊಂಡಿದ್ದು 1947ರಂದು.

ಈಗ ಸ್ವಾತಂತ್ರ್ಯ ಸಂಭ್ರಮದೊಂದಿಗೆ ಟಿಪ್ಪುವಿನ ಬಾಂಧವ್ಯವನ್ನು ಅಲ್ಲಗೆಳೆಯುತ್ತಿದ್ದಾರೆ. ಈ ಎರಡು ಕಾಲಘಟ್ಟಗಳಲ್ಲೂ ಟಿಪ್ಪುವನ್ನು ಅಪಾರ್ಥಮಾಡಿಕೊಂಡಿ ರುವುದು ಬಹಳ ದುರದೃಷ್ಟಕರ. ಇಂದಿನಂತೆ ಅವನ ಕಾಲಘಟ್ಟದಲ್ಲೂ ಸಹ ಅವನ ವ್ಯಕ್ತಿತ್ವದ ಬಹುಮುಖ್ಯ ಯೋಜನೆಗಳು ಬೆಳಕಿಗೆ ಬರದೆ ಅವಹೇಳನಕ್ಕೆ ಗುರಿಯಾದವು. ಇವನ ಸಮಕಾಲೀನರ್ಯಾರೂ ಅವನ ರಾಷ್ಟ್ರೀಯತೆಯನ್ನು ಅರ್ಥಮಾಡಿ ಕೊಳ್ಳಲೇ ಇಲ್ಲ. ಏಕೆಂದರೆ ಅವರಿ�

Writer - ಶಾಕಿರಾ ಖಾನಂ, ಬೆಂಗಳೂರು

contributor

Editor - ಶಾಕಿರಾ ಖಾನಂ, ಬೆಂಗಳೂರು

contributor

Similar News