ಆಹಾರದಲ್ಲಿ ಹಲ್ಲಿ ಇದ್ದರೆ ನೀವು ತಿನ್ನುತ್ತೀರಾ?

Update: 2018-11-10 15:56 GMT

ಚೆನ್ನೈ, ನ. 10: ವಿಜಯ್ ನಟನೆಯ ‘ಸರ್ಕಾರ್’ ಚಿತ್ರದ ನಿರ್ದಿಷ್ಟ ದೃಶ್ಯದ ವಿರುದ್ಧದ ತನ್ನ ಪ್ರತಿಭಟನೆಯನ್ನು ಟೀಕಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಎಐಎಡಿಎಂಕೆ ಕೇವಲ ಸೆನ್ಸಾರ್ ಪ್ರಮಾಣೀಕರಣ ವಿವಾದಾತ್ಮಕ ದೃಶ್ಯಗಳನ್ನು ಸಮರ್ಥಿಸುವುದಿಲ್ಲ ಎಂದಿದೆ.

ದೀಪಾವಳಿಯಂದು ಬಿಡುಗಡೆಯಾದ ವಿಜಯ್ ಅವರ ‘ಸರ್ಕಾರ್’ ಚಿತ್ರದ ನಿರ್ದಿಷ್ಟ ದೃಶ್ಯದ ಬಗ್ಗೆ ಪ್ರತಿಭಟನೆ ನಡೆಸಿದ ಎಐಎಡಿಎಂಕೆಯನ್ನು ಶುಕ್ರವಾರ ರಜನಿಕಾಂತ್ ತರಾಟೆಗೆ ತೆಗೆದುಕೊಂಡಿದ್ದರು. ಸೆನ್ಸಾರ್ ಮಂಡಳಿ ಪ್ರಮಾಣೀಕರಿಸಿದ ಬಳಿಕ ಪ್ರತಿಭಟನೆ ನಡೆಸುತ್ತಿರುವ ಹಿಂದಿನ ವೈಚಾರಿಕತೆಯನ್ನು ರಜನಿಕಾಂತ್ ಪ್ರಶ್ನಿಸಿದ್ದರು. ಚಿತ್ರದ ಕೆಲವು ದೃಶ್ಯವನ್ನು ಕತ್ತರಿಸಬೇಕು ಎಂಬ ಆಗ್ರಹವನ್ನು ಅವರು ಖಂಡಿಸಿದ್ದರು. ರಜನಿಕಾಂತ್ ಅವರ ನಿಲುವನ್ನು ಎಐಎಡಿಎಂಕೆಯ ಮುಖವಾಣಿ ‘ನಮತು ಪುರಚ್ಚಿ ತಲೈವಿ ಅಮ್ಮಾ’ ದಲ್ಲಿ ಪ್ರಶ್ನಿಸಲಾಗಿದೆ.

‘‘ಖ್ಯಾತ ನಟ ಅಮಾಯಕ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಮಾಣೀಕರಣಗೊಂಡ ಪ್ಯಾಕ್ ಮಾಡಿದ ಆಹಾರದಲ್ಲಿ ಹಲ್ಲಿ ಇದ್ದರೆ, ಪ್ರಮಾಣೀಕರಣಗೊಂಡಿದೆ ಎಂದು ನೀವು ತಿನ್ನುತ್ತೀರಾ ? ಅಥವಾ ಎಸೆಯುತ್ತೀರಾ ?’’ ಎಂದು ಅದು ಪ್ರಶ್ನಿಸಿದೆ. ರಜನಿಕಾಂತ್ ಅವರು ಚಿತ್ರ ನಿರ್ದೇಶಕ ಎ.ಆರ್. ಮುರುಗದಾಸ್‌ಗೆ ಸಲಹೆ ನೀಡಲಿ. ಸೆನ್ಸಾರ್ ಪ್ರಮಾಣಪತ್ರ ತೋರಿಸುವ ಮೂಲಕ ಅವರನ್ನು ರಕ್ಷಿಸುವುದು ಬೇಡ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News