×
Ad

ಮೋದಿಗಿಂತ ಸ್ಟಾಲಿನ್ ಉತ್ತಮ: ಚಂದ್ರಬಾಬು ನಾಯ್ಡು

Update: 2018-11-10 23:04 IST

ಚೆನ್ನೈ, ನ. 41: ಪ್ರಧಾನಿ ನರೇಂದ್ರ ಮೋದಿಗಿಂತ ಡಿಎಂಕೆ. ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಉತ್ತಮ ಎಂದು ತೆಲುಗುದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಚಂದ್ರಬಾಬು ನಾಯ್ಡು, ತಾನು ಬಿಜೆಪಿ ವಿರೋಧಿ ರಂಗದ ಮುಖ್ಯಸ್ಥ ಅಲ್ಲ. ಮೈತ್ರಿ ರಂಗದ ನೇತೃತ್ವವನ್ನು ಯಾರು ವಹಿಸಬೇಕು ಎಂಬ ಪ್ರಶ್ನೆಯನ್ನು ಅನಂತರ ಪರಿಹರಿಸಲಾಗುವುದು ಎಂದರು. ನೀವು ಬಿಜೆಪಿ ವಿರೋಧಿ ಮೈತ್ರಿ ರಂಗದ ನಾಯಕರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚಂದ್ರಬಾಬು ನಾಯ್ಡು, ತಾನು ಮೈತ್ರಿ ರಂಗದ ನಾಯಕ ಅಲ್ಲ. ತಾನು ಸ್ಪಷ್ಟವಾಗಿ ಹೇಳುತ್ತೇನೆ, ತಾನು ನಾಯಕ ಅಭ್ಯರ್ಥಿ ಅಲ್ಲ. ತಾನು ಕೇವಲ ಪ್ರೇರಕ. ತಾನು ಎಲ್ಲರನ್ನೂ ಸಂಘಟಿಸಲು ಪ್ರಯತ್ನಿಸುತ್ತಿದ್ದೇನೆ. ಮೈತ್ರಿ ರಂಗದ ನಾಯಕನ ಬಗ್ಗೆ ಅನಂತರ ನಿರ್ಧರಿಸಲಿದ್ದೇವೆ ಎಂದು ಅವರು ಹೇಳಿದರು.

ಮೈತ್ರಿ ರಂಗವನ್ನು ಮುನ್ನಡೆಸಲು ಹಲವು ನಾಯಕರು ಇದ್ದಾರೆ. ಸ್ಟಾಲಿನ್ ಕೂಡ ಮೋದಿಗಿಂತ ಉತ್ತಮ. ಅಲ್ಲದೆ, ಇಲ್ಲಿ ಹಲವು ಉತ್ತಮ ನಾಯಕರಿದ್ದಾರೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಪಾನ್ ಇಂಡಿಯಾವನ್ನು ಪ್ರಸ್ತುತಪಡಿಸುತ್ತಿರುವಾಗ ಚಂದ್ರಬಾಬು ನಾಯ್ಡು ಅವರು, ತಾನು ಸೇರಿದಂತೆ ಆಯಾ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಮಮತಾ ಬ್ಯಾನರ್ಜಿ, ಸ್ಟಾಲಿನ್, ದೇವೇಗೌಡ ಅವರಂತಹ ಪ್ರಾದೇಶಿಕ ನಾಯಕರನ್ನು ಬಿಜೆಪಿ ವಿರುದ್ಧ ಸಂಘಟಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News