ಐಸಿಸಿ ಮಹಿಳಾ ವಿಶ್ವಕಪ್: ಪಾಕ್ ವಿರುದ್ದ ಭಾರತಕ್ಕೆ ಭರ್ಜರಿ ಜಯ

Update: 2018-11-11 18:26 GMT

ಗಯಾನ, ನ.11: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಎರಡನೇ ಗ್ರೂಪ್ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು. ಬಿಸ್ಮಾ ಮರೂಫ್(53) ಹಾಗೂ ನಿದಾ ದಾರ್(52)ಅರ್ಧಶತಕ ಸಿಡಿಸಿದರು.

ಭಾರತದ ಪರ ದಯಾಳ್ ಹೇಮಲತಾ(2-34) ಹಾಗೂ ಪೂನಮ್ ಯಾದವ್(2-22) ತಲಾ ಎರಡು ವಿಕೆಟ್ ಪಡೆದರು.

ಗೆಲ್ಲಲು 134 ರನ್ ಸವಾಲು ಪಡೆದ ಭಾರತದ ಪರ ಆರಂಭಿಕ ಆಟಗಾರ್ತಿ ಮಿಥಾಲಿ ರಾಜ್(56 ರನ್,47 ಎಸೆತ, 7 ಬೌಂಡರಿ)ಅರ್ಧಶತಕ ಸಿಡಿಸಿ ತಂಡ 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲು ನೆರವಾದರು.

ಟೂರ್ನಿಯ ಮೊದಲ ಪಂದ್ಯದಲ್ಲಿ ವಿಶ್ವದ ನಂ.2ನೇ ತಂಡ ನ್ಯೂಝಿಲೆಂಡ್‌ನ್ನು 34 ರನ್‌ನಿಂದ ಮಣಿಸಿದ ಭಾರತ ಶುಭಾರಂಭ ಮಾಡಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕಿವೀಸ್ ವಿರುದ್ಧ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. 18ರ ಹರೆಯದ ಜೆಮಿಮಾ ರೊಡ್ರಿಗಸ್ 4ನೇ ಅರ್ಧಶತಕ ಸಿಡಿಸಿದ್ದರು.

ಮತ್ತೊಂದೆಡೆ ಪಾಕಿಸ್ತಾನ ತಂಡ ಶುಕ್ರವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 52 ರನ್‌ಗಳಿಂದ ಸೋತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News