ಆರ್‌ಬಿಐ ಗವರ್ನರ್‌ರನ್ನು ಭೇಟಿಯಾಗಿದ್ದ ಪ್ರಧಾನಿ ಮೋದಿ : ವರದಿ

Update: 2018-11-13 05:20 GMT

ಹೊಸದಿಲ್ಲಿ, ನ.13: ಸ್ವಾಯತ್ತತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕೇಂದ್ರ ಸರಕಾರ ಹಾಗೂ ಆರ್‌ಬಿಐ ನಡುವೆ ತೀವ್ರ ಸಂಘರ್ಷ ನಡೆಯುತ್ತಿರುವಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(ಆರ್‌ಬಿಐ)ಗವರ್ನರ್ ಉರ್ಜಿತ್ ಪಟೇಲ್ ಕಳೆದ ವಾರ ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.

 ಈ ಇಬ್ಬರು ಶುಕ್ರವಾರ ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮುಂದಿನ ಸೋಮವಾರ ಆರ್‌ಬಿಐನ ಮಂಡಳಿ ಸಭೆ ನಡೆಯುವ ನಿರೀಕ್ಷೆಯಿದೆ.

ಆರ್‌ಬಿಐ ಗವರ್ನರ್ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ತನ್ನ ಸರಕಾರದ ದೃಷ್ಟಿಕೋನದ ಬಗ್ಗೆ ವಿವರಣೆ ನೀಡಿದ್ದಲ್ಲದೆ, ತನ್ನ ಸರಕಾರ ಜನರಿಗೆ ಉತ್ತರ ನೀಡಲಿದೆ ಎಂದು ತಿಳಿಸಿದ್ದಾಗಿ ಮೂಲಗಳು ತಿಳಿಸಿವೆ.

ಚುನಾವಣಾ ವರ್ಷದಲ್ಲಿ ಭಾರೀ ಹಣಕಾಸು ಸಮಸ್ಯೆ ಎದುರಿಸುತ್ತಿರುವ ಕೇಂದ್ರ ಸರಕಾರ ಆರ್‌ಬಿಐನಲ್ಲಿ ಮೀಸಲಿರುವ 1 ಲಕ್ಷ ಕೋಟಿ ರೂ. ಹಣ ನೀಡುವಂತೆ ಬೇಡಿಕೆ ಇಡುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News