ತಾಯಿಯಿಂದ ನವಜಾತ ಶಿಶುವನ್ನು ಸೆಳೆದು ಕಚ್ಚಿ ಸಾಯಿಸಿದ ಕೋತಿ

Update: 2018-11-13 11:26 GMT
ಸಾಂದರ್ಭಿಕ ಚಿತ್ರ

ಆಗ್ರಾ,ನ.13 : ತನ್ನ ತಾಯಿಯ ಜತೆಗಿದ್ದ 12 ದಿನ ಪ್ರಾಯದ ಶಿಶುವನ್ನು ಕೋತಿಯೊಂದು ಸೆಳೆದು  ಓಡಿ ಹೋಗಿ ಕಚ್ಚಿ ಸಾಯಿಸಿದ ಘಟನೆ  ಆಗ್ರಾದ ಮೊಹಲ್ಲಾ ಕಚ್ಚೇರಾ ಪ್ರದೇಶದಿಂದ ವರದಿಯಾಗಿದೆ. ಮಗು ನಂತರ ನೆರೆಮನೆಯವರ ಟೆರೇಸಿನಲ್ಲಿ ತೀವ್ರ ಗಾಯಗಳೊಂದಿಗೆ ಪತ್ತೆಯಾಗಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಶಿಶು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು. ಇದನ್ನು ನಂಬಲು ಅಸಾಧ್ಯವಾಗಿ ಕುಟುಂಬ ಶಿಶುವನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ಯಿತಾದರೂ ಪ್ರಯೋಜನವಾಗಲಿಲ್ಲ.

ಸನ್ನಿ ಎಂಬ ಹೆಸರಿನ ಶಿಶುವಿಗೆ ತಾಯಿ ಎದೆ ಹಾಲು ನೀಡುತ್ತಿದ್ದಾಗ ಈ ಘಟನೆ ನಡೆದಿದ್ದು ಏನಾಯಿತೆಂದು ತಿಳಿಯುವುದರೊಳಗಾಗಿ ಕೋತಿ ಮಗುವನ್ನು ಸೆಳೆದು ಓಡಿ ಹೋಗಿತ್ತು. ಕುಟುಂಬ ಸದಸ್ಯರು ಕೋತಿಯನ್ನು ಹೆದರಿಸಲು ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ.

ಕೋತಿಗಳ ನೈಸರ್ಗಿಕ ವಾಸ ಸ್ಥಳಗಳು ನಾಶಗೊಂಡಿರುವುದರಿಂದ ಅವುಗಳು ಆಕ್ರಮಣಕಾರಿಯಾಗಿ ವರ್ತಿಸುತ್ತಿವೆ ಹಾಗೂ ಮಹಿಳೆಯರು ಮಕ್ಕಳ ಮೇಲೆ ದಾಳಿ  ನಡೆಸುತ್ತಿವೆ ಎಂದು ಪರಿಸರ ಕಾರ್ಯಕರ್ತ ಶ್ರವಣ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News