ಮಹಿಳೆಯರನ್ನು ವಶೀಕರಿಸಲು ಗೂಬೆ ಬಲಿ ನೀಡಿದ !

Update: 2018-11-13 15:27 GMT

ಹೊಸದಿಲ್ಲಿ, ನ. 13: ಮಹಿಳೆಯರನ್ನು ವಶೀಕರಿಸಲು 40 ವರ್ಷದ ವ್ಯಕ್ತಿಯೋರ್ವ ಗೂಬೆಯೊಂದನ್ನು ಬಲಿ ನೀಡಿದ ಘಟನೆ ದಿಲ್ಲಿಯ ಹೊರವಲಯದ ಸುಲ್ತಾನ್‌ಪುರಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೂಬೆಯನ್ನು ಹತ್ಯೆಗೈದ ಆರೋಪಿಯನ್ನು ಟ್ರಕ್ ಚಾಲಕ ಕನ್ನಯ್ಯ ಎಂದು ಗುರುತಿಸಲಾಗಿದೆ. ಭಾರತದ ಪ್ರಾಣಿ ಕಲ್ಯಾಣ ಮಂಡಳಿ ನೀಡಿದ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ನವೆಂಬರ್ 11ರಂದು ಈ ವ್ಯಕ್ತಿಯನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ದಾಳಿ ನಡೆಸಲಾಯಿತು. ಈ ಸಂದರ್ಭ ಮನೆಯಲ್ಲಿದ್ದ ಕೂಲರ್‌ನ ಒಳಗಡೆ ಗೂಬೆಯ ಅವಶೇಷ ಪತ್ತೆಯಾಯಿತು . ವಿಚಾರಣೆ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

  ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಗೂಬೆಯ ಬಲಿ ಹಾಗೂ ಅದರ ಆಚರಣೆಗಳನ್ನು ಯೂ ಟ್ಯೂಬ್‌ನಲ್ಲಿ ನೋಡಿ ಅದರಂತೆ ಮಾಡಿದೆ ಎಂದು ಆರೋಪಿ ಪೊಲೀಸರಲ್ಲಿ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News