ಶ್ರೀಲಂಕಾಕ್ಕೆ ಅಲ್ಪ ಮುನ್ನಡೆ

Update: 2018-11-15 18:28 GMT

ಕ್ಯಾಂಡಿ(ಶ್ರೀಲಂಕಾ), ನ.15: ರೋಶನ್ ಸಿಲ್ವಾ ಸಿಡಿಸಿದ ತಾಳ್ಮೆಯ ಅರ್ಧಶತಕದ ಕೊಡುಗೆ(85 ರನ್,174 ಎಸೆತ, 4 ಬೌಂಡರಿ, 1 ಸಿಕ್ಸರ್)ನೆರವಿನಿಂದ ಶ್ರೀಲಂಕಾ ತಂಡ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 46 ರನ್ ಮುನ್ನಡೆ ಸಾಧಿಸಿದೆ.

2ನೇ ಟೆಸ್ಟ್‌ನ 2ನೇ ದಿನವಾದ ಗುರುವಾರ ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ 290 ರನ್‌ಗೆ ಉತ್ತರವಾಗಿ ಶ್ರೀಲಂಕಾ 336 ರನ್ ಗಳಿಸಿ ಆಲೌಟಾಗಿದೆ. ಹಂಗಾಮಿ ನಾಯಕ ಸುರಂಗ ಲಕ್ಮಲ್ ಔಟಾಗದೆ 15 ರನ್ ಗಳಿಸಿದ್ದಾರೆ.

ಇಂದು ಮೊದಲ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ 31 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಆಗ 3ನೇ ವಿಕೆಟ್‌ಗೆ 96 ರನ್ ಜೊತೆಯಾಟ ನಡೆಸಿದ ಆರಂಭಿಕ ಆಟಗಾರ ಡಿ.ಕರುಣರತ್ನೆ(63) ಹಾಗೂ ಧನಂಜಯ ಡಿಸಿಲ್ವಾ(59)ತಂಡವನ್ನು ಆಧರಿಸಿದರು. ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನೇರ ಎಸೆತದಿಂದ ಕರುಣರತ್ನೆ ಅವರನ್ನು ರನೌಟ್ ಮಾಡಿ ಈ ಜೋಡಿಯನ್ನು ಬೇರ್ಪಡಿಸಿದರು.

ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಪಡೆದ ಸ್ಟೋಕ್ಸ್ ಅವರು ಕುಶಾಲ್ ಮೆಂಡಿಸ್‌ರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇಂಗ್ಲೆಂಡ್‌ನ ಪರ ಲೀಚ್(3-70) ಹಾಗೂ ರಶೀದ್(3-75)ತಲಾ 3 ವಿಕೆಟ್‌ಗಳನ್ನು ಪಡೆದರೆ, ಮೊಯಿನ್ ಅಲಿ(2-85)ಎರಡು ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News