ದ್ವೇಷಭಾಷಣ ಅಳಿಸಲು ಫೇಸ್‌ಬುಕ್‌ನಿಂದ ಸ್ವತಂತ್ರ ಸಮಿತಿ

Update: 2018-11-16 16:58 GMT

ಸ್ಯಾನ್‌ಫ್ರಾನ್ಸಿಸ್ಕೊ, ನ. 16: ಫೇಸ್‌ಬುಕ್‌ನಿಂದ ಯಾವ ವಿಷಯವನ್ನು ಅಳಿಸಿ ಹಾಕಬೇಕು ಎಂಬುದನ್ನು ನಿರ್ಧರಿಸಲು ಸ್ವತಂತ್ರ ಸಮಿತಿಯೊಂದನ್ನು ರಚಿಸುವುದಾಗಿ ಫೇಸ್‌ಬುಕ್ ಗುರುವಾರ ಪ್ರಕಟಿಸಿದೆ.

‘ದ್ವೇಷ ಭಾಷಣ’ ಮತ್ತು ನಿಯಮಗಳನ್ನು ಉಲ್ಲಂಘಿಸುವ ಇತರ ಸಂದೇಶಗಳನ್ನು ತಕ್ಷಣ ಪತ್ತೆಹಚ್ಚುವ ಸಾಮರ್ಥ್ಯವನ್ನು ತಾನು ವೃದ್ಧಿಸಿಕೊಂಡಿರುವುದಾಗಿ ಫೇಸ್‌ಬುಕ್ ಹೇಳಿದ ಬೆನ್ನಿಗೇ ಈ ಘೋಷಣೆಯನ್ನು ಮಾಡಲಾಗಿದೆ.

ಕೃತಕ ತಂತ್ರಜ್ಞಾನ ಆಧಾರಿತ ಗುಪ್ತಚರ ಸಾಫ್ಟ್‌ವೇರ್‌ನ ಗಮನಕ್ಕೆ ಬರುವ ಅಥವಾ ಬಳಕೆದಾರರು ವರದಿ ಮಾಡುವ ಸಂದೇಶಗಳನ್ನು ಫೇಸ್‌ಬುಕ್ ಅಭಿವೃದ್ಧಿಗೊಳಿಸುತ್ತಿರುವ ಆಂತರಿಕ ವ್ಯವಸ್ಥೆಯೊಂದು ಪರಿಶೀಲನೆಗೆ ಗುರಿಪಡಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News