ನಕಲಿ ಅಂಕಪಟ್ಟಿ : ಅಂಕಿವ್ ಬೈಸೋಯ ದಾಖಲಾತಿಯನ್ನು ರದ್ದುಗೊಳಿಸಿದ ದಿಲ್ಲಿ ವಿವಿ

Update: 2018-11-17 11:17 GMT

ಹೊಸದಿಲ್ಲಿ,ನ.17 : ಗುರುವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದ ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಅಂಕಿವ್ ಬೈಸೋಯ ಅವರು ವಿವಿಯ ಬೌದ್ಧ ಧರ್ಮ ಅಧ್ಯಯನ ವಿಭಾಗಕ್ಕೆ ಪಡೆದಿದ್ದ ಪ್ರವೇಶಾತಿಯೂ ರದ್ದುಗೊಂಡಿದೆ. ಬೈಸೋಯ ಅವರ ಪದವಿಗೆ ಸಂಬಂಧಿಸಿದ ಅಂಕ ಪಟ್ಟಿ ನಕಲಿಯಾಗಿದೆ ಎಂದು ತಿರುವಲ್ಲುವರ್ ವಿವಿ ದೃಢೀಕರಿಸಿ ಪತ್ರ ಬರೆದ ನಂತರ ದಿಲ್ಲಿ ವಿವಿ ಈ ಕ್ರಮ ಕೈಗೊಂಡಿದೆ. ಎಬಿವಿಪಿ ಈಗಾಗಲೇ ಬೈಸೋಯ ಅವರನ್ನು ಸಂಘಟನೆಯಿಂದ ಉಚ್ಛಾಟಿಸಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ದಿಲ್ಲಿ ವಿವಿ ವಿದ್ಯಾರ್ಥಿ ಯೂನಿಯನ್ ಕಾರ್ಯದರ್ಶಿ, ಎನ್‍ಎಸ್‍ಯುಐ ಸಂಘಟನೆಯ ಆಕಾಶ್ ಚೌಧುರಿ ಅವರು ಉಪಕುಲಪತಿಗಳಿಗೆ ಮನವಿ ಸಲ್ಲಿಸಿ ಹೊಸದಾಗಿ ಚುನಾವಣೆ ನಡೆಸುವಂತೆ ಕೋರಿದ್ದಾರೆ.

ತರುವಾಯ  ವಿವಿ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೆಚ್ಚುವರಿ ಡಿಸಿಪಿ (ಉತ್ತರ) ಹರೇಂದ್ರ ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಸರ್ಜಿಕಲ್ ಸ್ಟ್ರೈಕ್ ಪದವನ್ನು ಸ್ವಲ್ಪ ಬದಲಾಯಿಸಿ ದಿಲ್ಲಿ ವಿವಿಯಲ್ಲಿ ನಡೆಯುತ್ತಿರುವುದು ಫಾರ್ಝಿಕಲ್ ಸ್ಟ್ರೈಕ್ ಎಂದಿದ್ದಾರೆ. ಉರ್ದು ಭಾಷೆಯಲ್ಲಿ ಫಾರ್ಝಿ ಪದದ ಅರ್ಥ ನಕಲಿ ಎಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News