ನಿರ್ಭಯಾ ನಿಧಿ ಅಡಿಯಲ್ಲಿ 1,023 ತ್ವರಿತ ನ್ಯಾಯಾಲಯ ಸ್ಥಾಪನೆಗೆ ಸರಕಾರ ಅನುಮೋದನೆ

Update: 2018-11-17 16:12 GMT

ಹೊಸದಿಲ್ಲಿ, ನ. 17: ಅತ್ಯಾಚಾರ ಹಾಗೂ ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾಯ್ದೆ-2012 ಅಡಿ ಭಾರತದಾತ್ಯಂತ ಬಾಕಿ ಇರುವ ಪ್ರಕರಣಗಳ ವಿಲೇವಾರಿಗೆ ನಿರ್ಭಯ ನಿಧಿ ಅಡಿ 1023 ತ್ವರಿತ ನ್ಯಾಯಾಲಯ ಆರಂಭಿಸಲು ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ ಶುಕ್ರವಾರ ಅನುಮೋದನೆ ನೀಡಿದೆ.

ಕಾನೂನು ಸಚಿವಾಲಯದ ನ್ಯಾಯ ಇಲಾಖೆ ಈ ಪ್ರಸ್ತಾಪವನ್ನು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ನಿರ್ಭಯಾ ನಿಧಿ ಅಡಿಯಲ್ಲಿ ಬರುವ ಸಬಲೀಕೃತ ಅಧಿಕಾರಿಗಳ ಸಮಿತಿಗೆ ಸಲ್ಲಿಸಿದೆ. ಈ ಯೋಜನೆಗೆ ತಗಲುವ ಒಟ್ಟು ವೆಚ್ಚ 767.25 ಕೋ. ರೂ. ಮೊದಲ ಹಂತದಲ್ಲಿ 9 ರಾಜ್ಯಗಳಲ್ಲಿ 777 ಹಾಗೂ ಎರಡನೇ ಹಂತದಲ್ಲಿ 246 ತ್ವರಿತ ವಿಚಾರಣಾ ನ್ಯಾಯಾಲಯ ಆರಂಭಿಸಲಾಗುವುದು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಗೌರವ ಹಾಗೂ ಸುರಕ್ಷೆ ಕಾಯ್ದುಕೊಳ್ಳಲು 2013ರಲ್ಲಿ ನಿರ್ಭಯಾ ನಿಧಿ ರೂಪಿಸಲಾಗಿದೆ. ಆರ್ಥಿಕ ವ್ಯವಹಾರಗಳ ಇಲಾಖೆಯ ಸಾರ್ವಜನಿಕ ಖಾತೆಯಲ್ಲಿ ಹಣ ಸಂಗ್ರಹಿಸುವ ಮೂಲಕ ಈ ನಿಧಿ ಸೃಷ್ಟಿಸಲಾಗಿದೆ. ಈ ನಿಧಿಯಲ್ಲಿ 2,000 ಕೋ. ರೂ. ಜಮಾ ಮಾಡಲಾಗಿದೆ ಎಂದು ಅದು ತಿಳಿಸಿದೆ.

ನಿರ್ಭಯಾ ನಿಧಿ ಅಡಿಯಲ್ಲಿ 2014-15 ಹಣಕಾಸು ವರ್ಷದಲ್ಲಿ 1,000 ಕೋ. ರೂ. ನೀಡಲಾಗಿದೆ. 2017-18 ಹಾಗೂ 2017-18ನೇ ಹಣಕಾಸು ವರ್ಷದಲ್ಲಿ ತಲಾ 550 ಕೋ. ರೂ. ನೀಡಲಾಗಿದೆ. ನಿರ್ಭಯಾ ನಿಧಿಗಾಗಿ 2017-18 ವರೆಗೆ ಸಾರ್ವಜನಿಕ ಖಾತೆಗೆ ವರ್ಗಾಯಿಸಲಾದ ಹಣ 3,100 ಕೋ. ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News