ನ. 30ರಂದು ಹಸ್ಮುಖ್ ಅಧಿಯಾ ನಿವೃತ್ತ: ಅರುಣ್ ಜೇಟ್ಲಿಯಿಂದ ಪ್ರಶಂಸೆ

Update: 2018-11-17 17:30 GMT

ಹೊಸದಿಲ್ಲಿ, ನ. 17: ನವೆಂಬರ್ 30ರಂದು ನಿವೃತ್ತರಾಗಲಿರುವ ಹಣಕಾಸು ಕಾರ್ಯದರ್ಶಿ ಹಸ್ಮುಖ್ ಅಧಿಯ ಅವರನ್ನು ಶನಿವಾರ ಪ್ರಶಂಸಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ವೃತ್ತಿಪರತೆಯಿಂದ ಕಾರ್ಯ ನಿರ್ವಹಿಸುವ ಅಧಿಯ ಅಸಮರ್ಪಕ ನಾಗರಿಕ ಸೇವಾ ಅಧಿಕಾರ ಅಲ್ಲ ಎಂದಿದ್ದಾರೆ.

 ‘ಡಾ. ಹಸ್ಮುಖ್ ಅಧಿಯಾ ನಿವೃತ್ತ’ ಎಂಬ ಪೇಸ್‌ಬುಕ್ ಪೋಸ್ಟ್‌ನಲ್ಲಿ ಜೇಟ್ಲಿ ಅವರು, ಅಧಿಯಾ ಹೆಚ್ಚು ಸಮರ್ಥ, ಶಿಸ್ತುಬದ್ಧ, ಅಸಮರ್ಪಕರಲ್ಲದ ಹಾಗೂ ಕಳಂಕರಹಿತ ನಿಷ್ಠಾವಂತ ನಾಗರಿಕ ಸೇವಾ ಅಧಿಕಾರಿ ಎಂದಿದ್ದಾರೆ. ಅವರ ಕರ್ತವ್ಯದಲ್ಲಿನ ಏಕೈಕ ಮಾರ್ಗ ಪಲ್ಲಟವೆಂದರೆ, ಆಧ್ಯಾತ್ಮ ಹಾಗೂ ಯೋಗ ಕುರಿತ ಅವರ ಆಕರ್ಷಣೆ ಎಂದು ಅವರು ಹೇಳಿದ್ದಾರೆ. ನಿವೃತ್ತರಾಗುತ್ತಿರುವ ಹಣಕಾಸು ಕಾರ್ಯದರ್ಶಿ ಅವರ ಸಾಮರ್ಥ್ಯ ಹಾಗೂ ಅನುಭವವನ್ನು ಸರಕಾರ ಬಳಸಿಕೊಳ್ಳಲಿದೆ ಎಂದು ಜೇಟ್ಲಿ ಹೇಳಿದರು. 2018 ನವೆಂಬರ್ 30ರ ಬಳಿಕ ಒಂದೇ ಒಂದು ದಿನ ಕೆಲಸ ಮಾಡಲಾರೆ ಎಂದು ಈ ವರ್ಷದ ಆರಂಭದಲ್ಲಿ ಅವರು ನನಗೆ ಮಾಹಿತಿ ನೀಡಿದ್ದರು. ನಿವೃತ್ತಿಯ ಬಳಿಕ ಅವರು ತಮ್ಮ ಸಮಯವನ್ನು ಅವರ ಆಸಕ್ತಿದಾಯಕ ವಿಚಾರಕ್ಕೆ ಹಾಗೂ ಪುತ್ರನಿಗೆ ಮೀಸಲಿಡಲಿದ್ದಾರೆ ಎಂದು ಜೇಟ್ಲಿ ಬರೆದುಕೊಂಡಿದ್ದಾರೆ. 1981 ಬ್ಯಾಂಚ್‌ನ ಐಎಎಸ್ ಅಧಿಕಾರಿಯಾಗಿರುವ ಆಧಿಯಾ ಅವರು ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ 2014 ನವೆಂಬರ್‌ನಲ್ಲಿ ಹಣಕಾಸು ಸೇವೆ ಇಲಾಖೆಯ ಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News