ಟ್ರಕ್ ನಿರ್ವಾಹಕನಿಗೆ ಗೋರಕ್ಷಕರಿಂದ ಇರಿತ

Update: 2018-11-18 16:39 GMT

ಗಾಂಧಿನಗರ, ನ. 18: ಅಹ್ಮದಾಬಾದ್‌ನ ರಾಮೋಲ್ ಪ್ರದೇಶದಲ್ಲಿ ದೀಸಾದಿಂದ ಬರುತ್ತಿದ್ದ ಟ್ರಕ್‌ನ ನಿರ್ವಾಹಕನಿಗೆ ಗೋರಕ್ಷಕರು ಇರಿದ ಘಟನೆ ಶನಿವಾರ ತಡ ರಾತ್ರಿ ನಡೆದಿದೆ.

ಕಡ್ಡಾಯವಾಗಿರುವ ದಾಖಲೆ ಹಾಗೂ ಅನುಮತಿ ಪತ್ರ ಇಲ್ಲದೆ ಉತ್ತರ ಗುಜರಾತ್‌ನ ದೀಸಾದಿಂದ ದಕ್ಷಿಣ ಗುಜರಾತ್‌ನ ಭರೌಚಕ್ಕೆ ಟ್ರಕ್‌ನಲ್ಲಿ ಸುಮಾರು 30 ಕೋಣಗಳನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ರಾಮೋಲ್ ಪೊಲೀಸರು ವರದಿಗಳನ್ನು ದಾಖಲಿಸಿಕೊಂಡಿದ್ದಾರೆ. ಚಾಲಕ, ನಿರ್ವಾಹಕನ ವಿರುದ್ಧ ಹಾಗು ದಾಳಿ ನಡೆಸಿದ ನಾಲ್ವರು ಗೋರಕ್ಷಕರ ವಿರುದ್ಧ ಪ್ರಕರಣ ದಾಖಲಾಗಿದೆ.

ನಿರ್ವಾಹಕನಿಗೆ ಅಹ್ಮದಾಬಾದ್ ನಾಗರಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಟ್ರಕ್ ಚಾಲಕ ಮುಸ್ತಾಫಾ ಅವರನ್ನು ಬಂಧಿಸಲಾಗಿದೆ. ಚಾಲಕನ ಮೇಲೆ ದಾಳಿ ನಡೆಸಿದ ಗೋರಕ್ಷಕರನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News