ಮತಯಾಚಿಸಲು ಬಂದ ಬಿಜೆಪಿ ಶಾಸಕನಿಗೆ ಚಪ್ಪಲಿಹಾರದ ಸ್ವಾಗತ!

Update: 2018-11-20 09:58 GMT

ಹೊಸದಿಲ್ಲಿ, ನ.20: ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಯಾಚನೆಗೆ ತೆರಳಿದ್ದ ಮಧ್ಯ ಪ್ರದೇಶದ ಬಿಜೆಪಿ ಶಾಸಕರೊಬ್ಬರನ್ನು ವ್ಯಕ್ತಿಯೊಬ್ಬ ಚಪ್ಪಲಿಹಾರ ಹಾಕಿ ಸ್ವಾಗತಿಸಿದ ಘಟನೆ ನಡೆದಿದೆ. ಮಧ್ಯಪ್ರದೇಶದ ನಗಾಡ ಕಚ್ರೋದ್ ನಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಜೆಪಿ ಟೋಪಿ ಧರಿಸಿದ್ದ ವ್ಯಕ್ತಿಯೊಬ್ಬ ತನಗೆ ಚಪ್ಪಲಿ ಹಾರ ಹಾಕಿದ್ದನ್ನು ತಿಳಿದುಕೊಳ್ಳಲು ಬಿಜೆಪಿ ಶಾಸಕ ದಿಲೀಪ್ ಶೆಖಾವತ್ ಗೆ ಗೊತ್ತಾಗಲು ತಡವಾಗಲಿಲ್ಲ. ಕೂಡಲೇ ಅವರು ಅದನ್ನು ಕಿತ್ತೆಸೆದು, ಆ ವ್ಯಕ್ತಿಗೆ ಹಲ್ಲೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News