80 ಶೇ. ಮಲೇರಿಯ ಪ್ರಕರಣಗಳು ಭಾರತ, ಆಫ್ರಿಕ ದೇಶಗಳಲ್ಲಿ: ವಿಶ್ವ ಆರೋಗ್ಯ ಸಂಸ್ಥೆ ವರದಿ

Update: 2018-11-20 17:51 GMT

ವಿಶ್ವಸಂಸ್ಥೆ, ನ. 20: ಕಳೆದ ವರ್ಷ ವರದಿಯಾದ ಜಾಗತಿಕ ಮಲೇರಿಯ ಪ್ರಕರಣಗಳ ಪೈಕಿ 80 ಶೇಕಡದಷ್ಟು ಪ್ರಕರಣಗಳು ಭಾರತ ಮತ್ತು 15 ಸಹಾರ ಆಫ್ರಿಕ ದೇಶಗಳಲ್ಲಿ ಕಾಣಿಸಿಕೊಂಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ವರದಿಯೊಂದು ಹೇಳಿದೆ.

ಭಾರತದ 125 ಕೋಟಿ ಜನತೆ ಸೊಳ್ಳೆಯಿಂದ ಹರಡುವ ಈ ರೋಗಕ್ಕೆ ತುತ್ತಾಗುವ ಅಪಾಯವಿದೆ ಎಂಬುದಾಗಿಯೂ ಅದು ಎಚ್ಚರಿಸಿದೆ.

ಆದಾಗ್ಯೂ, 2016ಕ್ಕೆ ಹೋಲಿಸಿದರೆ 2017ರಲ್ಲಿ ಭಾರತದಲ್ಲಿ ಮಲೇರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಈ ರೀತಿ ಇಳಿಕೆ ಸಾಧಿಸಿದ ಏಕೈಕ ದೇಶ ಭಾರತವಾಗಿದೆ ಎಂಬುದಾಗಿಯೂ ಡಬ್ಲುಎಚ್‌ಒ ವರದಿ ತಿಳಿಸಿದೆ.

ಜಾಗತಿಕ ಮಲೇರಿಯ ಪ್ರಕರಣಗಳ ಸುಮಾರು ಅರ್ಧದಷ್ಟು ಪ್ರಕರಣಗಳು ಐದು ದೇಶಗಳಿಂದ ವರದಿಯಾಗಿದೆ ಎಂದು ಅದು ಹೇಳಿದೆ. ಅವುಗಳೆಂದರೆ ನೈಜೀರಿಯ (25 ಶೇಕಡ), ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ (11 ಶೇ.), ಮೊಝಾಂಬಿಕ್ (5 ಶೇ.), ಭಾರತ ಮತ್ತು ಉಗಾಂಡ (ತಲಾ 4 ಶೇಕಡ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News