ಬಾಲಿವುಡ್ ನಟ ಅಲೋಕ್‌ ನಾಥ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

Update: 2018-11-21 07:08 GMT

ಮುಂಬೈ, ನ.21: ಲೇಖಕಿ ವಿಂಟಾ ನಂದಾ ನೀಡಿರುವ ಅತ್ಯಾಚಾರ ದೂರಿನ ಮೇರೆಗೆ ಮುಂಬೈ ಪೊಲೀಸರು ಬಾಲಿವುಡ್‌ನ ಹಿರಿಯ ನಟ ಅಲೋಕ್ ನಾಥ್(62 ವರ್ಷ)ವಿರುದ್ಧ ಎಫ್‌ಐಆರ್ ದಾಖಲಿಸಿದೆ.

‘‘ಲೇಖಕಿ ನಂದಾ ನೀಡಿರುವ ದೂರಿನ ಆಧಾರದಲ್ಲಿ ಒಶಿವಾರ ಪೊಲೀಸರು ಅಲೋಕ್ ನಾಥ್ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನೋಜ್ ಶರ್ಮಾ ತಿಳಿಸಿದ್ದಾರೆ.

 ‘ಮೀ ಟೂ’ ಆಂದೋಲದಿಂದ ಪ್ರೇರಣೆ ಪಡೆದು ಅಲೋಕ್ ನಾಥ್ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ವಿಂಟಾ ನಂದಾ ವಿರುದ್ಧ ತಡೆಯಾಜ್ಞೆಯ ಆದೇಶಕ್ಕೆ ಕೋರಿ ಅಲೋಕ್‌ನಾಥ್ ಪತ್ನಿ ಸಲ್ಲಿಸಿರುವ ಅರ್ಜಿಯನ್ನು ಮುಂಬೈನ ಸೆಶನ್ಸ್ ನ್ಯಾಯಾಲಯ ಇತ್ತೀಚೆಗೆ ತಿರಸ್ಕರಿಸಿತ್ತು.

ಅಲೋಕ್‌ನಾಥ್ ವಿರುದ್ಧ ನಂದಾ ಅವರು ಮಾಧ್ಯಮಗಳ ಎದುರು ಮಾತನಾಡದಂತೆ ಹಾಗೂ ಹೇಳಿಕೆ ನೀಡದಂತೆ ತಡೆ ವಿಧಿಸುವಂತೆ ಕೋರಿ ನಟ ಅಲೋಕ್‌ ನಾಥ್ ಪತ್ನಿ ಕೋರ್ಟ್ ಮೊರೆ ಹೋಗಿದ್ದರು. ನಟನ ಪತ್ನಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ನಂದಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಲ್ಲದೆ ಒಂದು ರೂ.ಪರಿಹಾರದ ಜೊತೆಗೆ ಲಿಖಿತ ಕ್ಷಮೆ ಪತ್ರ ನೀಡುವಂತೆ ಕೋರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News