ಯುಎಇಯಲ್ಲಿ ಬ್ರಿಟಿಶ್ ವಿದ್ಯಾರ್ಥಿಗೆ ಜೀವಾವಧಿ

Update: 2018-11-21 17:23 GMT

ಲಂಡನ್, ನ. 21: ಬ್ರಿಟನ್‌ಗಾಗಿ ಬೇಹುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದಲ್ಲಿ ಬ್ರಿಟಿಶ್ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರಿಗೆ ಯುನೈಟೆಡ್ ಅರಬ್ ಎಮಿರೇಟ್ (ಯುಎಇ)ನಲ್ಲಿ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಈ ತೀರ್ಪನ್ನು ಆಘಾತಕಾರಿ ಎಂಬುದಾಗಿ ಬಣ್ಣಿಸಿರುವ ಬ್ರಿಟನ್, ನಿರ್ಧಾರವನ್ನು ಮರುಪರಿಶೀಲಿಸುವಂತೆ ಯುಎಇಯನ್ನು ಒತ್ತಾಯಿಸಿದೆ.

ಡರ್ಹಮ್ ವಿಶ್ವವಿದ್ಯಾನಿಲಯದಲ್ಲಿ ಮಧ್ಯಪ್ರಾಚ್ಯ ಅಧ್ಯಯನ ವಿದ್ಯಾರ್ಥಿಯಾಗಿರುವ 31 ವರ್ಷದ ಮ್ಯಾಥ್ಯೂ ಹೆಜಸ್‌ರನ್ನು ದುಬೈ ವಿಮಾನ ನಿಲ್ದಾಣದಲ್ಲಿ ಮೇ 5ರಂದು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News