ನಾಳೆಯಿಂದ ಭಾರತ-ಚೀನಾ ಗಡಿ ಮಾತುಕತೆ

Update: 2018-11-21 17:24 GMT

  ಬೀಜಿಂಗ್, ನ. 21: ಭಾರತ ಮತ್ತು ಚೀನಾದ ಅಧಿಕಾರಿಗಳು ಚೀನಾದ ಚೆಂಗ್ಡು ನಗರದಲ್ಲಿ ನವೆಂಬರ್ 23 ಮತ್ತು 24ರಂದು ಸಭೆ ಸೇರಲಿದ್ದು, ಗಡಿವಿವಾದದ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಭಾರತೀಯ ತಂಡದ ನೇತೃತ್ವವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಎ.ಕೆ. ದೋವಲ್ ವಹಿಸಿದರೆ, ಚೀನಾ ತಂಡದ ನೇತೃತ್ವವನ್ನು ಆ ದೇಶದ ಸರಕಾರಿ ಸಲಹೆಗಾರ ಹಾಗೂ ವಿದೇಶ ಸಚಿವ ವಾಂಗ್ ಯಿ ವಹಿಸಲಿದ್ದಾರೆ.

ವಿಶೇಷ ಪ್ರತಿನಿಧಿ ವ್ಯವಸ್ಥೆಯಡಿ ನಡೆಯುತ್ತಿರುವ 21ನೇ ಸುತ್ತಿನ ದ್ವಿಪಕ್ಷೀಯ ಗಡಿ ಮಾತುಕತೆ ಇದಾಗಿದೆ.

ಜಟಿಲ ಗಡಿ ವಿವಾದಕ್ಕೆ ನ್ಯಾಯೋಚಿತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 2003ರಲ್ಲಿ ಈ ವ್ಯವಸ್ಥೆಯನ್ನು ರೂಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News