ಅಫ್ಘಾನ್ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ; 26 ಸಾವು

Update: 2018-11-23 16:14 GMT

ಕಾಬೂಲ್, ನ. 23: ಪೂರ್ವ ಅಫ್ಘಾನಿಸ್ತಾನದ ಸೇನಾ ನೆಲೆಯೊಂದರಲ್ಲಿನ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಆತ್ಮಹತ್ಯಾ ಸ್ಫೋಟದಲ್ಲಿ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ ಹಾಗೂ 50 ಮಂದಿ ಗಾಯಗೊಂಡಿದ್ದಾರೆ.

ಖೋಸ್ತ್ ಪ್ರಾಂತದ ಇಸ್ಮಾಯಿಲ್ ಖೇಲ್ ಜಿಲ್ಲೆಯಲ್ಲಿರುವ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗಾಗಿ ಜನರು ಸೇರಿದ್ದರು ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸ್ಫೋಟದಲ್ಲಿ ಮೃತಪಟ್ಟವರೆಲ್ಲರೂ ಅಫ್ಘಾನ್ ಭದ್ರತಾ ಪಡೆಗಳಿಗಾಗಿ ಕೆಲಸ ಮಾಡುತ್ತಿದ್ದವರು ಎಂದು ಖೋಸ್ತ್‌ನಲ್ಲಿನ ಸೇನಾ ವಕ್ತಾರ ಕ್ಯಾಪ್ಟನ್ ಅಬ್ದುಲ್ಲಾ ತಿಳಿಸಿದರು.

ಆದಾಗ್ಯೂ, ಸ್ಫೋಟದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.

ಅಫ್ಘಾನಿಸ್ತಾನದ ಪಾಶ್ಚಾತ್ಯ ಬೆಂಬಲಿತ ಸರಕಾರವನ್ನು ಉರುಳಿಸಲು ತಾಲಿಬಾನ್ ಭಯೋತ್ಪಾದಕ ಸಂಘಟನೆ ಯುದ್ಧ ಸಾರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News