ಅಮೆರಿಕನ್ನರು ಚಂದ್ರನಲ್ಲಿ ನಿಜವಾಗಿಯೂ ಇಳಿದರೇ ?

Update: 2018-11-24 17:22 GMT

ಮಾಸ್ಕೋ, ನ. 24: ಅಮೆರಿಕನ್ನರು ಚಂದ್ರನ ನೆಲದಲ್ಲಿ ಇಳಿದಿರುವುದು ನಿಜವೇ ಎನ್ನುವುದನ್ನು ಪರಿಶೀಲನೆ ನಡೆಸಲಾಗುವುದು ಎಂದು ರಶ್ಯದ ಬಾಹ್ಯಾಕಾಶ ಸಂಸ್ಥೆ ‘ರಾಸ್ಕಾಸ್ಮಾಸ್’ನ ಮುಖ್ಯಸ್ಥ ಡಿಮಿಟ್ರಿ ರೊಗೊಝಿನ್ ಹೇಳಿದ್ದಾರೆ.

ಇದನ್ನು ಖಚಿತಪಡಿಸುವ ಕಾರ್ಯವನ್ನು ಚಂದ್ರನಲ್ಲಿಗೆ ಪ್ರಯಾಣ ಕೈಗೊಳ್ಳಲು ನಿಗದಿಯಾಗಿರುವ ರಶ್ಯದ ಶೋಧ ನೌಕೆಯೊಂದಕ್ಕೆ ವಹಿಸಲಾಗುವುದು ಎಂದು ಶನಿವಾರ ಟ್ವಿಟರ್‌ನಲ್ಲಿ ಹಾಕಿರುವ ವೀಡಿಯೊವೊಂದರಲ್ಲಿ ಅವರು ಹೇಳಿದರು.

‘‘ಅಮೆರಿಕನ್ನರು ಚಂದ್ರನ ಮೇಲೆ ಇಳಿದಿರುವರೇ, ಇಲ್ಲವೇ ಎನ್ನುವುದನ್ನು ಖಚಿತಪಡಿಸುವುದಕ್ಕಾಗಿ ನಾವು ಶೋಧ ನೌಕೆಯನ್ನು ಕಳುಹಿಸಲಿದ್ದೇವೆ’’ ಎಂದರು.

ಸುಮಾರು 50 ವರ್ಷಗಳ ಹಿಂದೆ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಗಗನಯಾತ್ರಿಗಳು ನಿಜವಾಗಿಯೂ ಚಂದ್ರನ ನೆಲದಲ್ಲಿ ಇಳಿದಿರುವರೇ ಎಂಬ ಪ್ರಶ್ನೆಯೊಂದಕ್ಕೆ ರೊಗೊಝಿನ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಹೇಳುವಾಗ ಅವರು ತಮಾಷೆ ಮಾಡುತ್ತಿರುವಂತೆ ಕಂಡುಬಂದರು. ಆದರೆ, ನಾಸಾದ ಚಂದ್ರಯಾನಗಳ ಬಗ್ಗೆ ರಶ್ಯದಲ್ಲಿ ವ್ಯಾಪಕ ಅನುಮಾನಗಳಿವೆ.

 1970ರ ದಶಕದ ಮಧ್ಯ ಭಾಗದಲ್ಲಿ ಚಂದ್ರನಲ್ಲಿಗೆ ತೆರಳಿದ ನಾಲ್ಕು ಪ್ರಾಯೋಗಿಕ ರಾಕೆಟ್‌ಗಳು ಸ್ಫೋಟಿಸಿದ ಬಳಿಕ, ರಶ್ಯ ತನ್ನ ಚಂದ್ರಯಾನ ಕಾರ್ಯಕ್ರಮವನ್ನು ನಿಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News