ಕೇರಳದ ಜಲಸಂಪನ್ಮೂಲ ಸಚಿವ ಮ್ಯಾಥ್ಯೂ ಟಿ ಥಾಮಸ್ ರಾಜೀನಾಮೆ

Update: 2018-11-26 06:50 GMT

ತಿರುವನಂತಪುರ, ನ.26: ಕೇರಳದ ಜಲಸಂಪನ್ಮೂಲ ಸಚಿವ ಮ್ಯಾಥ್ಯೂ ಟಿ ಥಾಮಸ್ ಸೋಮವಾರ  ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಜೆಡಿಎಸ್ ಶಾಸಕರಾಗಿರುವ  ಮ್ಯಾಥ್ಯೂ  ಟಿ. ಥಾಮಸ್ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರು.

ಕೇರಳ ವಿಧಾನಸಭೆಯಲ್ಲಿ  ಆಡಳಿತಾರೂಢ ಎಲ್ ಡಿಎಫ್  ಮೈತ್ರಿಕೂಟದಲ್ಲಿ ಜೆಡಿಎಸ್ ನ ಮೂವರು ಶಾಸಕರಿದ್ದಾರೆ.ಅವರೆಂದರೆ  ಮ್ಯಾಥ್ಯೂ ಟಿ ಥಾಮಸ್ , ಕೃಷ್ಣಕುಟ್ಟಿ ಮತ್ತು ಸಿ.ಕೆ.ನಾಣು. ಇದೀಗ ಮಾಥ್ಯೂ ಟಿ.ಥಾಮಸ್  ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಕೃಷ್ಣಕುಟ್ಟಿ ನೇಮಕಗೊಂಡಿದ್ದಾರೆ. ಕೃಷ್ಣಕುಟ್ಟಿ ಸಚಿವರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಕೇರಳ ರಾಜ್ಯ ವಿಧಾನಸಭೆಯ 13ನೇ ಅಧಿವೇಶನ ಮಂಗಳವಾರ ಆರಂಭಗೊಳ್ಳಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News