ಬೇಹುಗಾರಿಕೆ ಆರೋಪಿ ಬ್ರಿಟಿಶ್ ರಾಷ್ಟ್ರೀಯನಿಗೆ ಯುಎಇ ಕ್ಷಮಾದಾನ

Update: 2018-11-26 17:57 GMT

ದುಬೈ, ನ. 26: ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿರುವ ಬ್ರಿಟಿಶ್ ರಾಷ್ಟ್ರೀಯನಿಗೆ, ಯುಎಇ ತಕ್ಷಣದಿಂದ ಜಾರಿಗೆ ಬರುವಂತೆ ಅಧ್ಯಕ್ಷೀಯ ಕ್ಷಮಾದಾನ ನೀಡಿದೆ.

ಮ್ಯಾಥ್ಯೂ ಹೆಜಸ್‌ರನ್ನು ಮೇ 5ರಂದು ಬಂಧಿಸಲಾಗಿತ್ತು ಹಾಗೂ ನವೆಂಬರ್ 21ರಂದು ಯುಎಇಯ ನ್ಯಾಯಾಲಯವೊಂದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ತಾನು ಬ್ರಿಟಿಶ್ ಬೇಹುಗಾರಿಕೆ ಸಂಸ್ಥೆ ಎಂಐ6ರಲ್ಲಿ ಓರ್ವ ಕ್ಯಾಪ್ಟನ್ ಆಗಿದ್ದೇನೆ ಎಂಬುದಾಗಿ ಹೆಜಸ್ ತಪ್ಪೊಪ್ಪಿಗೆ ಹೇಳಿಕೆ ನೀಡುವ ವೀಡಿಯೊವೊಂದನ್ನು ಯುಎಇ ಪತ್ರಿಕೆಗಳಿಗೆ ತೋರಿಸಿದ ಬಳಿಕ, ಅಧ್ಯಕ್ಷೀಯ ಕ್ಷಮಾದಾನ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News