ಜಿ-20 ನೇಪಥ್ಯದಲ್ಲಿ ಪುಟಿನ್ ಜೊತೆ ಸಭೆಯಿಲ್ಲ: ಟ್ರಂಪ್

Update: 2018-11-30 17:26 GMT

ವಾಶಿಂಗ್ಟನ್, ನ. 30: ಅರ್ಜೆಂಟೀನದಲ್ಲಿ ನಡೆಯುತ್ತಿರುವ ಜಿ-20 ದೇಶಗಳ ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ನಿಗದಿಯಾಗಿರುವ ಮಾತುಕತೆಗಳನ್ನು ರದ್ದುಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಘೋಷಿಸಿದ್ದಾರೆ.

ಯುಕ್ರೇನ್ ನೌಕಾಪಡೆಯ ಮೂರು ಹಡಗುಗಳನ್ನು ರಶ್ಯ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

‘‘ಹಡಗುಗಳು ಮತ್ತು ನಾವಿಕರನ್ನು ಯುಕ್ರೇನ್‌ಗೆ ಇನ್ನೂ ಹಿಂದಿರುಗಿಸದ ಹಿನ್ನೆಲೆಯಲ್ಲಿ, ರಶ್ಯ ಅಧ್ಯಕ್ಷರೊಂದಿಗೆ ನಿಗದಿಯಾಗಿರುವ ನನ್ನ ಭೇಟಿಯನ್ನು ರದ್ದುಪಡಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ನಾನು ಬಂದಿದ್ದೇನೆ’’ ಎಂಬುದಾಗಿ ಟ್ರಂಪ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News