ಬಾಲಕಿಯ ಮೇಲೆ ಮೂವರಿಂದ ಸಾಮೂಹಿಕ ಅತ್ಯಾಚಾರ

Update: 2018-12-01 14:53 GMT

ಭುವನೇಶ್ವರ,ಡಿ.1: ಪಶ್ಚಿಮ ಬಂಗಾಳ ಮೂಲದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಐವರು ದುಷ್ಕರ್ಮಿಗಳು ಬಳಿಕ ಆಕೆಯನ್ನು ರಸ್ತೆಯಲ್ಲೆಸೆದು ಪರಾರಿಯಾದ ಹೇಯ ಘಟನೆ ಬಾಲಾಸೋರ್ ಜಿಲ್ಲೆಯ ರಸೂಲ್‌ಪುರ ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಬಾಲಕಿಗೆ ಆಮಿಷವೊಡ್ಡಿ ತಮ್ಮೊಂದಿಗೆ ಕರೆದೊಯ್ದಿದ್ದ ಐವರು ಯುವಕರ ಗುಂಪು ಆಕೆಗೆ ಮಾದಕ ದ್ರವ್ಯವನ್ನು ತಿನ್ನಿಸಿ ಈ ಕೃತ್ಯವೆಸಗಿದ್ದು,ಬಳಿಕ ಆಕೆಯನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದರು. ಸ್ಥಳೀಯರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News