ಪಾಕ್: ಆಸಿಯಾ ಬೀಬಿ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ತೀವ್ರವಾದಿ ನಾಯಕನ ವಿರುದ್ಧ ದೇಶದ್ರೋಹದ ಆರೋಪ

Update: 2018-12-02 16:56 GMT

ಇಸ್ಲಾಮಾಬಾದ್, ಡಿ.2: ಧರ್ಮನಿಂದನೆಯ ಆರೋಪ ಎದುರಿಸುತ್ತಿದ್ದ ಕ್ರೈಸ್ತ ಮಹಿಳೆ ಆಸಿಯಾ ಬೀಬಿಯನ್ನು ದೋಷಮುಕ್ತಿಗೊಳಿಸಿದ ನ್ಯಾಯಾಲಯದ ತೀರ್ಪಿನ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯ ನೇತೃತ್ವ ವಹಿಸಿದ್ದ ತೀವ್ರವಾದಿ ನಾಯಕ ವಿರುದ್ಧ ಪಾಕ್ ಸರಕಾರವು ಭಯೋತ್ಪಾದನೆ ಹಾಗೂ ದೇಶದ್ರೋಹದ ಆರೋಪಗಳನ್ನು ಹೊರಿಸಿದೆಯೆಂದು ಮಾಹಿತಿ ಸಚಿವ ಫಾವದ್ ಚೌಧುರಿ ಶನಿವಾರ ತಿಳಿಸಿದ್ದಾರೆ.

 ದೇವನಿಂದನೆ ಆರೋಪದ ಹಿನ್ನೆಲೆಯಲ್ಲಿ ಕ್ರೈಸ್ತ ಮಹಿಳೆ ಆಸಿಯಾ ಬೀಬಿಗೆೆ ವಿಧಿಸಲಾಗಿದ್ದ ಮರಣದಂಡನೆಯನ್ನು ಪಾಕ್ ಸುಪ್ರೀಂಕೋರ್ಟ್ ಕಳೆದ ಆಕ್ಟೋಬರ್‌ನಲ್ಲಿ ರದ್ದುಪಡಿಸಿದ ಬಳಿಕ ತೀವ್ರವಾದಿ ನಾಯಕ ಖಾದಿಂ ಹುಸೈನ್ ರಿಝ್ವಿ ಹಾಗೂ ಅವರ ಪಕ್ಷವಾದ ತೆಹ್ರೀಕ್ ಲಬೈಕ್ ಪಾಕಿಸ್ತಾನ (ಟಿಎಲ್‌ಪಿ) ಪಕ್ಷವು ಹಿಂಸಾತ್ಮಕ ಪ್ರತಿಭಟನೆ ನಡೆಸಿತ್ತು.

ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಹಿಂಸಾಚಾರಕ್ಕಿಳಿದ ಪ್ರತಿಭಟನಕಾರರು ಕಾರುಗಳನ್ನು ಹಾಗೂ ಬಸ್‌ಗಳನ್ನು ಸುಟ್ಟುಹಾಕಿದ್ದಲ್ಲದೆ ಪ್ರಮುಖ ರಸ್ತೆಗಳಿಗೆ ತಡೆಯೊಡ್ಡಿದ್ದರಿಂದ ಸುಮಾರು ಒಂದು ವಾರದವರೆಗೆ ದೇಶದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News