ದ. ಆಫ್ರಿಕದಲ್ಲಿ ‘ಗಾಂಧಿ-ಮಂಡೇಲಾ’ ಶಾಂತಿಯಾತ್ರೆ

Update: 2018-12-02 17:05 GMT

 ಜೋಹಾನ್ಸ್‌ಬರ್ಗ್,ಡಿ.2: ವಿಶ್ವದ ಶಾಂತಿದೂತರಾದ ಮಹಾತ್ಮಗಾಂಧಿ ಹಾಗೂ ನೆಲ್ಸನ್ ಮಂಡೇಲಾ ಅವರ ಸಂಸ್ಮರಣಾರ್ಥವಾಗಿ ದಕ್ಷಿಣ ಆಫ್ರಿಕದಲ್ಲಿ ಭಾರತೀಯ ಸಂಘಟನೆಯೊಂದು ನಡೆಸಿದ 1200 ಕಿ.ಮೀ. ಶಾಂತಿ ಯಾತ್ರೆಯು ವರ್ಣಭೇದ ವಿರೋಧಿ ಕಾರ್ಯಕರ್ತ ಮ್ವೆರೊ ಅವರ ಹುಟ್ಟೂರಿನಲ್ಲಿ ಕೊನೆಗೊಂಡಿತು.

‘ ಗಾಂಧಿಃ150ರಿಂದ ಮಂಡೇಲಾಃ100 ದಕ್ಷಿಣ ಆಫ್ರಿಕ ಶಾಂತಿಯಾತ್ರೆ’ಯು ಶುಕ್ರವಾರ ಸಮಾರೋಪಗೊಂಡಿತು. ದೀರ್ಘ ದೂರದ ಸರಣಿ ಪಾದಯಾತ್ರೆಗಳನ್ನು ನಡೆಸಿ ಖ್ಯಾತರಾಗಿರುವ ನಿತಿನ್ ಸೊನಾವನೆ ಈ ಶಾಂತಿ ಯಾತ್ರೆಯ ಪರಿಕಲ್ಪನೆ ಮೂಡಿಸಿದ್ದರು.

ಪುಣೆಯ ಗಾಂಧಿಆಶ್ರಮದ ಯೊಗೇಶ್ ಮಥುರಿಯಾ, ಸಂಗ್ರಾಮ್ ಪಾಟೀಲ್ ಹಾಗೂ ದಿಲೀಪ್ ತಾಂಬೊಲ್ಕರ್, ಜಪಾನಿ ಧರ್ಮಗುರು ನಿಪ್ಪೊರೊನ್ ಮೆಯೊಹೊಜಿ ಶಾಂತಿಯಾತ್ರೆ ತಂಡದಲ್ಲಿದ್ದ ಪ್ರಮುಖರಾಗಿದ್ದರು. ಮಥಾತಾ ನಗರದಲ್ಲಿ ನೆಲ್ಸನ್ ಮಂಡೇಲಾ ಮ್ಯೂಸಿಯಂನಿಂದ ಆರಂಭಗೊಡ ಶಾಂತಿಯಯಾತ್ರೆಯು ಮ್ವೆಜೊ ನಗರದಲ್ಲಿ ಕೊನೆಗೊಂಡಿತೆಂದು ಎಸ್‌ಎಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News