ಜಿ-20 ಶೃಂಗಸಭೆಗೆ ಭಾರತದ ಆತಿಥ್ಯ

Update: 2018-12-02 17:07 GMT

ಬ್ಯೂನಸ್‌ಐರಿಸ್,ಡಿ.2: 2022ರ ಜಿ-20 ಶೃಂಗಸಭೆಗೆ ಭಾರತವು ಆತಿಥ್ಯ ವಹಿಸಲಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ. ಆರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ನಡೆದ ಎರಡು ದಿನಗಳ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಮೋದಿ ಈ ಘೋಷಣೆ ಮಾಡಿದ್ದಾರೆ.

ಜಿ-20, ಜಗತ್ತಿನ 20 ಪ್ರಮುಖ ಆರ್ಥಿಕತೆಯ ರಾಷ್ಟ್ರಗಳ ಒಕ್ಕೂಟವಾಗಿದೆ. 2022ರ ಜಿ-20 ಶೃಂಗಸಭೆಯ ಆತಿಥ್ಯ ನೀಡಬೇಕಿತ್ತು. ಆದರೆ ಸದ್ಭಾವನೆಯ ಕ್ರಮವಾಗಿ ಅದು ಆ ಅವಕಾಶವನ್ನು ಭಾರತಕ್ಕೆ ಬಿಟ್ಟುಕೊಟ್ಟಿದೆ.

ಭಾರತಕ್ಕೆ ಜಿ-20 ಶೃಂಗಸಭೆಯ ಆತಿಥೇಯನಾಗಲು ಅವಕಾಶ ಮಾಡಿಕೊಟ್ಟಿದ್ದಾಗಿ ಇಟಲಿಗೆ ಮೋದಿ ತನ್ನ ಭಾಷಣದಲ್ಲಿ ಕೃತಜ್ಞತೆ ಅರ್ಪಿಸಿದ್ದಾರೆ. ಭಾರತಕ್ಕೆ ಭೇಟಿ ನೀಡುವಂತೆ ಅವರು, ಜಿ-20ಯ ಎಲ್ಲಾ ಸದಸ್ಯ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ. 2022ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಪೂರ್ಣಗೊಳ್ಳುತ್ತವೆ.

ಅರ್ಜೆಂಟೀನ, ಆಸ್ಟ್ರೇಲಿಯ,ಬ್ರೆಝಿಲ್, ಕೆನಡ, ಚೀನಾ, ಯುರೋಪ್ ಒಕ್ಕೂಟ,ಫ್ರಾನ್ಸ್, ಜರ್ಮನಿ, ಭಾರತ, ಇಂಡೊನೇಶ್ಯ, ಇಟಲಿ, ಜಪಾನ್, ಮೆಕ್ಸಿಕೊ,ರಶ್ಯ, ಸೌದಿ ಆರೇಬಿಯ, ದ.ಆಫ್ರಿಕ, ದ.ಕೊರಿಯ, ಟರ್ಕಿ, ಬ್ರಿಟನ್ ಹಾಗೂ ಅಮೆರಿಕ, ಜಿ-20ಯ ಸದಸ್ಯ ರಾಷ್ಟ್ರಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News