ಚೀನಾ-ಅಮೆರಿಕ 90 ದಿನಗಳ ವಾಣಿಜ್ಯ ‘ಕದನ ವಿರಾಮ’

Update: 2018-12-02 17:11 GMT

   ಮೆಕ್ಸಿಕೊ,ಅ.2: ಚೀನಾದ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸುವುದನ್ನು 90 ದಿನಗಳವರೆಗೆ ಸ್ಥಗಿತಗೊಳಿಸಲು ಅಮೆರಿಕ ನಿರ್ಧರಿಸಿವೆಯೆಂದು ಶ್ವೇತಭವನ ಶನಿವಾರ ತಿಳಿಸಿದೆ.

  ಅರ್ಜೆಂಟೀನಾದಲ್ಲಿ ಶನಿವಾರ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೂತನ ವಾಣಿಜ್ಯ ಮಾತುಕತೆಗಳನ್ನು ನಡೆಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂಈ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ 90 ದಿನಗಳೊಳಗೆ ಉಭಯದೇಶಗಳ ನಡುವಿನ ವಾಣಿಜ್ಯ ಸಮರಕ್ಕೆ ಅಂತ್ಯಹಾಡಲು ಒಪ್ಪಂದವೊಂದನ್ನು ಏರ್ಪಡಿಸಲು ಈ ನಾಯಕರು ನಿರ್ಧರಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

 ಜನವರಿ 1ರಂದು ಟ್ರಂಪ್ ಅವರು ಘೋಷಿಸಿದ್ದ 200 ಶತಕೋಟಿ ಡಾಲರ್ ವೌಲ್ಯದ ಚೀನಿ ಉತ್ಪನ್ನಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸುವ ತನ್ನ ನಿರ್ಧಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಟ್ರಂಪ್ ನಿರ್ಧರಿಸಿದ್ದಾರೆ. ಅದೇ ರೀತಿ, ಅಮೆರಿಕದಿಂದ ಗಣನೀಯ ಪ್ರಮಾಣದ ಕೃಷಿ, ಇಂಧನ, ಕೈಗಾರಿಕಾ ಉತ್ಪನ್ನಗಳನ್ನು ಖರೀದಿಸಲು ಚೀನಾ ಸಮ್ಮತಿಸಿದೆಯೆಂದು ಅವರು ಹೇಳಿದ್ದಾರೆ.

  ಒಂದು ವೇಳೆ ತಂತ್ರಜ್ಞಾನ ವರ್ಗಾವಣೆ, ಬೌದ್ಧಿಕ ಆಸ್ತಿ, ತೆರಿಗೆಯೇತರ ಅಡಚಣೆ, ಸೈಬರ್ ಕಳ್ಳತನ ಹಾಗೂ ಕೃಷಿ ಸೇರಿದಂತೆ ವಿವಿಧ ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿ ಚೀನಾದ ಜೊತೆ ಒಪ್ಪಂದಕ್ಕೆ ಬರಲು ಅಸಾಧ್ಯವಾದಲ್ಲಿ ವಿವಿಧ ಚೀನಿ ಉತ್ಪನ್ನಗಳಿಗೆ ಈಗ ಇರುವ ಶೇ.10 ತೆರಿಗೆಯನ್ನು, 25ಕ್ಕೆ ಏರಿಸಲಾಗುವುದೆಂದು ಶ್ವೇತಭವನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News