ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ಲಘು ಭೂಕಂಪ

Update: 2018-12-02 17:21 GMT

ಜೈಪುರ, ಡಿ. 2: ಪಾಲ್ಘಾರ್ ಜಿಲ್ಲೆಯ ಸಮೀಪದ ದಹಾನು ಪ್ರದೇಶದ ದುಂಡಲ್‌ವಾಡಿ ಗ್ರಾಮದಲ್ಲಿ ರವಿವಾರ ಸುಮಾರು 1.38ಕ್ಕೆ ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪ ಅನುಭವಕ್ಕೆ ಬಂದಿದೆ.

ಯಾವುದೇ ರೀತಿಯ ಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾ ವಿಕೋಪ ನಿಯಂತ್ರಣ ಅಧಿಕಾರಿ ವಿವೇಕಾನಂದ ಕದಮ್ ಹೇಳಿದ್ದಾರೆ.

ಈ ಹಿಂದೆ ನವೆಂಬರ್ 24 ಹಾಗೂ ನವೆಂಬರ್ 3ರಂದು ದಹಾನು ಹಾಗೂ ತಲಾಸರಿ ತಾಲೂಕುಗಳಲ್ಲಿ 3.3 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಪಾಲ್ಗಾರ್ ಜಿಲ್ಲೆ ಎರಡು ತಾಲೂಕುಗಳಲ್ಲಿ ನವೆಂಬರ್ 26 ಹಾಗೂ 29ರ ನಡುವೆ ಭೂಕಂಪ ಸಿದ್ಧತಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News