ಶಬರಿಮಲೆ ವಿವಾದ: ನಿಷೇಧಾಜ್ಞೆ ಉಲ್ಲಂಘಿಸಿದ ಬಿಜೆಪಿ ಕಾರ್ಯಕರ್ತರು ವಶಕ್ಕೆ
Update: 2018-12-02 22:52 IST
ಹೊಸದಿಲ್ಲಿ, ಡಿ. 2: ನಿಷೇಧಾಜ್ಞೆ ಉಲ್ಲಂಘಿಸಿ ಶಬರಿಮಲೆ ದೇವಾಲಯ ಪ್ರವೇಶಿಸಲು ಯತ್ನಿಸಿದ ಬಿಜೆಪಿಯ ರಾಜ್ಯ ವಕ್ತಾರ ಬಿ. ಗೋಪಾಲಕೃಷ್ಣನ್ ನೇತೃತ್ವದ ಬಿಜೆಪಿ ಕಾರ್ಯಕರ್ತರ ಗುಂಪನ್ನು ನೀಲಕ್ಕಲ್‌ನಲ್ಲಿ ಕೇರಳ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೆ ನೇತೃತ್ವದ ಸತ್ಯಶೋಧನಾ ಸಮಿತಿ ರವಿವಾರ ಕೊಚ್ಚಿಗೆ ಆಗಮಿಸಿದೆ. ಬಿಜೆಪಿಯ ಮುಖ್ಯ ಸಮಿತಿ, ಶಬರಿಮಲೆ ಕರ್ಮ ಸಮಿತಿ ಹಾಗೂ ಇತರ ಗುಂಪುಗಳೊಂದಿಗೆ ಅವರು ಈ ಸಮಿತಿ ಚರ್ಚೆ ನಡೆಸಲಿದೆ.
ಜನರು ಎದುರಿಸುತ್ತಿರುವ ಅನಾನುಕೂಲತೆ ಗಮನದಲ್ಲಿ ಇರಿಸಿಕೊಂಡು ನಾವು ಶಬರಿಮಲೆ ಹಾಗೂ ನೀಲಕ್ಕಲ್‌ನಂತಹ ಸ್ಥಳಗಳಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂದೆ ತೆಗೆದುಕೊಂಡಿದ್ದೇವೆ ಎಂದು ಈ ಹಿಂದೆ ಬಿಜೆಪಿ ಘೋಷಿಸಿತ್ತು. ಪೊಲೀಸರು ಜಾರಿಗೊಳಿಸಿದ ನಿಷೇಧಾಜ್ಞೆ ಹಿಂದೆ ತೆಗೆದುಕೊಳ್ಳದೇ ಇದ್ದರೆ, ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಬಿ. ಗೋಪಾಲಕೃಷ್ಣನ್ ಹೇಳಿದ್ದಾರೆ.