ಎಲ್ಲ ಬಳಕೆದಾರರಿಗೆ ಪಾವತಿ ಸೇವೆ ವಿಸ್ತರಣೆ: ಆರ್‌ ಬಿಐಗೆ ಪತ್ರ ಬರೆದ ವ್ಯಾಟ್ಸ್‌ಆ್ಯಪ್

Update: 2018-12-02 17:25 GMT

ಹೊಸದಿಲ್ಲಿ, ಡಿ. 2: ದೇಶದಲ್ಲಿರುವ ತನ್ನ ಎಲ್ಲ 200 ದಶಲಕ್ಷ ಬಳಕೆದಾರರಿಗೆ ಪಾವತಿ ಸೇವೆ ವಿಸ್ತರಿಸಲು ಔಪಚಾರಿಕ ಅನುಮತಿ ನೀಡುವಂತೆ ಕೋರಿ ವ್ಯಾಟ್ಸ್ ಆ್ಯಪ್ ವರಿಷ್ಠ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಪತ್ರ ಬರೆದಿದ್ದಾರೆ.

 ನಕಲಿ ಸಂದೇಶ ಹರಡುವಿಕೆಗೆ ಸಂಬಂಧಿಸಿ ಸರಕಾರದಿಂದ ತೀವ್ರ ಟೀಕೆಗೆ ಒಳಗಾಗಿರುವ ಸಂದೇಶ ರವಾನೆ ಆ್ಯಪ್ ವ್ಯಾಟ್ಸ್ ಆ್ಯಪ್ ಭಾರತದಲ್ಲಿ ಪೂರ್ಣ ಪ್ರಮಾಣದ ಪಾವತಿ ವ್ಯವಸ್ಥೆಯನ್ನು ಆರಂಭಿಸಲು ಅನುಮತಿಗೆ ಕಾಯುತ್ತಿದೆ.

ಗೂಗಲ್‌ನಂತಹ ಸ್ಪರ್ಧಿಗಳು ತಮ್ಮ ಪಾವತಿ ಸೇವೆ ಆರಂಭಿಸಲು ಕ್ರಮ ಕೈಗೊಳ್ಳುತ್ತಿರುವ ಸಂದರ್ಭ ಈ ಬೆಳವಣಿಗೆ ನಡೆದಿದೆ.

ವ್ಯಾಟ್ಸ್ ಆ್ಯಪ್ ಪ್ರಸ್ತುತ ವ್ಯಾಟ್ಸ್‌ಆ್ಯಪ್ ಪಾವತಿಗೆ ಚಾಲನೆ ನೀಡಿದೆ. ದೇಶದಲ್ಲಿರುವ ತನ್ನ ಎಲ್ಲ ಬಳಕೆದಾರರಿಗೆ ಪಾವತಿ ಸೇವೆ ನೀಡಲು ಔಪಚಾರಿಕ ಅನುಮೋದನೆ ನೀಡುವಂತೆ ವ್ಯಾಟ್ಸ್‌ಆ್ಯಪ್ ವರಿಷ್ಠ ಚಾರಿಸ್ ಡೇನಿಯಲ್ ಆರ್‌ಬಿಐಗೆ ಈಗ ಪತ್ರ ಬರೆದಿದ್ದಾರೆ.

ನವೆಂಬರ್ 5ರ ಈ ಪತ್ರದಲ್ಲಿ ವ್ಯಾಟ್ಸ್‌ಆ್ಯಪ್ ಪಾಲುದಾರ ಬ್ಯಾಂಕ್‌ಗಳು ಕೂಡ ಔಪಚಾರಿಕ ಅನುಮೋದನೆಗೆ ಮನವಿ ಸಲ್ಲಿಸಿವೆ ಎಂದು ಉಲ್ಲೇಖಿಸಲಾಗಿದೆ.

ಈ ವ್ಯವಸ್ಥೆಯನ್ನು ಹೆಚ್ಚು ಜನರಿಗೆ ವಿಸ್ತರಿಸಲು ಹಾಗೂ ದೇಶದ ಡಿಜಿಟಲ್ ಆರ್ಥಿಕತೆಗೆ ಪ್ರೋತ್ಸಾಹ ನೀಡಲು ಪಾವತಿ ಸೇವಾ ಪೂರೈಕೆದಾರರು ಸಹಿತ ಹಲವು ಬ್ಯಾಂಕ್‌ಗಳು,ಭಾರತ ಸರಕಾರ, ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ದೊಂದಿಗೆ ವ್ಯಾಟ್ಸ್‌ಆ್ಯಪ್ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ವ್ಯಾಟ್ಸ್ ಆ್ಯಪ್ ತಿಳಿಸಿದೆ.

ಇಂದು ಭಾರತದದಲ್ಲಿ ಸರಿಸುಮಾರು 1 ದಶಲಕ್ಷ ಜನರು ವ್ಯಾಟ್ಸ್‌ಆ್ಯಪ್ ಪಾವತಿ ಪರಿಶೀಲಿಸಿದ್ದಾರೆ. ಎಲ್ಲರೂ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಸಂದೇಶ ರವಾನಿಸಿದಂತೆ ಸರಳ ಹಾಗೂ ಸುರಕ್ಷಿತವಾಗಿ ಹಣ ಕಳುಹಿಸುವ ಅನುಕೂಲತೆಯನ್ನು ಜನರು ಆನಂದಿಸುತ್ತಿದ್ದಾರೆ.

ವ್ಯಾಟ್ಸ್ ಆ್ಯಪ್ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News