ಜಪಾನ್‌ನಲ್ಲಿ ಅಮೆರಿಕದ 2 ಸೇನಾ ವಿಮಾನ ಅಪಘಾತ: ನೌಕಾಪಡೆಯ ಆರು ಸಿಬ್ಬಂದಿ ನಾಪತ್ತೆ

Update: 2018-12-06 04:06 GMT

ವಾಷಿಂಗ್ಟನ್, ಡಿ.6: ಜಪಾನ್‌ನ ಕರಾವಳಿ ತೀರದಲ್ಲಿ ಇಂಧನ ಮರುಭರ್ತಿ ಮಾಡಿಕೊಳ್ಳುತ್ತಿದ್ದ ಅಮೆರಿಕದ ಎರಡು ಸೇನಾ ವಿಮಾನಗಳು ಅಪಘಾತಕ್ಕೀಡಾಗಿ ಅಮೆರಿಕ ನೌಕಾಪಡೆಯ ಆರು ಮಂದಿ ನಾಪತ್ತೆಯಾಗಿದ್ದಾರೆ.

ಎಫ್-18 ಯುದ್ಧವಿಮಾನ ಹಾಗೂ ಸಿ-130 ಟ್ಯಾಂಕರ್ ಗುರುವಾರ ಮುಂಜಾನೆ 2 ಗಂಟೆ ಸುಮಾರಿಗೆ ಜಪಾನ್ ಕರಾವಳಿಯಿಂದ ಸುಮಾರು 200 ಮೈಲು ದೂರದಲ್ಲಿ ಅಪಘಾತಕ್ಕೀಡಾಗಿವೆ ಎಂದು ಅಮೆರಿಕದ ನೌಕಾಪಡೆ ಪ್ರಕಟಿಸಿದೆ.

ದಕ್ಷಿಣ ಜಪಾನ್‌ನ ಇವಾಕುನಿಯಲ್ಲಿರುವ ಮೆರೈನ್ ಕಾಪ್ಸ್ ಏರ್‌ಸ್ಟೇಷನ್‌ನಿಂದ ಟೇಕಾಫ್ ಆಗುವ ವೇಳೆ ಈ ದುರಂತ ಸಂಭವಿಸಿದೆ. ದುರಂತದಲ್ಲಿ ಒಬ್ಬ ವಿಮಾನಯಾನಿಯನ್ನು ರಕ್ಷಿಸಲಾಗಿದ್ದು, ಉಳಿದವರು ಏನಾಗಿದ್ದಾರೆ ಎಂಬ ಬಗ್ಗೆ ತಕ್ಷಣಕ್ಕೆ ಮಾಹಿತಿ ಇಲ್ಲ ಎಂದು ಜಪಾನ್‌ನ ಸ್ವಯಂರಕ್ಷಣಾ ಪಡೆಯ ವಕ್ತಾರರು ಹೇಳಿದ್ದಾರೆ. ಉಳಿದ ಆರು ಮಂದಿಯ ಪತ್ತೆಯಾಗಿ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.
ಸಿ-130 ಟ್ಯಾಂಕರ್‌ನಲ್ಲಿ ಐದು ಮಂದಿ ಹಾಗೂ ಎಫ್-18 ವಿಮಾನದಲ್ಲಿ ಇಬ್ಬರು ಯೋಧರಿದ್ದರು ಎಂದು ಅಮೆರಿಕ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News