ದಲಾಯಿ ಲಾಮಾ ಆಯ್ಕೆಯಲ್ಲಿ ಸರಕಾರಕ್ಕೆ ಪಾತ್ರವಿಲ್ಲ: ಅಮೆರಿಕ

Update: 2018-12-06 17:45 GMT

ವಾಶಿಂಗ್ಟನ್, ಡಿ. 6: ಮುಂದಿನ ದಲಾಯಿ ಲಾಮಾರ ಆಯ್ಕೆಯು ಟಿಬೆಟ್‌ನ ಧಾರ್ಮಿಕ ಸಂಪ್ರದಾಯದಂತೆ ನಡೆಯಬೇಕು ಹಾಗೂ ಅದರಲ್ಲಿ ಸರಕಾರಕ್ಕೆ ಯಾವುದೇ ಪಾತ್ರವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತನ್ನದೇ ಆದ ದಲಾಯಿ ಲಾಮಾರನ್ನು ಟಿಬೆಟ್ ಜನತೆಯ ಮೇಲೆ ಹೇರುವ ಚೀನಾದ ಯಾವುದೇ ಕ್ರಮವನ್ನು ತಾನು ವಿರೋಧಿಸುವೆ ಎಂಬ ಸೂಚನೆಯನ್ನು ಅಮೆರಿಕ ಈ ಮೂಲಕ ನೀಡಿದೆ.

‘‘ಧಾರ್ಮಿಕ ನಿರ್ಧಾರಗಳನ್ನು ಧಾರ್ಮಿಕ ಸಂಘಟನೆಗಳೇ ತೆಗೆದುಕೊಳ್ಳಬೇಕು ಹಾಗೂ ಅದರಲ್ಲಿ ಸರಕಾರಕ್ಕೆ ಪಾತ್ರವಿಲ್ಲ ಎಂಬ ಸ್ಪಷ್ಟ ನಿಲುವನ್ನು ಅಮೆರಿಕ ಹೊಂದಿದೆ’’ ಎಂದು ಪೂರ್ವ ಏಶ್ಯ ಮತ್ತು ಪೆಸಿಫಿಕ್ ವ್ಯವಹಾರಗಳ ಉಸ್ತುವಾರಿ ಉಪ ಸಹಾಯಕ ವಿದೇಶ ಕಾರ್ಯದರ್ಶಿ ಲಾರಾ ಸ್ಟೋನ್ ಹೇಳಿದರು.

ಅವರು ಪೂರ್ವ ಏಶ್ಯ, ಪೆಸಿಫಿಕ್ ಮತ್ತು ಅಂತಾರಾಷ್ಟ್ರೀಯ ಸೈಬರ್‌ಸುರಕ್ಷತೆ ನೀತಿ ಕುರಿತ ಸೆನೆಟ್ ವಿದೇಶ ಸಂಬಂಧಗಳ ಉಪಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಮುಂದಿನ ದಲಾಯಿ ಲಾಮಾರನ್ನು ತಾನೇ ಆರಿಸುವುದಾಗಿ ಚೀನಾ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News