ಮಾಜಿ ಭದ್ರತಾ ಸಲಹೆಗಾರನಿಗೆ ಜೈಲು ಶಿಕ್ಷೆ ಬೇಡ: ವಿಶೇಷ ವಕೀಲ ರಾಬರ್ಟ್ ಮಲ್ಲರ್

Update: 2018-12-06 17:58 GMT

ವಾಶಿಂಗ್ಟನ್, ಡಿ. 6: ಎಫ್‌ಬಿಐ ಏಜಂಟ್‌ಗಳಿಗೆ ಸುಳ್ಳು ಹೇಳಿರುವ ಅಪರಾಧಕ್ಕಾಗಿ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್ ಫ್ಲಿನ್‌ಗೆ ಕಾರಾಗೃಹವಾಸ ಶಿಕ್ಷೆ ವಿಧಿಸಬಾರದು ಎಂಬುದಾಗಿ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ವಕೀಲ ರಾಬರ್ಟ್ ಮಲ್ಲರ್ ಶಿಫಾರಸು ಮಾಡಿದ್ದಾರೆ.

ಅವರು ಹಲವಾರು ತನಿಖೆಗಳಲ್ಲಿ ಸಹಕಾರ ಹಾಗೂ ನೆರವು ನೀಡಿದ್ದಾರೆ ಎಂದು ಮಲ್ಲರ್ ಹೇಳಿದ್ದಾರೆ.

ಈಗ ನಡೆಯುತ್ತಿರುವ ಹಲವಾರು ತನಿಖೆಗಳಲ್ಲಿ ಅವರು ನೀಡುತ್ತಿರುವ ಸಹಾಯವನ್ನು ಪ್ರಾಸಿಕ್ಯೂಟರ್‌ಗಳು ಪಟ್ಟಿ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಈವರೆಗೆ ಫ್ಲಿನ್ 19 ವಿಚಾರಣೆಗಳಿಗಾಗಿ ವಿವಿಧ ಸರಕಾರಿ ಪ್ರಾಧಿಕಾರಗಳ ಮುಂದೆ ಹಾಜರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News