ರೂಮಿಯ ಒಂದು ಗಝಲ್

Update: 2018-12-07 10:42 GMT

ನಾನು ಬೀದಿ ಓಣಿಗಳಲ್ಲಿ ಸುಮ್ಮ ಸುಮ್ಮನೆ

ಅಲೆಯುತ್ತಿಲ್ಲ. ನನ್ನೊಳಗೆ ಪ್ರೇಮದ

ಒಲವಿದೆ, ದರ್ಶನದ ಸಂಕಲ್ಪದೊಂದಿಗೆ ನಾನು

ಅಲೆಯುತ್ತಿದ್ದೇನೆ.

ದೇವರೇ, ನನ್ನ ಮೇಲೆ ದಯೆ ತೋರು. ಚಿಂತಾ

ಕ್ರಾಂತನಾಗಿ ಅಲೆಯುತ್ತಿದ್ದೇನೆ. ನಾನು ತಪ್ಪಿತಸ್ಥ,

ಅಪರಾಧಿ, ಆ ಕಾಣಕ್ಕಾಗಿಯೇ ನಾನು

ಅಲೆಯುತ್ತಿದ್ದೇನೆ.

ನಾನು ಒಲವಿನ ಮದಿರೆ ಕುಡಿಯುತ್ತೇನೆ,

ಮಿತ್ರನ ಸುತ್ತ ಅಲೆಯುತ್ತೇನೆ. ಪ್ರಜ್ಞಾಹೀನರಂತೆ

ಮಾತನಾಡುತ್ತೇನೆ. ಆದರೆ (ಅಲೆದಾಟ ಯಾರ ಸುತ್ತ ಎಂಬ)

ಪ್ರಜ್ಞೆಯೊಂದಿಗೆ ನಾನು ಅಲೆಯುತ್ತಿದ್ದೇನೆ.

ನಾನು ಅಳುವುದೂ ಇದೆ, ನಗುವುದೂ ಇದೆ,

ಬೀಳುವುದೂ ಇದೆ, ಎದ್ದು ನಿಲ್ಲುವುದೂ ಇದೆ.

ವೈದ್ಯ ನನ್ನ ಮನದೊಳಗೆ ಹುಟ್ಟಿಕೊಂಡಿದ್ದಾನೆ ಮತ್ತು

ಒಬ್ಬ ರೋಗಿಯಾಗಿ ನಾನು ಅಲೆಯುತ್ತಿದ್ದೇನೆ.

ನನ್ನ ಪ್ರೀತಿಪಾತ್ರನೇ, ಬಂದು ಬಿಡು,

ಮೌಲಾನಾ ರೂಮಿಯ ಮೇಲೆ ದಯೆ ತೋರು,

ನಾನು ಶಮ್ಸ್ ತಬ್ರೇಜ್‌ರ ದಾಸನಾಗಿದ್ದೇನೆ,

ಮೈಮರೆತು ಅಲೆಯುತ್ತಿದ್ದೇನೆ.

Writer - ಅನುವಾದ: ಸನದ್, ಪುತ್ತಿಗೆ

contributor

Editor - ಅನುವಾದ: ಸನದ್, ಪುತ್ತಿಗೆ

contributor

Similar News

ಗಾಂಧೀಜಿ