ವರ್ತಮಾನದ ಕಣ್ಣು ಅಂಬೇಡ್ಕರ್

Update: 2018-12-07 13:33 GMT

ಕವಿ, ನಾಟಕಕಾರ, ತತ್ವಜ್ಞ, ಸಂಘಟಕ ಹೀಗೆ ಕೋಟಿಗಾನ ಹಳ್ಳಿ ರಾಮಯ್ಯರಿಗೆ ಕೋಟಿ ಮುಖಗಳು. ಕೋಲಾರದಲ್ಲಿ ಆದಿಮಾ ಸಂಸ್ಥೆಯನ್ನು ಸ್ಥಾಪಿಸಿ, ನಾಟಕಗಳ ಮೂಲಕ ಸಾಂಸ್ಕೃತಿಕ ಜಾಗೃತಿಯನ್ನು ಮೂಡಿಸಿದವರು. ಹಲವು ಪ್ರಮುಖ ನಾಟಕಗಳನ್ನು ಬರೆದಿರುವ ರಾಮಯ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಬಾಬಾ ಸಾಹೇಬ ಅಂಬೇಡ್ಕರ್ ಮೇಲೆ ಎಷ್ಟೋ ದಶಕಗಳಾದ ಮೇಲೆ ಒಂದು ಪಠ್ಯ ಬರೆದೆ. ಅದು ಇಲ್ಲಿದೆ. ಇದೀಗ ಈ ನಾಟಕವೊಂದಾದರೆ ಅಲ್ಲಿಗೆ ನಾಟಕಕಾರನಾಗಿ ನಾನು ಸಲ್ಲಿಸಬಹುದಾದ ನುಡಿನಮನವೂ ಆಗಬಹುದೆಂದು ಗೀಳು. ಗೀಳು ಹಿಡಿದವರು ಗೋಳಿಗರು, ಕೊರಗುವವರೂ ಆಗಿರುತ್ತಾರೆ. ನಾನು ನನ್ನ ಜತೆಗೂಡಿ ಬಂದವರೆಲ್ಲರನ್ನೂ ಬಹಳ ಗೋಳಾಡಿಸಿದ್ದೇನೆ. ಇದೊಂದು ಆಗುವಂತೆ ಜತೆಗೂಡಿ...ಯಾಕೆಂದರೆ......

ಇರುವುದನ್ನು ಇರುವಂತೆಯೇ ಕಾಣುವ ಕಣ್ಣು ಕೊಟ್ಟವರು ಬುದ್ಧ ಮತ್ತು ಬಾಬಾಸಾಹೇಬರು ಎನ್ನುವುದನ್ನು ಕಣ್ಣೆದುರಿಟ್ಟುಕೊಂಡು ಈ ಗಳಿಗೆಯನ್ನು ಮುಖಾಮುಖಿಗೊಳ್ಳುವುದಾದರೆ ನಮ್ಮೆದುರು ಹಿಂದುತ್ವ ಲೆಕ್ಕವಿಲ್ಲದಷ್ಟು ನೇಣು ಕುಣಿಕೆಗಳನ್ನು ಒಡ್ಡಿದೆ. ‘ಖೆಡ್ಡಾ’ (Operation) ಮಾದರಿಗಳ ಮೂಲಕ ನಮ್ಮನ್ನು ಆ ನೇಣು ಕುಣಿಕೆಗಳತ್ತ ಅನಾಯಾಸ ನಡೆಯುವಂತಹ ರಾಜಕೀಯ, ಆರ್ಥಿಕ, ಧಾರ್ಮಿಕ ಸಂರಚನೆಗಳ ಜಾಲ ಸೃಷ್ಟಿಸಿದೆ.

 ದುರಂತವೆಂದರೆ ನಾವು ನಿಭಾಯಿಸಬೇಕಾದ ಈ ಹೊತ್ತಿನ ‘ದಲಿತ ರಾಜಕಾರಣ’ದಿಂದ (ಸದ್ಯಕ್ಕೆ ‘ದಲಿತ’ ಅದೆಷ್ಟೋ ಅಪಥ್ಯವೆನಿಸಿದರೂ ‘ಬಹುಜನ’ ಬಿಂಬಿಸಲಾರದ್ದನ್ನು ‘ದಲಿತ’ ಬಿಂಬಿಸಬಲ್ಲದು ಆದ್ದರಿಂದ). ಈ ‘ದಲಿತ ರಾಜಕಾರಣ’ ನಿಭಾಯಿಸಲಾಗದಿರುವುದು ನಮಗೆಲ್ಲ ತಿಳಿಯುವ ವಾಸ್ತವವೇ ಆಗಿದೆ. ವೇಮುಲಾನ ದೇಹ ತೂಗಿಬಿದ್ದ ಒಂದೇ ಒಂದು ನೇಣು ಕುಣಿಕೆಯನ್ನಷ್ಟೇ ಈ ರಾಜಕಾರಣ ಕಾಣುವಂತಾಗಿರುವುದು. ಆದರೆ ಇಂದು ನಮ್ಮ ಕಣ್ಣೆದುರು ತೂಗುತ್ತಿರುವ ನೇಣು ಕುಣಿಕೆಗಳು ಆಕಾಶದ ನಕ್ಷತ್ರಗಳೆಷ್ಟಿರಬಹುದೋ ಅಷ್ಟು.

ಫ್ರೆಂಚ್ ಕ್ರಾಂತಿಯ ವೇಳೆ ಒಬ್ಬೊಬ್ಬನ ಕತ್ತು ಕತ್ತರಿಸಲು ಸಮಯ ಹಿಡಿಯುತ್ತದೆ ಎಂದು ಗಿಲೋಡಿನ್ ಯಂತ್ರವನ್ನು ಕಂಡುಹಿಡಿದ ರಾಲ್ಸ್ ವೆಯರಿ. ಕೊನೆಯಲ್ಲಿ ಅದೇ ಗಿಲೋಟಿನ್ ಯಂತ್ರಕ್ಕೆ ಕೊರಳೊಡ್ಡಬೇಕಾದ ಚಾರಿತ್ರಿಕ ಸ್ಥಿತ್ಯಂತರಗಳ ಹಿನ್ನೆಲೆಯಲ್ಲಿ ನಾವಿಂದು ಕೇವಲ ನೇಣು ಕುಣಿಕೆಗಳಿಂದ ತಪ್ಪಿಸಿಕೊಳ್ಳುವುದಷ್ಟೇ ಅಲ್ಲ ಯಾವ ಹಿಂದುತ್ವ ಇಂಥ ನೇಣು ಕುಣಿಕೆಗಳನ್ನು ಒಡ್ಡಿದೆಯೋ ಅದೇ ನೇಣುಕುಣಿಕೆಗಳಲ್ಲಿ ಆ ಪಾಶಂಡಿಗಳು ತೂಗುವಂತಾಗುವ ರಾಜಕಾರಣ ನಿಭಾಯಿಸಬೇಕಾಗಿದೆ.

(If one can’t perceive with this intensity sensitivity will become sensele) ಈ ದೇಶವನ್ನು ಕೂಡಿಸುವುದಕ್ಕೆ ಬಲಗೂಡುವುದಕ್ಕೆ ಸಶಕ್ತ ಭಾರತವಾಗಿಸುವುದಕ್ಕೆ ಇರುವ ಎರಡು ರೂಪಕಗಳು ಕಬೀರ ಮತ್ತು ಅಂಬೇಡ್ಕರ್. ಕಬೀರನನ್ನು ಹಿಂದುತ್ವದ (major cake eater) ಆದ ಪುರೋಹಿತಶಾಹಿ ಸಂಪೂರ್ಣ ಸ್ಥಗಿತಗೊಳ್ಳುವಂತೆ ಮಾಡಿದರೆ ಅದು ಸೃಷ್ಟಿಸಿರುವ ಕೊಳಕು ಶತಮಾನ ತೊಳೆದರೂ ಹೋಗದಿರುವಂಥದ್ದು. ಆದ್ದರಿಂದ ಕಬೀರ ರೂಪಕಕ್ಕೆ ಕಾಲ ಹಿಡಿಯುತ್ತದೆ. ಇನ್ನು ಅಂಬೇಡ್ಕರ್ ರೂಪಕವೊಂದೇ ವರ್ತಮಾನವನ್ನು ಎದುರಿಸಲು ನಲುಗಿರುವ ಪರಿಣಾಮಕಾರಿ, ಸಶಕ್ತ್ತ ರೂಪಕ. ಇದು ನನ್ನ ತಿಳುವಳಿಕೆ. ಈ ತಿಳುವಳಿಕೆಗಾಗಿ ನಾನು 40 ವರ್ಷಗಳಿಂದಲೂ ಬೆನ್ನತ್ತಿದ್ದೇನೆ...

ಆದ್ದರಿಂದ ಗೆಳೆಯರೇ.. ಅಂಬೇಡ್ಕರ್‌ರನ್ನು ನಂಬುವುದೆಂದರೆ ಅಂಬೇಡ್ಕರ್‌ರಲ್ಲಿ ವ್ಯಕ್ತಿಯೊಬ್ಬನನ್ನಷ್ಟೇ ನೋಡುವುದಲ್ಲ. ‘ಸಮಷ್ಟಿ’ಯನ್ನು ನೋಡುವ ಬಗೆ ಉತ್ತಮ. ಅಂಬೇಡ್ಕರ್ ಅಂದರೆ ಆದ ವ್ಯಕ್ತಿರೂಪವಾಗಿ ಕಂಡು ಆರಾಧಿಸಿಗೊಳ್ಳುವ ಅಪಾಯ ತಪ್ಪಿ ಅಂಬೇಡ್ಕರ್ ಎಂದರೆ ಆಧುನಿಕೋತ್ತರವೂ ಹಬ್ಬಬಲ್ಲ ಒಂದು ಆದಿಮ ವೈಚಾರಿಕ ಪರಂಪರೆ. ಅದು ಪ್ರಬುದ್ಧ ಭಾರತಕ್ಕೆ ಬೇಕಾದ ನೀಲನಕ್ಷೆ.

maximum currency ಇದನ್ನು ಈ ಹೊತ್ತಿಗೂ ನ್ಯಾಯಬದ್ಧವಾಗಿ ನಿಭಾಯಿಸಿಕೊಳ್ಳಲಾಗದ ಕಮ್ಯುನಿಸ್ಟರ ನಡೆಯೂ ಇಂದು ದಿಕ್ಕು ತಪ್ಪಿರುವ ಸ್ಥಿತಿಗೆ ಕಾರಣ ಎಂಬುದನ್ನು ಮೊದಲು ವಿಮರ್ಶಿಸಿಕೊಳ್ಳಬೇಕಿದೆ. ಆ ನಂತರ ‘ಬಹುಜನ’ ರಾಜಕಾರಣ ಕೂಡ ಅನಗತ್ಯವಾಗಿ ಅಂಬೇಡ್ಕರ್‌ರನ್ನು ಅದೇ ಹಿಂದುತ್ವದ ಚಿಂತನಾಧಾಟಿ ಜಾಡಿಗೆ ಬಿದ್ದು ಪುರುಷಾಧಿಕ್ಯ ಮಾದರಿಯಾಗಿಸಿ ಕಟ್ಟುವುದನ್ನು ಇಂದು ನಾವು ಸ್ವವಿಮರ್ಶೆ ಮಾಡಿಕೊಳ್ಳಬೇಕು. ಇಂಥ ಹಿಂದುತ್ವ ನೆಲೆಗೆ ಬೇಕಾದ ರೀತಿಯನ್ನು ಅಂದರೆ ರಾಮನ ಶೌರ್ಯ ಪ್ರತೀಕಕ್ಕೆ ಬದಲಾಗಿ ಅಂಬೇಡ್ಕರ್‌ರನ್ನು, ಅದೇ ಅಚ್ಚಿನ ಎರಕವಾಗಿಸುವುದಾದರೆ.. ಅಂಥ ಗುಣಾತ್ಮಕ ಬದಲಾವಣೆಯನ್ನೇನೂ ನಾವು ನಿರೀಕ್ಷಿಸಲಾಗದು. ಅಂಬೇಡ್ಕರ್ ಹೆಸರಿಗೆ ಚಲಾವಣೆ ಒದಗಿ ಬರುತ್ತಿರುವ ಕಾಲ ಇದು. ಅಂಬೇಡ್ಕರ್ ಈಗ ಎಲ್ಲರ ಕೈ ಅಸ್ತ್ರ. (Dalit-non Dalit, touchable-untouchable Ambedkarite) ಇರಬಹುದು (Marvist, Naxalite) ಇರಬಹುದು. ಆ ತುದಿಯ (‘Chitpavanite’) ಆಗಿರಬಹುದು. ನಾನು (Hindurite) ಅನ್ತಾ ಇಲ್ಲ, (‘Chitpavanite’) ಅನ್ತಾ ಇದ್ದೇನೆ. ಅಥವಾ ಯಾವುದೇ ಬಣ್ಣದ ರಾಜಕೀಯ (ambedkar)ನ್ನು (appropriate) ಮಾಡಿಕೊಳ್ಳಲೇಬೇಕಾದ ಕಾಲ. (Corporate) ಪರಿಭಾಷೆಯಲ್ಲಿ ಹೇಳುವುದಾದರೆ (market value) ಬಂದಿದೆ. ಆದ್ದರಿಂದ ಅಪಾಯ ಇರುವುದು ಇಲ್ಲಿಯೇ ಆದ್ದರಿಂದ ಎಚ್ಚರ ಇರಬೇಕಾದ್ದೂ ಕೂಡ ಇಲ್ಲಿಯೇ.

ಸಿದ್ಧಾಂತವೊಂದನ್ನು ಕೂಡ ಸರಕಾಗಿಸಬಹುದು. ಅದರಿಂದ ಲಾಭ ಬರುವಂತಿದ್ದರೆ... ಅಧಿಕಾರಕ್ಕೆ ಆ ಮೂಲಕ ಸರ್ವಾಧಿಕಾರಕ್ಕೆ ರಹದಾರಿಯಾಗುವಂತಿದ್ದರೆ. ಆದ್ದರಿಂದ ಸ್ನೇಹಿತರೇ ಈಗ ಬಾಬಾಸಾಹೇಬರನ್ನು ಸರಕಾಗಿಸದಂತೆ ಜೀವರಕ್ಷಕ ಮದ್ದಾಗುವಂತೆ ಮಾಡಿಕೊಳ್ಳುವುದು ಹೇಗೆ? ನಾವೆಲ್ಲಾ ಹಗಲಿರುಳೂ ಧ್ಯಾನಸ್ಥರಾಗಿ ಅನುಕ್ಷಣ ಚಿಂತಿಸುತ್ತಲೇ ಇರಬೇಕಾದ ಹೊತ್ತು. ಈ ಹೊತ್ತು. ಈ ಗಳಿಗೆ.

ಈ ದಿಕ್ಕಿನಲ್ಲಿ ನಾನು ಈಗಲೇ ತೊಡಗಿದ್ದು ನಾನು ಕಂಡುಕೊಂಡಿರುವ ರೀತಿಯೊಂದನ್ನು ನಿಮ್ಮಿಂದಿಗೆ ಹಂಚಿ ಕೊಳ್ಳಬಯಸುತ್ತೇವೆ. ಆಗಲೇ ನಾನು ಅಂಬೇಡ್ಕರ್ (currency) ಬಗ್ಗೆ ಪ್ರಸ್ತಾಪಿಸಿದೆ. (currency)ಎಂಬ ಶಕ್ತಿ ಇರುವುದು ಅದರ ಬಹುರೂಪಕತ್ವದಲ್ಲಿ. ಅದು ಒಂದೇ ಆಗಿದ್ದರೂ ಅದು ಅಪಾರ ಸಾಧ್ಯತೆಗಳನ್ನು ಒಳಗೊಂಡಿರುತ್ತದೆ. ನಾಣ್ಯದಿಂದ ನಾಣ್ಯವಷ್ಟೇ ಬರುವುದಿಲ್ಲ ಬದಲಿದೆ ಏನೆಲ್ಲಾ ಲಭ್ಯವೋ ಅದೆಲ್ಲವನ್ನೂ ಆ ವೌಲ್ಯ ನಿಗದಿಯಂತೆ ಪಡೆದುಕೊಳ್ಳಬಹುದು. ಆದ್ದರಿಂದ ಅಂಬೇಡ್ಕರ್ ರೂಪಕವನ್ನು ಬಹುಸ್ತರೀಯಗೊಳಿಸುವುದು ಅತ್ಯಂತ ಆದ್ಯತೆ. ಅಂಬೇಡ್ಕರ್ ಮೂರ್ತೀಕರಣ ಮತ್ತು ವ್ಯಕ್ತಿ ಆರಾದನೆಯ ಏಕರೂಪ ಮಾದರಿಗಿಳಿದಿರುವ ನಿಜವನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಬಹುಸಾಧ್ಯತೆಯ ಈ ರೂಪಕ ಬಂದಿಯಾಗಿರುವ ಸ್ಥಗಿತ ನೆಲೆಯನ್ನು ಒಡೆದು ಹರಿಯಬೇಕಿದೆ. ದ್ರವೀಕರಣಕ್ಕೆ ಒಳಪಡಿಸಬೇಕಿದೆ. ಯಾಕೆಂದರೆ ಅಂಬೇಡ್ಕರ್ ಒಂದು ಮಹಾನದಿ. ಈ ಮಹಾನದಿಯನ್ನು ಬೆಂಗಾಡಿಗೂ ಹರಿಸಬೇಕಾದ ಭಗೀರಥ ಪ್ರಯತ್ನಕ್ಕೆ ನಾವಿಂದು ಕೈ ಹಾಕಬೇಕಾಗಿದೆ.

ಇದು ನನ್ನ ತಿಳುವಳಿಕೆ. ಇದು ಸರಿಯೇ ತಪ್ಪೋ ತಿಳಿಯದು. ನಾನಂತೂ ‘ವಿಗ್ರಹ’ದ ಅಂಬೇಡ್ಕರ್‌ರನ್ನು ಯಾವತ್ತೂ ‘ಅಂತಿಮ’ ಎಂದುಕೊಂಡವನಲ್ಲ ಬದಲಿಗೆ ಒಂದು ಮೈಲಿ ಕಲ್ಲಿರುವಂತೆ ಗುರುತಿಗೆಷ್ಟೋ ಅಷ್ಟೇ. ಆದರೆ ಅವರ ಹೆಜ್ಜೆ ಗುರುತುಗಳಿವೆಯಲ್ಲ ಅವು ಈ ‘ವಿಗ್ರಹ’ಕ್ಕಿಂತ ‘ಪ್ರತಿಮೆ’ಗಿಂತ ಮುಖ್ಯ.....ಆದ್ದರಿಂದಲೇ ಪ್ರತಿ ಪದವನ್ನು ನಾನು ಇಂಥ ‘ನಡೆ’ಯು ಸಾಧ್ಯತೆಯ ದೃಷ್ಟಿಯಿಂದ ಹತ್ತು ಬಾರಿ ಸೋಸುತ್ತೇನೆ. ಹೀಗಾಗಿ ಕಳೆದ 15 ವರ್ಷಗಳಿಂದಲೂ ಬರೆಯಲು ಅಕ್ಷರಶಃ ಒದ್ದಾಡುತ್ತಿರುವ ಬಾಬಾಸಾಹೇಬರ ಮೇಲಿನ ನನ್ನ ನಾಟಕಕ್ಕೆ ಅಂಬೇಡ್ಕರ್ ಮತ್ತು ಆ ಜಿಂಕೆ ಮರಿಯೂ ಹೆಸರಿನ ಹಿಂದೆ ಕೂಡ ಇದೇ ಕಣ್ಣೋಟ ಕೆಲಸ ಮಾಡಿರುವುದು ಎನ್ನುವುದನ್ನು ನಿವೇದಿಸಿಕೊಳ್ಳುತ್ತಾ.. ಇದು ಸಾವಿರಾರು ಕೈಗಳ ಕೆಲಸ. ಅಂಥ ಕೈಗಳೆಲ್ಲಾ ಒಂದಾಗೋಣ, ನೇಣು ಕುಣಿಕೆಗಳಿಂದ ತಪ್ಪಿಸೋಣ-ನಾವೂ ತಪ್ಪಿಸಿಕೊಳ್ಳೋಣ. ಹಿಂದುತ್ವದ ರಕ್ತಪೀಪಾಸೆಗೆ ಬಲಿಯಾಗದಂತೆ ಈ ನೆಲವನ್ನು ಪವಿತ್ರಗೊಳಿಸೋಣ.

ಭಾಗ-2

 ಮೊಟ್ಟ ಮೊದಲ ಬಾರಿಗೆ ಬೌದ್ಧಿಕ ವಲಯದಲ್ಲಿ ಇಂಥದ್ದೊಂದು ನೋಟವನ್ನು ಮೊದಲ ದಾರಿ ಮಂಡಿಸುತ್ತಿರುವ ಈ ವಿಚಾರ ಸಂಕಿರಣದ ಪರಿಕಲ್ಪನೆಗೆ ಮತ್ತು ಅದನ್ನು ನಡೆಯಾಗಿಸುತ್ತಿರುವ ತಮಗೆಲ್ಲಾ ನನ್ನ ಹೃತ್ಪೂರ್ವಕ ಅಭಿನಂದನೆಗಳು

ಸ್ನೇಹಿತರೇ,

(‘Ambedkar vision for cultural India’) ಎನ್ನುವುದನ್ನು ಎಲ್ಲಿಂದ? ಹೇಗೆ? ಆರಂಭಿಸುವುದು. ಈ ವಿಚಾರ ಸಂಕಿರಣದ ಶೀರ್ಷಿಕೆ ಕಿವಿಗೆ ಬಿದ್ದಾಗಿನಿಂದಲೂ ನನ್ನ ಜಿಜ್ಞಾಸೆ ಆರಂಭ.

(‘Cultural India’) ಅರ್ಥವಾಗಬೇಕಾದರೆ (‘Cultural Ambedkar’) ಏನೆಂಬುದನ್ನು ಅರ್ಥಮಾಡಿಕೊಳ್ಳಲೇಬೇಕು. ಇದುವರೆಗೂ ಅಂಬೇಡ್ಕರ್ ಬಹುರೂಪಗಳ ಮಾತೃಕೆಯಾಗಿ ಬಗೆಯಲ್ಪಟ್ಟಿದ್ದಾರೆ. ಅಥವಾ ಉತ್ಖನನಗೊಂಡಿದ್ದಾರೆ. ಆದರೆ ಈ (‘cultural’) ಅನ್ನುವ ರೀತಿಯಲ್ಲಿ ಬಗೆಯಲ್ಪಟ್ಟಿದ್ದಾರೆಯೇ? ಅಥವಾ ಉತ್ಖನನಗೊಂಡಿದ್ದಾರೆಯೇ? ಇಲ್ಲ ಅವರ ಬರಹಗಳನ್ನು, ಭಾಷಣಗಳನ್ನು ಈ ನಿಟ್ಟಿನಲ್ಲಿ ನಾವು (‘Decipher’) ಮಾಡಿದ್ದೇವೆಯೇ..? ಅದು ತಕ್ಕ ಬಗೆಯಲ್ಲಿ? ಇದಕ್ಕೆ ಈ ಕಾಲಘಟ್ಟದಲ್ಲಿ ಉತ್ತರ ಕಂಡುಕೊಳ್ಳುವುದು ಕಷ್ಟವೇ? ಯಾಕೆಂದರೆ ಇದು ಕಾಲಾತೀತವಾಗಬಲ್ಲ ಪ್ರಶ್ನೆ.?

ಅದಕ್ಕೂ ಮೊದಲು ಇಂಥದ್ದೊಂದು ಅನಿವಾರ್ಯತೆ ಯಾಕೆ ಸೃಷ್ಟಿಯಾಗಿದೆ ಎನ್ನುವುದಕ್ಕೆ ಕಾರಣಗಳನ್ನು ಭೂತಗನ್ನಡಿ ಹಿಡಿದು ನೋಡಬೇಕಿಲ್ಲ. ಶ್ರೀರಾಮ, ಹನುಮಂತರ ಅಸ್ತ್ರಗಳನ್ನು ಹಿಡಿದು ‘ಮಹಾಭಾರತ’ದ ಅಗಂತುಕ ಕುರುಕ್ಷೇತ್ರಗಳನ್ನು ನಿರ್ಮಿಸಲು ಹೊರಟವರ (‘Manifisto’) ವಿಶೇಷಣ ರಹಿತ ರಾಷ್ಟ್ರೀಯತೆಗೆ ‘ಸಾಂಸ್ಕೃತಿಕ ರಾಷ್ಟ್ರೀಯತೆ’ಯಾಗಿ ಪದಾಂತರಿಸಿದರೇ ಅಂದಿನಿಂದ ಇಂದಿನವರಿಗೂ ಅದರ ಕೇಡಿನ ಉತ್ಪನ್ನಗಳು ‘ಗಾರ್ಬೇಜ್’ನಂತೆ ಕಾಡುತ್ತಿವೆ. ತ್ಯಾಜ್ಯ ವಿಲೇವಾರಿ ಭೌತಿಕ ಹಾಗೂ ಬೌದ್ಧಿಕ ಈ ಎರಡೂ ನೆಲೆಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಾಚರಣೆ. ‘ಸ್ವಚ್ಛಭಾರತ್’ ಹಂತ ದಾಟಿ ‘ಭೀಮಭಾರತ್’ = ‘ಬುದ್ಧಭಾರತ್’ ಸಂಸ್ಥಾಪನೆಯತ್ತ ಹೊರಳಬಹುದು. ಈ( cultural nationalist) ಗಳ (uncultured) ನಡಾವಳಿಗೆ ಹೈದರಾಬಾದಿನ ವೆಂಕಯ್ಯನ ಮಾದರಿಯನ್ನು ಅದು ಆಯ್ಕೆಮಾಡಿಕೊಂಡಿದ್ದೇ ನಿದರ್ಶನ. ಇದಕ್ಕೂ ಮೊದಲು ಅದು ದಲಿತ ನೆಲೆಗಳಿಂದ ಆಯ್ದುಕೊಂಡಿದ್ದ ಮಾದರಿ-ವಾಲ್ಮೀಕಿಯದು. ಅಯೋಧ್ಯೆಯ ಶಿಲಾನ್ಯಾಸಕ್ಕೆ ಆಯ್ಕೆಯಾದವನು ಹೇಲು ಬಾಚುವ ದಲಿತನಲ್ಲ. ಬದಲಿಗೆ ವಾಲ್ಮೀಕಿ. ಈ ವಾಲ್ಮೀಕರಲ್ಲಿ ಎರಡು ಬಗೆ ‘ಹೇಲು ಬಾಚುವವರು’ ಹಾಗೂ ಬಿಲ್ಲು ಬಾಣ ಅಥವಾ ರಾಮಾಯಣ ಬರೆದ ‘ವಾಲ್ಮೀಕಿ’. ನಮ್ಮವರು ಮಾತ್ರ ಎಂದು ನಂಬಿರುವ ಶಿಲಾನ್ಯಾಸಕಾರ ಹೇಲು ಬಾಚಿದವನಲ್ಲ. ಇತ್ತೀಚಿನ ಸ್ವಚ್ಛಭಾರತ ವೆಂಕಯ್ಯ ಹೇಲುಬಾಚಿದವನು. ಬಾಚುತ್ತಲೇ ಇರುವವನು, ಇನ್ನು ಮುಂದೆಯೂ ಅವನ ಕೊನೆ ಉಸಿರಿರುವವರೆಗೆ ಬಾಚುತ್ತಲೇ ಇರಬೇಕಾದವನು!

‘ರಾಷ್ಟ್ರೀಯತೆ’ಯನ್ನು ಸಾಧಿಸಲು ಹೊರಟ ಇಟಲಿ, ಜರ್ಮನಿ...... ಅಥವಾ ಶೋಷಿತ ಸರ್ವಾಧಿಕಾರದತ್ತ ನಡೆದ ರಶ್ಯ, ಯುಗೋಸ್ಲಾವಿಯಾ, ಪೋಲೆಂಡ್, ಹಂಗೇರಿ... ಹೀಗೆ ಕಮ್ಯುನಿಸ್ಟ್ ನಡೆಗಳೂ ಕೂಡ ಯಾಕೆ ಇಂಥ ಮಾದರಿಗಳನ್ನು ಆಯ್ಕೆಮಾಡಿಕೊಳ್ಳುತ್ತದೆ ಎನ್ನಲು ಅಂದ್ರೆ ವಾಯ್ದೆನ! ಮ್ಯಾನ್ ಆಪ್ ಮಾರ್ಬಲ್ ಮತ್ತು ಮ್ಯಾನ್ ಆಫ್ ಐರನ್ ಚಿತ್ರಗಳು ಹೇಳಬಲ್ಲವು........

ಗೆಳೆಯರೇ.. ನಾವು ಅಂಬೇಡ್ಕರ್‌ರನ್ನು ‘ಸಾಂಸ್ಕೃತಿಕ’ವಾಗಿ ವ್ಯಾಖ್ಯಾನಿಸಿಕೊಂಡ ನಂತರವಷ್ಟೆ. ‘ಸಾಂಸ್ಕೃತಿಕ ಭಾರತ’ವನ್ನು ಕಲ್ಪಿಸಿಕೊಳ್ಳವುದಕ್ಕೆ ಸಾಧ್ಯ. ಆಗ ಸಾಂಸ್ಕೃತಿಕ ಎಂದು ಹೇಳಲಾಗುತ್ತಿರುವ ‘ಪಡಿಪದಾರ್ಧ’ ಭಾರತೀಯನನ್ನು ವಿಕೃತನಾಗಿಸುವುದರಲ್ಲಿ ಕೊನೆಗೊಳ್ಳಬಲ್ಲುದೇ ಹೊರತು ‘ಸುಕೃತ’ನಾಗಿಸುವಲ್ಲಿ ಅಲ್ಲ. ಹಾಗಾದರೆ ‘ಸುಕೃತ’ನಾಗಬೇಕಾದ ಭಾರತೀಯನ ಆಯ್ಕೆಯ ರಾಷ್ಟ್ರೀಯತೆ ಸಾಂಸ್ಕೃತಿಕ ರಾಷ್ಟ್ರೀಯವಾದಿಗಳು ಮುಂದಿಡುತ್ತಿರುವ ಮಾದರಿಯದಾಗಿರಲು ಸಾಧ್ಯವಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಇಂದು ನಮ್ಮ ಮುಂದಿರುವ ಸಾಂಸ್ಕೃತಿಕ ರಾಷ್ಟ್ರೀಯತೆಯ ಭಾರತದ ನೀಲನಕ್ಷೆ ಹೇಗಿರಬಲ್ಲುದು ಎಂಬ (trailer) ಸಾಕು... (Main Picture

...) ಮುಂದಿದೆ. ಅಂಬೇಡ್ಕರ್‌ರ ಬಗ್ಗೆ ಪ್ರಪಂಚದಾದ್ಯಂತ ವಿವಿಧ ಆಯಾಮಗಳ ಅಧ್ಯಯನ ನಡೆಯುತ್ತಿರುವುದು ತಮಗೆಲ್ಲಾ ತಿಳಿದೇ ಇದೆ. ಅದರಲ್ಲಿ ಬಹುಮುಖ್ಯ (Focus) ಸಮಾಜಶಾಸ್ತ್ರಜ್ಞರಾಗಿ ಅಂಬೇಡ್ಕರ್, ರಾಜನೀತಜ್ಞರಾಗಿ ಅಂಬೇಡ್ಕರ್, ಆರ್ಥಿಕ ತಜ್ಞರಾಗಿ ಅಂಬೇಡ್ಕರ್, ನ್ಯಾಯ ವಿಧೇಯಕ ಸಂವಿಧಾನ ತಜ್ಞ ಅಂಬೇಡ್ಕರ್, ಪತ್ರಿಕೋದ್ಯಮಿ ಅಂಬೇಡ್ಕರ್, ಧರ್ಮ ಜಿಜ್ಞಾಸು ಅಂಬೇಡ್ಕರ್, ತತ್ವಜ್ಞಾನಿ ಅಂಬೇಡ್ಕರ್ ಈ ಆಯಾಮಗಳತ್ತ ಬೆಳಕು ಚೆಲ್ಲಲಾಗಿದೆಯೇ ಹೊರತು ಸಾಂಸ್ಕೃತಿಕ ಅಂಬೇಡ್ಕರ್‌ರ ಉತ್ಖನನ ನಡೆದಿರುವುದು ಅಪರೂಪ ಎಂದೇ ನನ್ನ ತಿಳುವಳಿಕೆ.

ರಾಜಕೀಯ-ಆರ್ಥಿಕ ಚೌಕಟ್ಟಿನಾಚೆಗೆ ಕಾನ್ಷಿರಾಂರು ಇದನ್ನು ನಡೆಯಾಗಿಸಲು ಯತ್ನಿಸಿದ್ದು ಕೂಡ ಸಾಂಸ್ಕೃತಿಕವನ್ನು ಭಾಗಶಃ ಒಳಗೊಂಡಿದ್ದಂತಹ ಪ್ರಯೋಗವಾಗಿತ್ತು. ಕಾನ್ಷಿರಾಂರ ನಂತರ ಆ ಸಾಂಸ್ಕೃತಿಕದ ನೆರಳು ಬಹುಜನ ಪ್ರಯೋಗಗಳಲ್ಲಿ ಕಾಣಿಸುವುದಿಲ್ಲ.

ಈಗ ‘ಇಂಡಿಯಾ’ ಅಂಬೇಡ್ಕರ್ ಕಂಡ ಇಂಡಿಯಾ ಅಲ್ಲ. ಅವತ್ತಿನ ಇಂಡಿಯಾಗೂ ಇವತಿನ (corporate India)ಗೂ ಅಜಗಜಾಂತರ ವ್ಯತ್ಯಾಸವಿದೆ. ಈ (corporate India) ‘ಬ್ರಾಹ್ಮಣ ಇಂಡಿಯಾ’. ಆದರೆ ಅದರ ಮುಸುಗು ‘ಸಾಂಸ್ಕೃತಿಕ ಇಂಡಿಯಾ’.

ಇಂಥ ವೈರುಧ್ಯಗಳ ಹಿನ್ನೆಲೆಯಲ್ಲಿ ನಾವು ಅಂಬೇಡ್ಕರ್‌ರ ದರ್ಶನವನ್ನು ನೋಡಬೇಕಿದೆ. ಅಂಬೇಡ್ಕರ್‌ರು ಅದೆಂತಹ ಒಳನೋಟ ಎನ್ನುವುದಕ್ಕೆ ಅವರು ಮಾರ್ಕ್ಸ್‌ವಾದಿಗಳು ಅರ್ಥಮಾಡಿಕೊಂಡಿದ್ದ (basic structure –super structure) ನ್ನು ಸಾರಾಸಗಟು ನಿರಾಕರಿಸಿ ಭಾರತೀಯ ಸಂದರ್ಭದಲ್ಲಿ (super structure) ಎನ್ನುವುದು ಶಾಸ್ತ್ರ, ಸೂತ್ರ, ಪುರಾಣಗಳ ಮೊತ್ತವಾಗಿರುವುದರಿಂದ (basic structure)ಗೂ ಮಿಗಿಲಾದ ಪ್ರಾಶಸ್ತ್ಯವನ್ನು (super structure)ಗೆ ಕೊಡಬೇಕೆಂದಿದ್ದಾರೆ. ಅಂಬೇಡ್ಕರ್‌ರು ಸಮಾಜಶಾಸ್ತ್ರಜ್ಞರೂ ಧರ್ಮಶಾಸ್ತ್ರಜ್ಞರೂ ಆಗಿದ್ದುದರಿಂದ ಈ ‘ಸಾಂಸ್ಕೃತಿಕ’ ಎನ್ನುವುದು ಎಂಥ ‘ಅಪಾಯಕಾರಿ’ ಆಯಾಮ ಎನ್ನುವುದರ ಅರಿವಿತ್ತು. ಆದ್ದರಿಂದಲೇ ಅಂಬೇಡ್ಕರ್‌ರು ಕಾರ್ಮಿಕ ಹೋರಾಟ ಕಾಲಘಟ್ಟದ ಹೊರತಾಗಿ ಮಿಕ್ಕೆಲ್ಲ ಹೋರಾಟಗಳನ್ನು ಅಷ್ಟೇ ಏಕೆ ಸಂವಿಧಾನ, ಕಾನೂನು ಸಚಿವ ಪದವಿಯ ಅವಕಾಶಗಳನ್ನು ಕೂಡ ಈ (super structure) ಒಡೆಯಲಿಕ್ಕೆಂದೇ ಮೀಸಲಿಟ್ಟರು.

(‘Be a ruling race’) ಎನ್ನುವ ಲೋಗೋ ಲೈನು ಕೇವಲ ರಾಜ್ಯಾಧಿಕಾರಕ್ಕಷ್ಟೇ ಸೀಮಿತವಲ್ಲ. ಅದರಾಚೆಗೂ ವಿಸ್ತರಿಸಿರುವ ಸಾಂಸ್ಕೃತಿಕ ಬೃಹತ್ ಭಿತ್ತಿ. ಬ್ರಾಹ್ಮಣ ಧರ್ಮದ ದಿಗ್ವಿಜಯದ ಹಿಂದಿನ ಎಲ್ಲ ಹುಸಿ ಮತ್ತು ಅನ್ಯಾಯದ ಸಾಂಸ್ಕೃತಿಕ ನಿರ್ಮಿತಿಗಳನ್ನು ಗುರುತಿಸಿ ಅದಕ್ಕೆ ಪರ್ಯಾಯಗಳ ಮೂಲಕ ನ್ಯಾಯಯುತ ಹಾಗೂ ಘನತೆಯನ್ನು ತಂದುಕೊಳ್ಳುವುದಾಗಿದೆ. ದಲಿತ ತಾತ್ವಿಕತೆಯ ವಿಶ್ವಾತ್ಮಕತೆ ಅಂಬೇಡ್ಕರ್.

B (schoolಈಗ ನಾವು ಗ) ರೀತಿ ವಿಶ್ಲೇಷಿಸೋಣ. ಯಾವುದಕ್ಕೆ ವಿಶ್ವಾತ್ಮಕತೆ ಸಾಧ್ಯವೋ ಅದು ಹೆಚ್ಚು ಮಾರಾಟದ ವಸ್ತು. ಉಪ್ಪಿರಲಿ... (chip) ಇರಲಿ.. ಅಂಬೇಡ್ಕರರು ಕಂಡ ಕನಸಾದ (Be a ruling race) ಪರಿಕಲ್ಪನೆ ಕೂಡ ಈ ನಿಯಮಕ್ಕೆ ಒಳಪಟ್ಟಂತೆಯೇ ರೂಪಿಸಿಕೊಳ್ಳಬೇಕಾದದ್ದು. ಹಾಗಿದ್ದಲ್ಲಿ ದಲಿತರು (‘B a ruling race’) ಅಂದರೆ (‘Business race’ ‘ruling race’) ಅನ್ನುವುದು ಮೋದಿ ಪ್ರತಿಷ್ಠಾಪನೆಯಿಂದಾಗಿ ಒಂದು (classical example)  ಅನ್ನಬಹುದು. ಅಥವಾ ಇದೇ ಸ್ಕೂಲೊಂದು ಪೋಷಿಸಿದ್ದ (logo line & future is vyshya) ಎನ್ನುವುದು ಕೂಡ ಇದನ್ನೇ.. ಆದರೆ ಪ್ರಶ್ನೆ ಈ ನೆಲದ ಅಂತ್ಯಜರು ಏನನ್ನು ಮಾರಿದರೆ ಯಾರು ಅದನ್ನು ಕೊಳ್ಳುತ್ತಾರೆ ಎನ್ನುವುದು. ಇದೊಂದು ಗತಿಗೇಡಿತನದ ಪ್ರಶ್ನೆ ಅನ್ನಿಸಿದರೂ ಆತ್ಮಾವಲೋಕನಕ್ಕೆ ತಕ್ಕ ಪ್ರಶ್ನೆ ಎಂದೇ ನನ್ನ ಅಭಿಪ್ರಾಯ. ಇಂಥ ಕೇಂದ್ರಿತ ದಲಿತ ಬೌದ್ಧಿಕ ಚಿಂತನೆಯೊಂದು ಹೀಗೆ ದಲಿತ ಬಂಡವಾಳಿಗರ ಕೂಟ ಕಟ್ಟುವುದರ ಮೂಲಕ ಒಂದು ಮಾದರಿ ಮುಂದಿಟ್ಟಿದೆ. ಆದರೆ ಸಾಂಸ್ಕೃತಿಕ ಅಂಬೇಡ್ಕರ್ ಅಥವಾ ಸಾಂಸ್ಕೃತಿಕ ಭಾರತದ ವೈರುಧ್ಯಕ್ಕೆ ಮದ್ದಾಗಬಲ್ಲದೆ? ಕಾದು ನೋಡೋಣ. (‘dalith men in suit')ನಲ್ಲಿ ಇದು ಸೂಟುಧಾರಿ ಅಂಬೇಡ್ಕರ್ ಇರಬಹುದೇನೋ ಆದರೆ (cultural) ಅಂಬೇಡ್ಕರ್-ಸಾಂಸ್ಕೃತಿಕ ರೂಪದ ಅಂಬೇಡ್ಕರ್..?

ಅಂಬೇಡ್ಕರ್‌ರ ನಂತರ ದಲಿತ (identity) ರಾಜಕಾರಣ ವಿಘಟನೆಗಳ ಸರಮಾಲೆ. ಬಾಬಾಸಾಹೇಬರು ಭೂಮಿಕೆ ಸಿದ್ಧಮಾಡಿಕೊಟ್ಟ ಹಾಗೂ ಅವರ ಪರಿನಿರ್ವಾಣದ ನಂತರ ಅಸ್ತಿತ್ವಕ್ಕೆ ಬಂದ (RPI)(Republican party of India)ದ ವಿಘಟನೆ ಪ್ರಕ್ರಿಯೆಅಂತೆಯೇ ಈ ರಿಪಬ್ಲಿಕನ್ ಪಕ್ಷದ ಒಡಕು, ತಾತ್ವಿಕ ಬೌದ್ಧಿಕ ದಾರಿದ್ರದ ವಿರುದ್ಧ ಬಂಡೆದ್ದು ಹುಟ್ಟಿದ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್‌, ಆನಂತರ ಕರ್ನಾಟಕದ ದಲಿತ ಸಂಘರ್ಷ ಸಮಿತಿ, ಆಂಧ್ರಪ್ರದೇಶದ ‘ದಲಿತ ಮಹಾಸಭಾ’....... ಎಲ್ಲವೂ ಕೂಡ ಇಂಥದ್ದೇ ವಿಘಟನೆ ಮತ್ತು ಒಡಕುಗಳ ವಿಶ್ವರೂಪ ದರ್ಶನ ಮೂಡಿಸಬಲ್ಲವು. ಯಾಕೆ ಹೀಗೆ ಒಂದಾಗಬೇಕಾದ ದಲಿತ ಐಕ್ಯತೆಯ ನೆಲೆಗಳು ಅಂತರ್ಗತ ವೈರುಧ್ಯಗಳ ಅಕಾರಣವಾಗಿ ಛಿದ್ರಗೊಳ್ಳುತ್ತವೆ. ಅಂತೆಯೇ ಅದೆಷ್ಟೇ ವೈರುಧ್ಯಗಳಿದ್ದರೂ ಅವನ್ನೆಲ್ಲಾ ವಾತಾಪಿ ಗರ್ಭದಂತೆ ದಲಿತ ಅಸ್ತಿತ್ವವನ್ನು ಗುಲಾಮಗಿರಿಗಷ್ಟೇ ಸೀಮಿತಗೊಳಿಸುವ ಪ್ರತಿಗಾಮಿ, ಫ್ಯಾಶಿಸ್ಟ್ ನೆಲೆಗಳು ಬಲ ವಿಸ್ತಾರಗೊಳ್ಳುತ್ತವೆ? ನಿಜಕ್ಕೂ ನಾವೆಲ್ಲಾ ತಲೆಕೆಡಿಸಿಕೊಳ್ಳಲಿಕ್ಕೆ ಅರ್ಹವಾದ ವಿಚಾರ ಇದು.

 ತಪ್ಪೋ ಸರಿಯೋ ಇದು ನನ್ನ ವೈಯಕ್ತಿಕ ಅಭಿಪ್ರಾಯ. ಇದನ್ನು ಅರ್ಥಮಾಡಿಸಲು ಬಾಬಾಸಾಹೇಬರು ಕೊಟ್ಟ ಸಮಾಜಶಾಸ್ತ್ರೀಯ ಸಿದ್ಧಾಂತ (graded enequality)ಯಲ್ಲೇ ಉತ್ತರ ಹುಡುಕುವುದು ಸಮಂಜಸ ಎನ್ನುವುದು ನನ್ನ ಅಭಿಪ್ರಾಯ. ಬಾಬಾಸಾಹೇಬರು ತಮ್ಮ ಈ ಸಮಾಜಶಾಸ್ತ್ರೀಯ ಪ್ರಮೇಯವನ್ನು (verticality)ಯಲ್ಲಿ ವಿವರಿಸುತ್ತಾರೆ. ಅಂತೆಯೇ ಇನ್ನು ಪರಿಣಾಮಕಾರಿಯಾದ ಪಿರಮಿಡ್ ರೂಪಕ ಬಳಸುತ್ತಾರೆ. ಆ ಪ್ರಕಾರ ತಳಹದಿಯಲ್ಲಿ ದಲಿತ-ಶೋಷಿತರು-ಅದರ ಶಿರೋಭಾಗದಲ್ಲಿ ಬ್ರಾಹ್ಮಣರು ಇರುವುದಾಗಿ ಹೇಳುತ್ತಾರೆ. ಅಂತೆಯೇ ಮೇಲ್ಮುಖ ಚಲನೆಯ ಚಾರಿತ್ರಿಕ ಸಂದರ್ಭಗಳಲ್ಲೂ ಮೇಲಿನ ಜಾತಿಗಳಿಗೆ ಇಂಥ ಪ್ರತಿಕ್ರಿಯೆಗಳು ಅಪಾರ ಕೀರ್ತಿ, ಆರ್ಥಿಕತೆ, ರಾಜಕೀಯ ಅಧಿಕಾರ ಹೀಗೆ ಏನೆಲ್ಲ ಲಾಭಗಳನ್ನು ಸಾಮಾಜಿಕ ಶ್ರೇಣಿಯ ಶಿಖರದಲ್ಲಿರುವವರಿಗೆ ತಂದುಕೊಡಬಲ್ಲದು. ಅಂತೆಯೇ ಅದೇ ವೇಳೆ ಅದೇ ಪ್ರಮಾಣದ ಅಪವೌಲ್ಯ, ಅಪಕೀರ್ತಿ, ಅಗೌರವಗಳನ್ನು ಸಾಮಾಜಿಕ ಶ್ರೇಣಿಯ ಕೆಳ ಹಂತಗಳಲ್ಲಿರುವ ಕೆಳಜಾತಿಗಳಿಗೆ ತಂದುಕೊಡುತ್ತದೆ ಎಂಬ ಬಾಬಾ ಸಾಹೇಬರ ಈ ಪ್ರಮೇಯವನ್ನು ಸಂಸ್ಕೃತಿಗೂ ಅಳವಡಿಸಿ ನೋಡಬಹುದು.

ಸಂಸ್ಕೃತಿಯ ನಿರ್ಮಾಣದಲ್ಲಿ ಕೆಳಜಾತಿ / ಕೆಳವರ್ಗಗಳ ಅಥವಾ ತಳಸಮುದಾಯಗಳ ಪಾತ್ರ ದೊಡ್ಡದು. ಯಾವುದನ್ನು ಸಂಸ್ಕೃತಿ ಪರಂಪರೆ ಎನ್ನಲಾಗುತ್ತಿದೆಯೋ ಅದೆಲ್ಲವೂ ಈ ನೆಲದ ಅಂತ್ಯಜರು, ಅಸ್ಪಶ್ಯರೂ ಆಗಿರುವವರ ಸೃಷ್ಟಿ ಎಂಬುದನ್ನು 1891 ಅಂದರೆ ಬಾಬಾಸಾಹೇಬರು ಹುಟ್ಟಿದ ವರ್ಷ ಪ್ರಕಟವಾದ ಗ್ರಂಥ (“The original inhabitants of bharatha varsha or India’)

ದ ಕರ್ತೃ ಗುಸ್ತೇವ್ ಓಪೆಟ್‌ರು ಮಂಡಿಸಿದ್ದಾರೆ. ಇವರು ಜರ್ಮನಿ ಮೂಲದ ಸಂಸ್ಕೃತ ಪ್ರಾಚಾರ್ಯರು. ಜರ್ಮನಿ ಮೂಲದ ಮ್ಯಾಕ್ಸಮುಲ್ಲರ್‌ನನ್ನು ಒಪ್ಪುವ ಸನಾತನಿಗಳು ಗುಸ್ಸೇವ್ ಓಪೆಟ್‌ರನ್ನು ಒಪ್ಪದಿರುವ ದ್ವಿಮುಖಧೋರಣೆ ಯಾಕೆ ತಳೆದಿದ್ದಾರೋ ತಿಳಿಯದು. ಸಾಂಸ್ಕೃತಿಕ ರಾಷ್ಟ್ರೀಯತಾವಾದಿಗಳು ಸಾಂಸ್ಕೃತಿಕ ಶುದ್ಧತೆಯ ಹೆಸರಿನಲ್ಲಿ (physically) ಗಂಗಾ ಶುದ�

Writer - ಕೋಟಿಗಾನಹಳ್ಳಿ ರಾಮಯ್ಯ

contributor

Editor - ಕೋಟಿಗಾನಹಳ್ಳಿ ರಾಮಯ್ಯ

contributor

Similar News

ಗಾಂಧೀಜಿ