ಮಮತಾ ಬ್ಯಾನರ್ಜಿಗೆ ಬಿಜೆಪಿಯೆಂದರೆ ಭಯ: ಅಮಿತ್ ಶಾ

Update: 2018-12-07 13:42 GMT

ಹೊಸದಿಲ್ಲಿ,ಡಿ.7: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬಿಜೆಪಿಯೆಂದರೆ ಭಯ ಹಾಗಾಗಿಯೇ ಅವರು ಪಕ್ಷವು ರಾಜ್ಯದಲ್ಲಿ ರ್ಯಾಲಿ ನಡೆಸುವುದರ ಮೇಲೆ ನಿರ್ಬಂಧ ಹೇರಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶುಕ್ರವಾರ ವ್ಯಂಗ್ಯವಾಡಿದ್ದಾರೆ ಅಮಿತ್. ಶಾ ಕೂಚ್ ಬೆಹಾರ್‌ಗೆ ಭೇಟಿ ನೀಡಬೇಕಿತ್ತು. ಆದರೆ ಅವರ ಆಗಮನದಿಂದ ಹಿಂಸಾಚಾರ ಭುಗಿಲೇಳಬಹುದು ಎಂಬ ಭೀತಿಯನ್ನು ರಾಜ್ಯ ಸರಕಾರ ವ್ಯಕ್ತಪಡಿಸಿದ ಕಾರಣ ಕೊಲ್ಕತಾ ಉಚ್ಚ ನ್ಯಾಯಾಲಯ ಅಮಿತ್ ಶಾಗೆ ಅನುಮತಿ ನಿರಾಕರಿಸಿತ್ತು.

ಸದ್ಯ ರ್ಯಾಲಿಗಳನ್ನು ಮುಂದೂಡಲಾಗಿದೆ, ರದ್ದುಗೊಳಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಶಾ ರಾಜ್ಯದಲ್ಲಿ ಶೀಘ್ರ ರ್ಯಾಲಿಗಳನ್ನು ನಡೆಸಲಾಗುವುದು. ಪಕ್ಷವು ರಾಜ್ಯದಲ್ಲಿ ಮೂರು ರ್ಯಾಲಿಗಳನ್ನು ನಡೆಸಲು ಚಿಂತಿಸಿದೆ ಎಂದು ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ಪತ್ರಿಕಾ ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ ಶಾ, ಬಂಗಾಳದಲ್ಲಿ ಬಿಜೆಪಿಯ ಜನಪ್ರಿಯತೆಯನ್ನು ಮಮತಾ ಬ್ಯಾನರ್ಜಿ ತನಗೆ ಎದುರಾಗಿರುವ ಅಪಾಯ ಎಂದು ಭಾವಿಸಿದ್ದಾರೆ. ಬಿಜೆಪಿ ರಾಜ್ಯ ಪ್ರವೇಶಿಸದಂತೆ ಮಾಡುವ ಮೂಲಕ ಅವರು ಜನರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ರಾಜಕೀಯ ಹತ್ಯೆಗಳು ನಡೆಯುವುದು ಹೆಚ್ಚಾಗಿದೆ. ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ರಾಜ್ಯದಲ್ಲಿ ಶಿಕ್ಷಣ ತಳಹಂತ ತಲುಪಿದ್ದು ಡೊನೇಶನ್ ಕೊಡದ ಹೊರತು ಶಿಕ್ಷಣಕ್ಕೆ ಪ್ರವೇಶ ಅಸಾಧ್ಯವಾಗಿದೆ ಎಂದು ಶಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News