ಮನೆಯಲ್ಲಿ ಬೆಂಕಿ ಅವಘಡ: ಇಬ್ಬರು ಮಕ್ಕಳು ಜೀವಂತ ದಹನ

Update: 2018-12-07 17:14 GMT

ವಡಂಕಚೇರಿ (ಕೇರಳ),ಡಿ.7: ತೃಶೂರಿನ ತೆಕ್ಕುಂಕರ ಪಂಚಾಯತ್‍ ನ ಮಲಕ್ಕಾಯಿ ಎಂಬಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದು ಇಬ್ಬರು ಮಕ್ಕಳು ಜೀವಂತ ದಹನವಾಗಿದ್ದಾರೆ. ತಾಯಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಓರ್ವ ಬಾಲಕಿಯನ್ನು ರಕ್ಷಿಸಲಾಗಿದೆ.

ತೆಕ್ಕುಂಕರ ಪಂಚಾಯತ್ ಮಲಾಕ್ಕಾಯಿಯ ಅಚ್ಚಕೊಟ್ಟಿಲ್ ಡೋನ್ರೋಸ್‍ರ  ಮಕ್ಕಳಾದ ಸೆಲಸ್ಮಿಯ(2), ಡೋನ್‍ ಫಲೀಸ್(10) ಮೃತಪಟ್ಟಿದ್ದು, ಡೋನ್ರೋಸ್(47), ಪತ್ನಿ ಬಿಂದು (35), ಹಿರಿಯ ಪುತ್ರಿ ಸೆಲಸ್ನಿಯಾ(13)ರಿಗೆ ಸುಟ್ಟ ಗಾಯಗಳಾಗಿವೆ.  . ಗಾಯಾಳುಗಳನ್ನು ತೃಶೂರಿನ ಜ್ಯುಬಿಲಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳು ಮಲಗಿದ್ದಾಗ ಘಟನೆ ನಡೆದಿತ್ತು. ಮಕ್ಕಳಿದ್ದ ಕೋಣೆಯಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, ಅವರನ್ನು ಹೊರತರುವ ಮೊದಲೇ ಬೆಂಕಿ ಕೋಣೆಯನ್ನು ಆವರಿಸಿತ್ತು. ಈ ಸಂದರ್ಭ ಡೋನ್ರೋಸ್ ಮನೆಯ ಹೊರಗೆ ಕಾರು ತೊಳೆಯುತ್ತಿದ್ದರು. ಬೆಂಕಿ ಆವರಿಸಿದೊಡನೆ ಬಿಂದು ಮನೆಯಿಂದ ಹೊರಗೆ ಓಡಿ ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News