ಪೆಹ್ಲೂ ಖಾನ್ ಹತ್ಯೆ ಕುರಿತ ಕಿರುಚಿತ್ರಕ್ಕೆ ಕೆಂಡವಾಗಿರುವ ಸಂಘ ಪರಿವಾರ

Update: 2018-12-09 06:46 GMT

ಚಿತ್ರವನ್ನು ವಿಮರ್ಶಕರು ಬಹುವಾಗಿ ಮೆಚ್ಚಿಕೊಂಡಿದ್ದರೂ ಅದು ಸಂಘ ಪರಿವಾರದ ಕೆಲವು ವರ್ಗಗಳ ಸಿಟ್ಟಿಗೆ ಕಾರಣವಾಗಿದೆ.‘ಅಲ್-ವಾರ್’ ಹೆಸರಿನ ಈ ಚಿತ್ರವು ‘‘ಧರ್ಮವು ಮಾಂಸವನ್ನು ತಿನ್ನುವುದಿಲ್ಲ, ಮನುಷ್ಯರು ತಿನ್ನುತ್ತಾರೆ ’’ಎಂಬ ಟ್ಯಾಗ್‌ಲೈನ್ ಹೊಂದಿತ್ತು. ರಾಪ್‌ಚಿಕ್ ಫಿಲ್ಮ್ಸ್‌ನ ನಿರ್ಮಾಣ ಮತ್ತು ಜೈದೀಪ ಯಾದವ್ ನಿರ್ದೇಶನದ ಈ ಚಿತ್ರವು ಪೆಹ್ಲೂ ಖಾನ್ ಹತ್ಯೆ ಘಟನೆಯನ್ನು ಆಧರಿಸಿದೆ.

ಬುಲಂದ್‌ಶಹರ್ ಹಿಂಸಾಚಾರ ಮತ್ತು ಗುಂಪುಗಳಿಂದ ಥಳಿಸಿ ಹತ್ಯೆ ಘಟನೆಗಳಿಂದಾಗಿ ಸರಕಾರವು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿ ರುವಾಗಲೇ ರಾಜಸ್ಥಾನದಲ್ಲಿ ಅಕ್ರಮ ಗೋಸಾಗಣೆಯ ಆರೋಪದಲ್ಲಿ ಗುಂಪಿನಿಂದ ಪೆಹ್ಲೂ ಖಾನ್ ಹತ್ಯೆ ಕುರಿತ ಕಿರುಚಿತ್ರವು ಕಳೆದ ವಾರ ಗೋವಾದಲ್ಲಿ ನಡೆದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಪ್ರಾಯೋಜಕತ್ವದ ಭಾರತೀಯ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ)ದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ಎಫ್‌ಡಿಸಿ)ದ ‘ಫಿಲ್ಮ್ ಬಾಝಾರ್’ನಲ್ಲಿ ಪ್ರದರ್ಶಿತಗೊಂಡಿದ್ದು ಸಂಘ ಪರಿವಾರದ ಕಣ್ಣನ್ನು ಕೆಂಪಾಗಿಸಿದೆ.
ಚಿತ್ರವನ್ನು ವಿಮರ್ಶಕರು ಬಹುವಾಗಿ ಮೆಚ್ಚಿಕೊಂಡಿದ್ದರೂ ಅದು ಸಂಘ ಪರಿವಾರದ ಕೆಲವು ವರ್ಗಗಳ ಸಿಟ್ಟಿಗೆ ಕಾರಣವಾಗಿದೆ.‘ಅಲ್-ವಾರ್’ ಹೆಸರಿನ ಈ ಚಿತ್ರವು ‘‘ಧರ್ಮವು ಮಾಂಸವನ್ನು ತಿನ್ನುವುದಿಲ್ಲ, ಮನುಷ್ಯರು ತಿನ್ನುತ್ತಾರೆ ’’ಎಂಬ ಟ್ಯಾಗ್‌ಲೈನ್ ಹೊಂದಿತ್ತು.
ರಾಪ್‌ಚಿಕ್ ಫಿಲ್ಮ್ಸ್‌ನ ನಿರ್ಮಾಣ ಮತ್ತು ಜೈದೀಪ ಯಾದವ್ ನಿರ್ದೇಶನದ ಈ ಚಿತ್ರವು ಪೆಹ್ಲೂ ಖಾನ್ ಹತ್ಯೆ ಘಟನೆಯನ್ನು ಆಧರಿಸಿದೆ.
ಕಳೆದ ವರ್ಷದ ಎಪ್ರಿಲ್‌ನಲ್ಲಿ ಹರ್ಯಾಣದ ಹೈನುಗಾರ ಪೆಹ್ಲೂ ಖಾನ್(55) ಅವರು ಸಾಕಲು ದನಗಳನ್ನು ರಾಜಸ್ಥಾನದಿಂದ ಖರೀದಿಸಿ ತನ್ನೂರಿಗೆ ಸಾಗಿಸುತ್ತಿದ್ದಾಗ ಆಲ್ವಾರ್‌ನಲ್ಲಿ ವಾಹನಗಳನ್ನು ತಡೆದು ನಿಲ್ಲಿಸಿದ ತಥಾಕಥಿತ ಗೋರಕ್ಷಕರ ಗುಂಪು ಅಕ್ರಮ ಗೋ ಸಾಗಣೆಯ ಆರೋಪದಲ್ಲಿ ಅವರನ್ನು ಮಾರಣಾಂತಿಕವಾಗಿ ಥಳಿಸಿದ್ದು,ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಖಾನ್ ಹತ್ಯೆಯ ಬಳಿಕ ಅದೇ ಪ್ರದೇಶದಲ್ಲಿ ಗೋರಕ್ಷಕರು ಭಾಗಿಯಾಗಿದ್ದ ಇಂತಹುದೇ ಇನ್ನೆರಡು ಘಟನೆಗಳು ನಡೆದಿದ್ದು,ಪ್ರತಿಪಕ್ಷಗಳು ಸರಕಾರದ ವಿರುದ್ಧ ತೀವ್ರ ಟೀಕಾಪ್ರಹಾರವನ್ನು ನಡೆಸಿದ್ದವು.
ತನ್ನ ಚಿತ್ರವನ್ನು ಹರ್ಯಾಣದ ರೋಹ್ಟಕ್‌ನಲ್ಲಿ ಚಿತ್ರೀಕರಿಸಲಾಗಿದ್ದು, ತನ್ನ ಜೀವನೋಪಾಯಕ್ಕಾಗಿ ಮತ್ತು ಪ್ರತಿ ನಿಮಿಷವೂ ಜಾನುವಾರುಗಳ ಕುರಿತು ತನ್ನ ಪ್ರೀತಿಯನ್ನು ಸಾಬೀತುಗೊಳಿಸಲು ಬಡ ಮುಸ್ಲಿಮ್ ಹೈನುಗಾರನ ಹೋರಾಟಗಳನ್ನು ಆಧರಿಸಿದೆ ಎಂದು ಜೈನ್ ತಿಳಿಸಿದರು.
‘ನಾನು ಅಮೇಠಿಯಲ್ಲಿ ಜಾನುವಾರುಗಳನ್ನು ಸಾಕುತ್ತಿರುವ ಕುಟುಂಬದಲ್ಲಿ ಹುಟ್ಟಿ ಬೆಳೆದವನು ಮತ್ತು ಜಾನುವಾರುಗಳನ್ನು ಸಾಕುವ ಜನರು ಅವುಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುತ್ತಾರೆ ಎನ್ನುವ ಸತ್ಯವನ್ನು ಪ್ರಚುರಪಡಿಸುವುದು ನನ್ನ ಉದ್ದೇಶವಾಗಿದೆ. ಸಂಘ ಪರಿವಾರ ಕಾರ್ಯಕರ್ತರು ಎರಡು ಬಾರಿ ಚಿತ್ರೀಕರಣವನ್ನು ನಿಲ್ಲಿಸಿದ್ದರಿಂದ ಚಿತ್ರದ ಅಂತಿಮ ಭಾಗವನ್ನು ಪೊಲೀಸ್ ರಕ್ಷಣೆಯೊಂದಿಗೆ ಚಿತ್ರೀಕರಿಸುವಂತಾಗಿತ್ತು ಎಂದು ಅವರು ಹೇಳಿದರು.
ಚಿತ್ರಕ್ಕೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರವನ್ನು ಪಡೆಯುವುದು ಕಷ್ಟವಾಗಿದೆೆ. ಐಎಫ್‌ಎಫ್‌ಐನ ಮುಖ್ಯ ವಿಭಾಗಗಳಲ್ಲಿ ಚಿತ್ರಗಳನ್ನು ಪ್ರದರ್ಶಿಸಲು ಸೆನ್ಸಾರ್ ಸರ್ಟಿಫಿಕೇಟ್ ಅಗತ್ಯ, ಹೀಗಾಗಿಯೇ ತಾನು ಅಲ್ಲಿ ಅರ್ಜಿ ಸಲ್ಲಿಸಿರಲಿಲ್ಲ. ಕನಿಷ್ಠ ವೀಕ್ಷಣೆ ವಿಭಾಗದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದ್ದಕ್ಕೆ ತಾನು ಆಭಾರಿಯಾಗಿದ್ದೇನೆ. ಹಲವಾರು ಜನರು ಚಿತ್ರದಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದರು.
ವೀಕ್ಷಣಾ ವಿಭಾಗವು ಸಾಮಾನ್ಯವಾಗಿ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ನಿರ್ಮಾಪಕರು ಮತ್ತು ನಿರ್ದೇಶಕರು, ವಿತರಕರು ಮತ್ತು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲು ಆಸಕ್ತಿಪೂರ್ಣ ಚಿತ್ರಗಳನ್ನು ಖರೀದಿಸುವ ಫಿಲ್ಮ್ ಫೆಸ್ಟಿವಲ್ ಏಜೆಂಟ್‌ರನ್ನು ಒಳಗೊಂಡಿರುತ್ತದೆ. ಈ ವಿಭಾಗಕ್ಕಾಗಿ ಚಿತ್ರಗಳ ಆಯ್ಕೆ ಪ್ರಕ್ರಿಯೆಯು ಕಟ್ಟುನಿಟ್ಟಿನಿಂದ ಕೂಡಿಲ್ಲ. ಆದರೆ ಸೂಕ್ಷ್ಮ ವಿಷಯದ ಕುರಿತ ‘ಅಲ್-ವಾರ್’ಚಿತ್ರವು ವೀಕ್ಷಣಾ ಕೊಠಡಿಗೆ ಪ್ರವೇಶ ಪಡೆದದ್ದು ಆರೆಸ್ಸೆಸ್‌ನ ಕೆಲವು ಹಿರಿಯ ನಾಯಕರಿಗೆ ಪಥ್ಯವಾಗಿಲ್ಲ.
ವೀಕ್ಷಣಾ ಕೊಠಡಿಗಾಗಿ ಚಿತ್ರಗಳನ್ನು ಅವುಗಳ ರಚನಾತ್ಮಕತೆ ಮತ್ತು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಎನ್‌ಎಫ್‌ಡಿಸಿಯ ಅಧಿಕಾರಿಯೋರ್ವರು ತಿಳಿಸಿದರು. ತನಿಖೆಯು ಬಾಕಿಯುಳಿದಿರುವಾಗ ಇಂತಹ ಪ್ರಕರಣಗಳ ಕುರಿತ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ವಿಹಿಂಪ ವಕ್ತಾರ ಸುರೇಂದ್ರ ಜೈನ್ ಹೇಳಿದರು.
ಪ್ರಸಾರ ಭಾರತಿ, ಸಿಬಿಎಫ್‌ಸಿಯಂತಹ ಸ್ವಾಯತ್ತ ಸಂಸ್ಥೆಗಳು ಸೇರಿದಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ಸಂಸ್ಥೆಗಳ ಪ್ರಮುಖ ಹುದ್ದೆಗಳಿಗೆ ತನ್ನ ಜನರೇ ನೇಮಕಗೊಳ್ಳುವಂತೆ ಆರೆಸ್ಸೆಸ್ ನೋಡಿಕೊಳ್ಳುತ್ತಿರುವುದು ಗುಟ್ಟಿನ ವಿಷಯವೇನಲ್ಲ.
 ಸಂಘ ಪರಿವಾರದ ಉನ್ನತ ನಾಯಕತ್ವವು ಈಗಾಗಲೇ ಈ ವಿಷಯವನ್ನು ಕೈಗೆತ್ತಿಕೊಂಡಿದೆ ಎಂದು ತಿಳಿಸಿದ ಆರೆಸ್ಸೆಸ್‌ನ ಹಿರಿಯ ನಾಯಕರೋರ್ವರು, ಇಂತಹ ಚಿತ್ರಗಳು ಭಾರತವನ್ನು ಕೆಟ್ಟದಾಗಿ ಬಿಂಬಿಸುವುದರಿಂದ ಅಂತರ್‌ರಾಷ್ಟ್ರೀಯ ಅತಿಥಿಗಳಿರುವ ವೇದಿಕೆಗಳಲ್ಲಿ ಪ್ರದರ್ಶಿತವಾಗಬಾರದು ಎಂದರು.
ಉತ್ತಮ ಚಿತ್ರಗಳು ಮಾತ್ರ ವೀಕ್ಷಣಾ ಕೊಠಡಿಯಲ್ಲಿ ಪ್ರದರ್ಶನಗೊಳ್ಳುತ್ತವೆ. ಇದರೊಂದಿಗೆ ರಾಜಕೀಯವನ್ನು ಬೆರೆಸಬಾರದು ಎಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ಮಾಪಕ ಆರ್.ವಿ.ರಮಣಿ ಹೇಳಿದರು.

Writer - ಎನ್.ಕೆ.

contributor

Editor - ಎನ್.ಕೆ.

contributor

Similar News

ಜಗದಗಲ
ಜಗ ದಗಲ