ವಿಶ್ವ ದಾಖಲೆ ವೀರ ಅಜಯ್‌ಗೆ ಸಚಿನ್ ಆದರ್ಶ

Update: 2018-12-09 18:18 GMT

ಇಂದೋರ್, ಡಿ.9: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ ತನ್ನ ಚೊಚ್ಚಲ ಪಂದ್ಯದಲ್ಲೇ ಗರಿಷ್ಠ ಸ್ಕೋರ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ಮಧ್ಯಪ್ರದೇಶದ ಯುವ ದಾಂಡಿಗ ಅಜಯ್ ರೊಹೆರಾಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಆದರ್ಶ ಆಟಗಾರನಾಗಿದ್ದಾರೆ.

21ರ ಹರೆಯದ ಆರಂಭಿಕ ಆಟಗಾರ ಅಜಯ್ ಶನಿವಾರ ರಣಜಿ ಟ್ರೋಫಿ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಔಟಾಗದೆ 267 ರನ್ ಗಳಿಸಿದ್ದರು. ‘‘ನನ್ನ ಹೆಸರು ದಾಖಲೆ ಪುಸ್ತಕಕ್ಕೆ ಸೇರುತ್ತದೆ ಎಂದು ಯೋಚಿಸಿರಲಿಲ್ಲ. ನನ್ನಷ್ಟಕ್ಕೆ ನಾನು ಬ್ಯಾಟಿಂಗ್ ಮಾಡುತ್ತಾ ಹೋದೆ. ನಾನೀಗ ಮುಂದಿನ ಪಂದ್ಯಗಳಲ್ಲಿ ಹೊಸ ಆರಂಭ ಪಡೆಯಬೇಕಾಗಿದೆ. ವಿಶ್ವ ದಾಖಲೆ ಇದೀಗ ಇತಿಹಾಸ. ಕ್ರಿಕೆಟ್ ವಿಶ್ವದಲ್ಲಿ ನನಗೆ ಸಚಿನ್ ಸಾರ್ವಕಾಲಿಕ ಆದರ್ಶ ಆಟಗಾರ. ಅವರೇ ನನಗೆ ಸ್ಫೂರ್ತಿ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News