ಜ.9: ಖೇಲೊ ಇಂಡಿಯಾ ಯೂತ್ ಗೇಮ್ಸ್

Update: 2018-12-09 18:26 GMT

ಹೊಸದಿಲ್ಲಿ, ಡಿ.9: 2ನೇ ಆವೃತ್ತಿಯ ಖೇಲೊ ಇಂಡಿಯಾ ಕ್ರೀಡೆಗಳು 2019ರ ಜ.9ರಿಂದ ಪುಣೆಯಲ್ಲಿ ಆರಂಭವಾಗಲಿವೆ. ರವಿವಾರ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ಸಿಂಗ್ ರಾಥೋಡ್ ಆವೃತ್ತಿಯ ಜೆರ್ಸಿಯನ್ನು ಬಿಡುಗಡೆ ಮಾಡಿದರು. ಈ ಬಾರಿ ಕ್ರೀಡಾಕೂಟ ‘ಖೇಲೊ ಇಂಡಿಯಾ ಯೂತ್ ಗೇಮ್ಸ್; ಹೆಸರಿನಲ್ಲಿ ನಡೆಯಲಿದೆ. ಆರಂಭದ ಆವೃತ್ತಿಯ ಯಶಸ್ಸಿನಿಂದ ಪ್ರೇರಿತರಾಗಿರುವ ಸಚಿವ ರಾಥೋಡ್, ಖೇಲೊ ಇಂಡಿಯಾ ಸ್ಟಾರ್‌ಗಳಾದ ಮನು ಭಾಕರ್, ಜೆರೆಮಿ ಲಾಲ್‌ರಿನ್ನುಂಗಾ, ಸೌರಭ್ ಚೌಧರಿ, ಲಕ್ಷ ಸೇನ್, ಈಶಾ ಸಿಂಗ್, ತಬಾಬಿ ದೇವಿ ಮತ್ತು ಶ್ರೀಹರಿ ನಟರಾಜ್ ಅವರೊಂದಿಗೆ ‘‘#minuteAur    ’’ ಅಭಿಯಾನದೊಂದಿಗೆ ಕೌಂಟ್‌ಡೌನ್ ಆರಂಭಿಸಿದರು. ಪುಣೆಯ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಪಂದ್ಯಾವಳಿಗೆ ದೇಶದ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿಂದ ಅಂಡರ್-17 ಹಾಗೂ ಅಂಡರ್-21 ವಿಭಾಗಗಳ 10,000ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News