‘ಸ್ಪೇನ್ ಬಿಟ್ಟು ಬೇರೆ ಲೀಗ್ ನಲ್ಲೂ ಆಡಿ’

Update: 2018-12-11 04:53 GMT

ಮಿಲಾನ್(ಇಟಲಿ), ಡಿ.10: ಸ್ಪೇನ್ ಲೀಗ್‌ಗೆ ಸೀಮಿತಗೊಳ್ಳಬೇಡ.ಅದನ್ನು ಮೀರಿ ಇತರ ಲೀಗ್‌ಗಳಲ್ಲಿ ಭಾಗವಹಿಸಿ ಎಂದು ತಮ್ಮ ದೀರ್ಘಕಾಲದ ಪ್ರತಿಸ್ಪರ್ಧಿ ಲಿಯೊನೆಲ್ ಮೆಸ್ಸಿ ಅವರಿಗೆ ಪೋರ್ಚುಗಲ್ ಫುಟ್ಬಾಲ್ ತಂಡದ ಖ್ಯಾತ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸವಾಲು ಹಾಕಿದ್ದಾರೆೆ.

  ಇಟಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಸ್ಸಿ ಒಂದು ದಿನ ಇಟಲಿಗೆ ಬರುವುದನ್ನು ನಾನು ಇಷ್ಟಪಡುತ್ತೇನೆ. ನನ್ನ ಸವಾಲನ್ನು ಅವರು ಸ್ವೀಕರಿಸುತ್ತಾರೆ ಎಂದು ನಂಬಿದ್ದೇನೆ. ಆದರೆ ಒಂದು ವೇಳೆ ಅವರು ಅಲ್ಲಿ ಸಂತೋಷವಾಗಿದ್ದರೆ ಅದನ್ನು ನಾನು ಗೌರವಿಸುತ್ತೇನೆ ಎಂದು ರೊನಾಲ್ಡೊ ಹೇಳಿದ್ದಾರೆ. ‘ನಾನು ಇಂಗ್ಲೆಂಡ್, ಸ್ಪೇನ್, ಇಟಲಿಯಲ್ಲೂ ಆಡಿದ್ದೇನೆ; ಆದರೆ ಮೆಸ್ಸಿ ಸ್ಪೇನ್ ಬಿಟ್ಟು ತೆರಳಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

  ರೊನಾಲ್ಡೊ ಹಾಗೂ ಮೆಸ್ಸಿ ಇಬ್ಬರೂ ತಲಾ 5 ಬಾರಿ ಬ್ಯಾಲನ್ ಡಿ’ ಓರ್ ಗೌರವಕ್ಕೆ ಪಾತ್ರರಾಗುವ ಮೂಲಕ ಸುಮಾರು ಒಂದು ದಶಕದಿಂದ ಪ್ರತಿಸ್ಪರ್ಧಿಗಳಾಗಿದ್ದಾರೆ. ಆದರೆ ಈ ವರ್ಷ ಇಬ್ಬರ ಅಧಿಪತ್ಯಕ್ಕೆ ಮುದ್ರೆ ಬಿದ್ದಿದ್ದು, ವಿಶ್ವಕಪ್ ರನ್ನರ್ ಅಪ್ ಕ್ರೊಯೇಶ್ಯದ ಸ್ಟಾರ್ ಆಟಗಾರ ಲುಕಾ ಮೊಡ್ರಿಕ್ ಈ ಬಾರಿ ಬ್ಯಾಲನ್ ಡಿ’ಒರ್ ಪ್ರಶಸ್ತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News