ಮಧ್ಯ ಪ್ರದೇಶದಲ್ಲಿ: ಹಿನ್ನಡೆ ಅನುಭವಿಸಿದ 12 ಸಂಪುಟ ಸಚಿವರು

Update: 2018-12-11 15:17 GMT

ಭೋಪಾಲ,ಡಿ.11: ಮಧ್ಯ ಪ್ರದೇಶದಲ್ಲಿ ನಡೆದ ವಿಧಾನ ಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರಕಾರದ ಹನ್ನೆರಡು ಸಚಿವರು ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆಯನ್ನು ಅನುಭವಿಸಿದ್ದಾರೆ.

ದಾತಿಯ ಕ್ಷೇತ್ರದಲ್ಲಿ ಸಚಿವ ನರೋತ್ತಮ್ ಮಿಶ್ರಾ 6,200 ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದ್ದರೆ ಮೊರೆನ ಕ್ಷೇತ್ರದಲ್ಲಿ ರುಸ್ತಮ್ ಸಿಂಗ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇನ್ನು ಸಚಿವ ಬಾಲಕೃಷ್ಣ ಪಾಟಿದಾರ್ ಖರ್ಗೊನ್‌ನಲ್ಲಿ 3,792 ಮತಗಳಿಂದ ಹಿನ್ನಡೆ ಸಾಧಿಸಿದ್ದರೆ, ಭಿಂಡ್ ಜಿಲ್ಲೆಯ ಗೊಹಡ್ ಕ್ಷೇತ್ರದಲ್ಲಿ ಲಾಲ್ ಸಿಂಗ್ ಆರ್ಯಾ 6,552 ಮತಗಳಿಂದ ಹಿಂದುಳಿದಿದ್ದಾರೆ. ದಿಂಡೊರಿ ಜಿಲ್ಲೆಯ ಶಹಪುರ ಕ್ಷೇತ್ರದಲ್ಲಿ ಸಚಿವ ಓಂ ಪ್ರಕಾಶ್ ಧ್ರುವೆ 8,255 ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದ್ದರೆ ಬರ್ವಾನಿ ಜಿಲ್ಲೆಯ ಸೆಂಧ್ವ ಕ್ಷೇತ್ರದಲ್ಲಿ ಅತಂರ್ ಸಿಂಗ್ ಆರ್ಯಾ 3,626 ಮತಗಳಿಂದ ಹಿಂದಿದ್ದಾರೆ.

ಸಚಿವ ದೀಪಕ್ ಜೋಶಿ ದೆವಸ್ ಜಿಲ್ಲೆಯ ಹಟ್ಪಿಪ್ಲಿಯ ಕ್ಷೇತ್ರದಲ್ಲಿ 3,070 ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದ್ದರೆ ರಾಮ್‌ಪಾಲ್ ಸಿಂಗ್ ರೈಸೀನಾ ಜಿಲ್ಲೆಯ ಸಿಲ್ವಾನಿ ಕ್ಷೇತ್ರದಲ್ಲಿ 3,063 ಮತಗಳಿಂದ ಹಿಂದೆ ಬಿದ್ದಿದ್ದಾರೆ. ಬರ್ಹಾನ್‌ಪುರ ಕ್ಷೇತ್ರದಲ್ಲಿ ಸಚಿವೆ ಅರ್ಚನಾ ಚಿಟ್ನಿಸ್ 1,055 ಮತಗಳಿಂದ ಮತ್ತು ದಮೋಹ್ ಕ್ಷೇತ್ರದಲ್ಲಿ ರಾಜ್ಯ ವಿತ್ತ ಸಚಿವ ಜಯಂತ್ ಮಲ್ಲೆಯ 1,336 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ. ಜಬಲ್ಪುರ ಉತ್ತರ ಕ್ಷೇತ್ರದಲ್ಲಿ ಸಚಿವ ಶರದ್ ಜೈನ್ 7,958 ಮತ್ತು ಗ್ವಾಲಿಯರ್‌ನಲ್ಲಿ ಜೈಬನ್ ಸಿಂಗ್ ಪವೈಯ 5,489 ಮತಗಳ ಅಂತರದಿಂದ ಹಿಂದೆ ಬಿದ್ದಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೋದರಳಿಯ, ಮೊರೆನಾ ಬಿಜೆಪಿ ಸಂಸದ ಅನೂಪ್ ಮಿಶ್ರಾ ವಿಧಾನ ಸಭೆ ಚುನಾವಣೆಯಲ್ಲಿ ಗ್ವಾಲಿಯರ್‌ನ ಬಿತರ್ವರ್ ಕ್ಷೇತ್ರದಲ್ಲಿ 2,255 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News