ಫೋರ್ಬ್ಸ್ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸೆರೆನಾ

Update: 2018-12-11 18:55 GMT

ಲಂಡನ್, ಡಿ.11: ಅಮೆರಿಕದ 23 ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಫೋರ್ಬ್ಸ್ ಮ್ಯಾಗಝಿನ್ ಮಂಗಳವಾರ ಪ್ರಕಟಿಸಿದ ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ. 2017ರಲ್ಲಿ ಅವರು ಜಯಿಸಿದ್ದ ಸಿಂಗಲ್ಸ್ ಟ್ರೋಫಿಗಳು ಹಾಗೂ 18.1 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದ ಹಿನ್ನೆಲೆಯಲ್ಲಿ ವರ್ಷದ ಅಗ್ರ-100 ಪ್ರಭಾವಶಾಲಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 20 ಹೊಸಬರ ಪೈಕಿ ಸೆರೆನಾರನ್ನು ಸೇರಿಸಿಕೊಳ್ಳಲಾಗಿದೆ ಎಂದು ಮ್ಯಾಗಝಿನ್ ಸ್ಪಷ್ಟಪಡಿಸಿದೆ.

 ಸೆರೆನಾ ಈ ವರ್ಷ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ತಾಯಿಯಾದ ಐದು ತಿಂಗಳ ಬಳಿಕ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದರು. 37ರ ಹರೆಯದ ಸೆರೆನಾ ಸತತ ಮೂರನೇ ಬಾರಿ ಅತ್ಯಂತ ಶ್ರೀಮಂತ ಅಥ್ಲೀಟ್ ಆಗಿ ಹೊರಹೊಮ್ಮಿದ್ದರು. ವಿಶ್ವದ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ 79ನೇ ರ್ಯಾಂಕ್ ಪಡೆದಿದ್ದರು. ಈ ಪಟ್ಟಿಯಲ್ಲಿ ಶಾಂಡಾ ರಿಮ್ಸ್, ಬೆಯೊನ್ಸ್, ಪ್ರಿಯಾಂಕಾ ಚೋಪ್ರಾ ಹಾಗೂ ಆ್ಯಂಜೆಲಾ ಮೆರ್ಕೆರ್ ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News